ಕಲಾವಿದರಿಗೆ ಎದುರಾಗಿದೆ ಕೃತಕ ಬುದ್ಧಿಮತ್ತೆಯ ಸವಾಲು

Upayuktha
0


ಉಡುಪಿ: ನಮ್ಮ ಇಂದಿನ ಕಲಾವಿದರಿಗೆ ಕೃತಕ ಬುದ್ಧಿಮತ್ತೆಯ ಸವಾಲು ಇದೆ. ಇದನ್ನು ಎದುರಿಸಿಕೊಂಡು ಕಲಾವಿದರು ಹೆಚ್ಚಿನ ಸಾಧನೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ ಹೇಳಿದರು.


ಅವರು ಕುಂಜಿಬೆಟ್ಟಿನಲ್ಲಿರುವ ಚಿತ್ರ ಕಲಾವಿದ ಲಿಯಾಖತ್ ಆಲಿಯವರ ಇನಾಯತ್ ಆಟ್೯ ಗ್ಯಾಲರಿಯಲ್ಲಿ ಅರಬಿಕ್ ಕ್ಯಾಲಿಗ್ರಫಿ ಕಲಾ ಪ್ರದರ್ಶನ ಮತ್ತು ಗಾಂಧಿ ಜಯಂತಿ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಮತ್ತು ಪ್ರದರ್ಶನವನ್ನು ಉದ್ಘಾಟಿಸಿ, ಮಾತನಾಡಿದರು.

ಸ್ವಯಂ ಸ್ಪೂರ್ತಿಯಿಂದ ಮತ್ತು ಸಂತೋಷದಿಂದ ಮಾಡುವ ಕೆಲಸ ಯಾವತ್ತೂ ಭಾರವಾಗಲಾರದು. ಸರಿಯಾದ ನೀರು ಗೊಬ್ಬರ ಬೆಳಕು ಮತ್ತು ಗಾಳಿಯಿಂದ ಬೀಜ ಮೊಳಕೆಯಾಗಿ ಹೆಮ್ಮರವಾಗಿ ಬೆಳೆಯುವಂತೆ ಮಕ್ಕಳಲ್ಲಿರುವ ಕಲೆಯ ಪ್ರತಿಭೆ ಸಾಮರ್ಥ್ಯ ಅಭಿವೃದ್ಧಿಗೆ ಅವಕಾಶ ಪೋಷಣೆ ಅಗತ್ಯ ಎಂದವರು ಪೋಷಕರಿಗೆ ಕಿವಿ ಮಾತು ಹೇಳಿದರು.


ಕೆನರಾ ಬ್ಯಾಂಕ್ ಮಣಿಪಾಲ ವೃತ್ತ ಕಚೇರಿಯ ಮಹಾ ಪ್ರಬಂಧ ಎಚ್, ಕೆ ಗಂಗಾಧರ್ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ  ಶೇಕ್ ವಾಹಿದ್ ದಾವೂದ್, ಉದ್ಯಮಿ ವಿಶ್ವನಾಥ ಶೆಣೈ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಂಗಳೂರಿನ ಮಹಮ್ಮದ್ ಸಹೀಮ್, ಇಂದ್ರಾಳಿ ಮಸೀದಿಯ ಮೌಲಾನ ಮಸಿಯುಲ್ಲಾ ಖಾನ್ , ಡಾ.ಕಿರಣ್ ಆಚಾರ್ಯ, ಮಹಮ್ಮದ್ ಮೌಲಾ ಮುಂತಾದವರಿದ್ದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿ, ವಂದಿಸಿದರು.


ಕಲಾ ಪ್ರದರ್ಶನ ಆ.6ರ ವರೆಗೆ ನಡೆಯಲಿದೆ. ಅಂದು ಸಂಜೆ 4 ಗಂಟೆಗೆ ಬಹುಮಾನ ವಿತರಣೆ ನಡೆಯಲಿದೆ. ಪ್ರದರ್ಶನದಲ್ಲಿ ಲಿಯಾಖತ್ ಆಲಿಯವರ 30 ಕ್ಯಾಲಿಗ್ರಫಿ ಮತ್ತು ಗಾಂಧಿಜಿಯವರ 20 ವರ್ಣಚಿತ್ರಗಳು ಪ್ರದರ್ಶನಗೊಳ್ಳಲಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top