ಡಾ. ಪ್ರಣವಾನಂದ ಶ್ರೀ- ಉಗಾಂಡಾ ಕೇಂದ್ರ ಸಚಿವ ರೋನಾಲ್ಡ್ ನಸ್ಬುಗಾ ಜೊತೆ ಒಪ್ಪಂದ

Upayuktha
0

ನಾರಾಯಣ ಗುರು ಶಕ್ತಿಪೀಠ- ಉಗಾಂಡಾ ಸರಕಾರದ ಜೊತೆ ಸೇವಾ ಕಾರ್ಯ ವಿಸ್ತರಣೆಗೆ ಒಪ್ಪಿಗೆ




ಕಲಬುರಗಿ: ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪೂಜ್ಯ ಡಾಕ್ಟರ್ ಪ್ರಣವಾನಂದ ಸ್ವಾಮೀಜಿ ಅವರು ವಿದೇಶಗಳಲ್ಲಿ ಸೇವ ಕಾರ್ಯ ಕೈಗೊಳ್ಳಲು ಆರಂಭಿಸಿದ ಸೋಲ್ ವೇವ್ ಚಾರಿಟೇಬಲ್ ಟ್ರಸ್ಟ್ ಮತ್ತು ಆಫ್ರಿಕಾ ದೇಶದ ಉಗಾಂಡಾ ಕೇಂದ್ರ ಸಚಿವ ರೋನಾಲ್ಡ್ ನಸ್ಬುಗಾ ಜೊತೆ ಸೇವಾ ಕಾರ್ಯ ಒಪ್ಪಂದಕ್ಕೆ ಸಹಿ ಹಾಕಲಾಯಿತು.


ಉಗಾಂಡಾ ದೇಶದ ಪ್ರವಾಸದಲ್ಲಿರುವ ಡಾ. ಪ್ರಣವಾನಂದ ಶ್ರೀಗಳು ಆ ದೇಶದ ವಿವಿಧ ಸೇವಾ ಸಂಸ್ಥೆಗಳ ಜೊತೆ ಸೋಲ್ ವೇವ್ ಚಾರಿಟೇಬಲ್ ಸಂಸ್ಥೆಯು ಜೊತೆಯಾಗಿ ಶಿಕ್ಷಣ ಆರೋಗ್ಯ ಬಡಮಕ್ಕಳ ಕೌಶಲ್ಯ ತರಬೇತಿಗಳ ಕುರಿತಾದ ವಿಸ್ತೃತವಾದ ಕಾರ್ಯಕ್ರಮಗಳಿಗೆ ಇತ್ತೀಚೆಗೆ ಒಪ್ಪಂದ ಮಾಡಿಕೊಳ್ಳಲಾಯಿತು. ಉಗಾಂಡಾ ಸರಕಾರದ ಕೇಂದ್ರ ಸಚಿವರಾದ ರೋನಾಲ್ಡ್ ನಸ್ಬುಗಾ ಜೊತೆ ಒಪ್ಪಂದ ಮಾಡಿಕೊಳ್ಳಲಾ ಯಿತು. ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಉಸ್ತುವಾರಿ ಪ್ರಸಾದ್ ಬಹರೇನ್ ಒಪ್ಪಂದದ ವೇಳೆ ಹಾಜರಿದ್ದರು.


ಆಫ್ರಿಕಾದ ವಿವಿಧ ರಾಜ್ಯಗಳಲ್ಲಿ ಸೋಲ್ ವೇವ್ ಸಂಸ್ಥೆ ಕೈಗೊಳ್ಳುವ ಸೇವಾ ಕಾರ್ಯಗಳಿಗೆ ಪೂರ್ಣ ರೀತಿಯಲ್ಲಿ ಸರಕಾರದಿಂದ ಸಹಕಾರ ನೀಡಲಾಗುವುದು ಬಡ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಸರಕಾರವು ಎಲ್ಲಾ ಹಂತದ ನೆರವು ವಿಸ್ತರಿಸಲಿದೆ ಎಂದು ಕಾರ್ಯದರ್ಶಿ ರೋನಾಲ್ಡ್ ನಸ್ಬುಗಾ ಒಪ್ಪಂದದ ನಂತರ ತಿಳಿಸಿದರು. ಬಳಿಕ ಡಾ. ಪ್ರಣಮಾನಂದ ಶ್ರೀಗಳು ಉಗಾಂಡಾ ಪಾರ್ಲಿಮೆಂಟಿಗೆ ಭೇಟಿ ನೀಡಿ ಕೇಂದ್ರ ಸಚಿವರ ಜೊತೆ ವಿಸ್ತೃತವಾದ ಚರ್ಚೆ ನಡೆಸಿದರು.


ಉಗಾಂಡಾದಲ್ಲಿರುವ ಕನ್ನಡಿಗರು ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಪ್ರಸ್ತಾಪದ ಬಗ್ಗೆ ಮಾತುಕತೆ ನಡೆಸಿದರು. ಸೋಲ್ ವೇವ್ ಮತ್ತು ಇತರ ಎನ್‌ಜಿಓ ಸಂಸ್ಥೆಗಳ ಪಾಲುದಾರಿಕೆಯ ಕುರಿತಾಗಿ ಸಚಿವರ ಜೊತೆ ಎನ್‌ಜಿಓ ನಿರ್ದೇಶಕರುಗಳು ವಿವರವಾದ ಮಾತುಕತೆ ನಡೆಸಿ ಕೈಗೊಳ್ಳುವ ಯೋಜನೆಗಳ ಬಗ್ಗೆ ಚರ್ಚಿಸಿದರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top