ಮನೆ-ಮನ ಬೆಳಗುವ ಹಬ್ಬ

Upayuktha
0


ದೀಪಾವಳಿ ಹಿಂದೂ ಹಬ್ಬವಾಗಿದ್ದು ಇದನ್ನು ಬೆಳಕಿನ ಹಬ್ಬ ಎಂದು ಕರೆಯಲಾಗುತ್ತದೆ. ಈ ಹಬ್ಬವು ಸಾಮಾನ್ಯವಾಗಿ ಐದು ದಿನಗಳವರೆಗೆ ಇರುತ್ತದೆ. ಮತ್ತು ಇದು ಹಿಂದುಗಳ ಪ್ರಕಾರ ಕಾರ್ತಿಕ ಮಾಸದಲ್ಲಿ ಆಚರಿಸಲಾಗುವ ಹಬ್ಬವಾಗಿದೆ. ಇದು ಬೆಳಕಿನ ಹಬ್ಬವಾಗಿದ್ದು, ಅಂಧಕಾರದ ಮೇಲೆ ಬೆಳಕಿನ ಜಯವನ್ನು ಸೂಚಿಸುತ್ತದೆ.  ದೀಪಾವಳಿ ಹಬ್ಬವು ನಮ್ಮ ಜೀವನದಲ್ಲಿನ ಕತ್ತಲೆಯನ್ನು ದೂರ ಮಾಡಿ ಜ್ಞಾನ, ಶಾಂತಿ ಮತ್ತು ಸತ್ಯದ ಬೆಳಕನ್ನು ಹರಡುವ ಸಂದೇಶ ನೀಡುತ್ತದೆ. 


ದೀಪಾವಳಿ ಹಬ್ಬ ಬಂದರೆ ಸಾಕು ಮಕ್ಕಳಿಗೆ, ಹಿರಿಯರಿಗೆ ಅತ್ಯಂತ ಸಂಭ್ರಮದ ದಿನ ಆಗಿರುತ್ತದೆ. ಆ ಶುಭ ದಿನದಂದು ಮನೆಯನ್ನು ಸ್ವಚ್ಛಗೊಳಿಸಿ, ದೀಪಗಳಿಂದ ಅಲಂಕರಿಸಿ, ಬಣ್ಣದ ರಂಗೋಲಿ, ಮಿಠಾಯಿ ಮತ್ತು ವಿವಿಧ ರೀತಿಯ ತಿಂಡಿಗಳನ್ನು ತಯಾರಿಸುತ್ತಾರೆ. ಆ ದಿನ ಹೊಸ ಬಟ್ಟೆಯನ್ನು ಹಾಕಿ ಅಕ್ಕ ಪಕ್ಕದ ಮನೆಯವರು ಒಂದೇ ಮನೆಯಲ್ಲಿ ಸೇರಿ, ಬಂಧು ಬಳಗದವರು ಒಬ್ಬರಿಗೊಬ್ಬರು ಶುಭಾಶಯವನ್ನು ಕೋರುತ್ತಾ ಎಲ್ಲರೂ ಒಟ್ಟು ಸೇರಿ ಸಂಭ್ರಮದಿಂದ ದೀಪವನ್ನು ಬೆಳಗಿಸಿ ಪಟಾಕಿಗಳನ್ನು ಸಿಡಿಸುತ್ತಾ ಆಚರಿಸುತ್ತಾರೆ.


ಕುಟುಂಬಗಳು ಮತ್ತು ಸ್ನೇಹಿತರ ನಡುವೆ ಬಲವಾದ ಬಂಧಗಳನ್ನು ಬಲಪಡಿಸಲು ಹಬ್ಬಗಳನ್ನು ಮಾಡಲಾಗಿದೆ. ಇದಕ್ಕೆ ದೀಪಾವಳಿ ಅತ್ಯುತ್ತಮ ಉದಾಹರಣೆಯಾಗಿದೆ. ಕೆಲಸಕ್ಕೆಂದು ಮನೆ ಬಿಟ್ಟು ಬೇರೆ ಊರಿಗೆ ಹೋದಂತಹ ವ್ಯಕ್ತಿಗಳು ದೀಪಾವಳಿಯ ದಿವಸದಂದು ತಮ್ಮೂರಿಗೆ ಬಂದು ತಮ್ಮ ಕುಟುಂಬದೊಂದಿಗೆ ಈ ಹಬ್ಬವನ್ನು ಆಚರಿಸುತ್ತಾರೆ. ಇದು ರಾಷ್ಟ್ರೀಯ ರಜಾದಿನವಾಗಿದೆ. ಆ ದಿನ ರಾತ್ರಿ ಮನೆಯ ಸುತ್ತಲೂ ದೀಪಗಳನ್ನು ಹಚ್ಚಿ, ಪಟಾಕಿಗಳ ಸುರಿಮಳೆಯೊಂದಿಗೆ ಆಚರಿಸುತ್ತಾರೆ.


ಪಟಾಕಿಗಳು ನಮ್ಮ ಸುತ್ತಮುತ್ತ ವಾಸಿಸುವ ಪ್ರಾಣಿಗಳಿಗೆ ಹಾನಿ ಮಾಡುತ್ತದೆ. ಇತರರ ಸುರಕ್ಷತೆಗೆ ಧಕ್ಕೆಯಾಗದಂತೆ ನಾವು ಜವಾಬ್ದಾರಿಯುತವಾಗಿ ಹಬ್ಬವನ್ನು ಆಚರಿಸಬೇಕು.

 



-ಧೀರಜ್ ಪಂಚಮ

ಪ್ರಥಮ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top