85 ಕ್ರೀಡಾ ಮೂಲಸೌಕರ್ಯ ನಿರ್ಮಾಣ: ಕರ್ನಾಟಕದಲ್ಲಿ ಮೈಲಿಗಲ್ಲು ಸಾಧಿಸಿದ ಗ್ಯಾಲಂಟ್ ಸ್ಪೋರ್ಟ್ಸ್‌

Upayuktha
0



ಬೆಂಗಳೂರು: ಗ್ಯಾಲಂಟ್ ಸ್ಪೋರ್ಟ್ಸ್ ಕರ್ನಾಟಕದಲ್ಲಿ 85 ವಿಶ್ವಮಟ್ಟದ ಕ್ರೀಡಾ ಮೂಲಸೌಕರ್ಯ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಫುಟ್‌ಬಾಲ್, ಕ್ರಿಕೆಟ್ ಹಾಗೂ ಮಲ್ಟಿ-ಸ್ಪೋರ್ಟ್ ಕೋರ್ಟ್‌ಗಳನ್ನು ಒಳಗೊಂಡಿರುವ ಈ ಯೋಜನೆಗಳು ಕ್ರೈಸ್ಟ್ ಯೂನಿವರ್ಸಿಟಿ, ಅಜೀಮ್ ಪ್ರೇಮ್ಜಿ ಯೂನಿವರ್ಸಿಟಿ, ಆರ್ಮಿ ಪಬ್ಲಿಕ್ ಸ್ಕೂಲ್, ಬೆಂಗಳೂರು ಇಂಟರ್‌ನ್ಯಾಷನಲ್ ಸ್ಕೂಲ್ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅಳವಡಿಸಲಾಗಿದೆ.

“ಕರ್ನಾಟಕವು ಸದಾ ಭಾರತದ ಕ್ರೀಡಾ ಮುಂಚೂಣಿಯಲ್ಲಿದ್ದು, ಯುವ ಪ್ರತಿಭೆಗಳು ದೊಡ್ಡ ಕನಸು ಕಾಣಲು ಮತ್ತು ಸಾಧಿಸಲು ವಿಶ್ವಮಟ್ಟದ ಸೌಲಭ್ಯ ಒದಗಿಸುವುದು ನಮ್ಮ ಉದ್ದೇಶವಾಗಿದೆ ಎಂದು ಗ್ಯಾಲಂಟ್ ಸ್ಪೋರ್ಟ್ಸ್ ಸಂಸ್ಥಾಪಕ ಹಾಗೂ ಸಿಇಒ ನಸೀರ್ ಅಲಿ ಹೇಳಿದ್ದಾರೆ.


ಪೂರ್ಣಗೊಂಡ 85 ಯೋಜನೆಗಳು ಪ್ರಸಿದ್ಧ ಶಾಲೆಗಳು ಪ್ರಮುಖ ವಿಶ್ವವಿದ್ಯಾಲಯಗಳು, ಅಗ್ರಗಣ್ಯ ಅಕಾಡೆಮಿಗಳು ಹಾಗೂ ವಸತಿ ಸಮುದಾಯಗಳನ್ನು ಒಳಗೊಂಡಿವೆ. ಪ್ರಮುಖ ಸ್ಥಾಪನೆಗಳಲ್ಲಿ ಕ್ರೈಸ್ಟ್ ಯೂನಿವರ್ಸಿಟಿ, ಅಜೀಮ್ ಪ್ರೇಮ್ಜಿ ಯೂನಿವರ್ಸಿಟಿ, ಆರ್ಮಿ ಪಬ್ಲಿಕ್ ಸ್ಕೂಲ್, ಬೆಂಗಳೂರು ಇಂಟರ್‌ನ್ಯಾಷನಲ್ ಸ್ಕೂಲ್, ಡಿ ಪಾಲ್ ಇಂಟರ್‌ನ್ಯಾಷನಲ್ ಸ್ಕೂಲ್, ಟ್ರಿಮಿಸ್ ಸ್ಕೂಲ್‌ಗಳು ಮತ್ತು ಟ್ರಿಯೊ ವರ್ಲ್ಡ್ ಅಕಾಡೆಮಿ ಸೇರಿವೆ. ಈ ಸೌಲಭ್ಯಗಳು ಫುಟ್‌ಬಾಲ್, ಕ್ರಿಕೆಟ್ ಹಾಗೂ ಮಲ್ಟಿ-ಸ್ಪೋರ್ಟ್ ಅಖಾಡಗಳನ್ನು ಒಳಗೊಂಡಿದ್ದು, ಕ್ರೀಡಾಪಟುಗಳಿಗೆ ಅಂತರರಾಷ್ಟ್ರೀಯ ಮಟ್ಟದ ಸರ್ಫೇಸ್‌ಗಳಲ್ಲಿ ತರಬೇತಿ ಪಡೆಯುವ ಅವಕಾಶ ಒದಗಿಸುತ್ತವೆ.


ಕರ್ನಾಟಕದಲ್ಲಿ 85 ಮತ್ತು ದಕ್ಷಿಣ ಭಾರತದಲ್ಲಿ 100 ಕ್ಕೂ ಹೆಚ್ಚು ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಗ್ಯಾಲಂಟ್ ಸ್ಪೋರ್ಟ್ಸ್, ಬಲಿಷ್ಠ ಕ್ರೀಡಾ ಸಂಸ್ಕೃತಿಯನ್ನು ಬೆಳೆಸುವ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top