ಡ್ರಗ್ಸ್ ಮಾಫಿಯಾಗಳು ಯುವಜನರನ್ನುತನ್ನತ್ತ ಸೆಳೆಯುತ್ತಿದೆ: ಡಾ. ಸುಲೇಖಾ ವರದರಾಜ್

Upayuktha
0


ಪುತ್ತೂರು: 'ಪ್ರಸ್ತುತ ದಿನಗಳಲ್ಲಿ ಮಕ್ಕಳು ಮತ್ತುಯುವಜನರು ಹೆಚ್ಚಾಗಿ ಡ್ರಗ್ಸ್ ಚಟಕ್ಕೆ ಬಲಿಯಾಗುತ್ತಿದ್ದಾರೆ. ಕೆಲವೊಮ್ಮೆ ಮಾದಕ ವ್ಯಸನಗಳು ಅನುವಂಶಿಕವಾಗಿ ಬರುವ ಸಾಧ್ಯತೆಯೂ ಇದೆ.  ಸಾಮಾಜಿಕ ಜಾಲತಾಣಗಳು ಸಹ ಇತ್ತೀಚೆಗೆಇಂತಹ ವ್ಯಸನಕ್ಕೆ ಮಕ್ಕಳನ್ನು ಹೆಚ್ಚಾಗಿ ಗುರಿಯಾಗಿಸುತ್ತಿದೆ. ನಾವು ಇದಕ್ಕೆ ನಮ್ಮತನವನ್ನು ಬಿಟ್ಟುಕೊಡದೆ ಪ್ರತಿರೋಧ ಒಡ್ಡಬೇಕು. ಹಾಗೆ ಆಧ್ಯಾತ್ಮಿಕವಾಗಿ ಬೆರೆಯುವುದರಿಂದ ಮಾದಕ ವ್ಯಸನವನ್ನು ಹಿಡಿತಕ್ಕೆ ತರಬಹುದು " ಎಂದು ಮಕ್ಕಳ ಮನೋ ತಜ್ಞೆ ಡಾ. ಸುಲೇಖಾ ವರದರಾಜ್ ಹೇಳಿದರು.


ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಪುತ್ತೂರು ಇದರ ಎನ್ಎಸ್ಎಸ್, ಎನ್ ಸಿಸಿ, ರೋವರ್ ಮತ್ತು ರೇಜರ್ಸ್, ರೆಡ್‍ಕ್ರಾಸ್‍ ಘಟಕ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ನಡೆದ ' ಮಾದಕ ವಸ್ತು ವ್ಯಸನ ವಿರೋಧಿ ಜಾಗೃತಿ ' ಎಂಬ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.


ಕಾರ್ಯಕ್ರಮದಲ್ಲಿಅಧ್ಯಕ್ಷೀಯ ನುಡಿಗಳನ್ನಾಡಿದ ಡಾ. ಶ್ರೀಧರ್ ನಾಯ್ಕ್ " ಯುವಜನತೆ ಮಾದಕ ವ್ಯಸನಗಳಿಗೆ ತುತ್ತಾಗುತ್ತಿದ್ದುಇದರಿಂದ ಋಣಾತ್ಮಕ ಚಟುವಟಿಕೆಗಳು ಸಮಾಜದಲ್ಲಿ ಹೆಚ್ಚುತ್ತಿದೆ. ಇವನ್ನೆಲ್ಲ ತಡೆಗಟ್ಟಲು ಮೊದಲು ನಮ್ಮ ಸಂಸ್ಕೃತಿಯನ್ನು ತಿಳಿದುಕೊಂಡು ನಮ್ಮ ದೇಶದ ಭದ್ರ ಬುನಾದಿಗೆ ಯುವಜನತೆ ಕೊಡುಗೆ ನೀಡಬೇಕಿದೆ " ಎಂದು ಹೇಳಿದರು.


ಕಾರ್ಯಕ್ರಮವನ್ನುಎನ್ಎಸ್ಎಸ್ ಸ್ವಯಂ ಸೇವಕಿಯರಾದ ಗ್ರೀಷ್ಮ ಪ್ರಾರ್ಥಿಸಿ, ಕೆ. ಕೃತಿಕಾ ಸ್ವಾಗತಿಸಿ, ಯಕ್ಷಿತಾ ವಂದಿಸಿ, ಚೈತನ್ಯ ನಿರೂಪಿಸಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top