ಸುರತ್ಕಲ್: ವೇಗವಾಗಿ ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಯ ಪರಿಕಲ್ಪನೆಯ ಬಗ್ಗೆ ಪದವಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದರಿಂದ ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನಗಳನ್ನು ಮತ್ತು ಕ್ರಿಯಾತ್ಮಕ ಉದ್ಯೋಗ ಮಾರುಕಟ್ಟೆಯ ಸ್ಮರ್ಧಾತ್ಮಕ ಅಂಶಗಳನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ ಎಂದು ಮಂಗಳೂರು ವಿ.ವಿ.ಯ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ. ಯತೀಶ್ ಕುಮಾರ್ ನುಡಿದರು.
ಅವರು ಹಿಂದು ವಿದ್ಯಾದಾಯಿನೀ ಸಂಘ (ರಿ.), ಸುರತ್ಕಲ್‌ನ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜು, ಸುರತ್ಕಲ್‌ನ ವಾಣಿಜ್ಯ ಮತ್ತು ವಾಣಿಜ್ಯ ವ್ಯವಹಾರ ಅಧ್ಯಯನ ಸಂಘ ಹಾಗೂ ವಾಣಿಜ್ಯೋದಮ ಅಭಿವೃದ್ಧಿ ಕೋಶಗಳ 2025-26ನೇ ಶೈಕ್ಷಣಿಕ ವರ್ಷದ ಕಾರ್ಯಚುಟವಟಿಕೆಗಳನ್ನು ಉದ್ಘಾಟಿಸಿ ಉದ್ಯೋಗ ಮಾರುಕಟ್ಟೆಯ ಪ್ರಸ್ತುತ ಪ್ರವೃತ್ತಿ ಎಂಬ ವಿಷಯದ ಬಗ್ಗೆ ಮಾಹಿತಿ ನೀಡುತ್ತಾ ಮಾತನಾಡಿದರು.
ಮುಖ್ಯ ಅತಿಥಿ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ರಮೇಶ್ ಭಟ್ ಎಸ್.ಜಿ. ಮಾತನಾಡಿ ಕೇವಲ ಪಠ್ಯಗಳ ವ್ಯಾಸಂಗಕ್ಕೆ ವಿದ್ಯಾರ್ಥಿಗಳು ಸೀಮಿತವಾಗಿರದೆ ಮಾರುಕಟ್ಟೆ ಕ್ಷೇತ್ರ, ಜೌದ್ಯೋಗಿಕ ಕ್ಷೇತ್ರಗಳ ಬಗ್ಗೆಯೂ ಜ್ಞಾನವನ್ನು ಸಂಪಾದಿಸಿದಕೊಳ್ಳುವುದು ಮುಂದಿನ ಔದ್ಯೋಗಿಕ ಬದುಕಿಗೆ ಸಹಾಯಕವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಹರೀಶ ಆಚಾರ್ಯ ಪಿ. ಮಾತನಾಡಿ ಕಾಲೇಜಿನ ವಿವಿಧ ಸಂಘಗಳು ಅನೇಕ ಅತಿಥಿ ಉಪನ್ಯಾಸಗಳನ್ನು, ತರಬೇತಿ ಶಿಬಿರಗಳನ್ನು ಮತ್ತು ಕಾರ್ಯಾಗಾರಗಳನ್ನು ನಿರಂತರವಾಗಿ ಆಯೋಜಿಸಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪ್ರಯತ್ನಿಸುತ್ತಿದೆ ಎಂದರು.
ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ ಸೌಮ್ಯ ಪ್ರವೀಣ್ ಕೆ. ಸಿ.ಎಂ.ಎ ಕೋರ್ಸುಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು, ಮಂಗಳೂರು ವಿ.ವಿ.ಯ ಬಿ.ಕಾಂ ಮತ್ತು ಬಿ.ಬಿ.ಎ. ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಧನ್ಯ ಕುಮಾರ್ ವೆಂಕಣ್ಣವರ್, ವಾಣಿಜ್ಯ ಮತ್ತು ವ್ಯವಹಾರ ಅಧ್ಯಯನ ಶಾಸ್ತ್ರ ವಿಭಾಗದ ಡೀನ್ ಡಾ. ಗಣೇಶ ಆಚಾರ್ಯ, ವ್ಯವಹಾರ ಅಧ್ಯಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಶ್ರೀದೇವಿ, ವಾಣಿಜ್ಯ ಮತ್ತು ವ್ಯವಹಾರ ಅಧ್ಯಯನ ಸಂಘದ ಸಂಯೋಜಕರಾದ ಡಾ. ಪ್ರತೀಕ್ಷಾ ಮತ್ತು ಅಪೇಕ್ಷ ಭಂಡಾರಿ, ವಾಣಿಜ್ಯೋದ್ಯಮ ಅಭಿವೃದ್ಧಿ ಕೋಶದ ಸಂಯೋಜಕಿ ಪುನೀತಾ ಆರ್. ಉಪಸ್ಥಿತರಿದ್ದರು. ಸುಶ್ಮಿತಾ ಸ್ವಾಗತಿಸಿ ಖುಷಿ ವಂದಿಸಿದರು. ಭೂಮಿಕಾ ಅತಿಥಿಗಳನ್ನು ಪರಿಚಯಿಸಿದರು. ದಿಶಾ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


