ಉಜಿರೆ: ವಿದ್ಯಾರ್ಥಿಗಳ ಬದುಕಿನ ಅಂಧಕಾರವನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ಪ್ರಜ್ವಲಿಸುವ ಪ್ರತಿಯೊಬ್ಬ ಶಿಕ್ಷಕರಲ್ಲು ದೇವರನ್ನು ಕಾಣಬಹುದು ಎಂದು ಉಜಿರೆಯ ಶ್ರೀ ಧ.ಮಂ ಕಾಲೇಜಿನ ಆಡಳಿತ ಕುಲಸಚಿವ ಡಾ.ಶ್ರೀಧರ ಎನ್. ಭಟ್ಟ ಅಭಿಪ್ರಾಯಪಟ್ಟರು.
ಉಜಿರೆಯ ಶ್ರೀ ಧ.ಮಂ.ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಅಯೋಜಿಸಿಲಾಗಿದ್ದ "ಗುರುಸ್ಮೃತಿ 2025" ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಾಸಿಸುವ ಮನೆಯೊಳಗೆ ಧೂಳು,ಕಸ ಕಡ್ಡಿಗಳು ಬಂದಾಗ ಯಾವರೀತಿ ಶುದ್ಧಿಗೊಳಿಸುತ್ತೇವೊ ಅದೇ ರೀತಿ ವಿದ್ಯಾರ್ಥಿಗಳ ಬದುಕಿನೆಡೆಗೆ ಹರಿದು ಬರುವ ಅನವಶ್ಯಕ ವಿಚಾರಗಳನ್ನ ಶುಚಿಗೊಳಿಸಿ ಸಕಾರಾತ್ಮಕ ವಿಚಾರಗಳನ್ನ ಬಿತ್ತುವ ಜವಾಬ್ದಾರಿಯನ್ನು ಶಿಕ್ಷಕರು ಹೊರುತ್ತಾರೆ. "ಗು" ಎಂದರೆ ಅಂಧಕಾರ,"ರು"ಎಂದರೆ ಅಂಧಕಾರವನ್ನು ಹೋಗಲಾಡಿಸುವುದು ಎಂದರ್ಥ. ಹೀಗೆ ಪದವೇ ಸೂಚಿಸುವಂತೆ ಗುರು ಎಂದರೆ ವಿದ್ಯಾರ್ಥಿಗಳನ್ನು ಅಂಧಾಕಾರದಿಂದ ಬೆಳಕಿನೆಡೆಗೆ ಕರೆದೊಯ್ಯುವವರು ಎಂದು ಹೇಳಿದರು.
ಶಿಕ್ಷಕರು ಕೇವಲ ಪಠ್ಯದ ವಿಚಾರಗಳಿಗೆ ಸೀಮಿತವಾಗದೆ, ವಿದ್ಯಾರ್ಥಿಗಳು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲು ಸದಾ ಪ್ರೇರೇಪಿಸಬೇಕು. ಕುತೂಹಲ, ಶ್ರಧ್ದೆ ಮುಂತಾದವುಗಳನ್ನ ವಿದ್ಯಾರ್ಥಿಗಳು ಮೈಗೂಡಿಸಿಕೊಂಡು ಶಿಕ್ಷಕರ ಮಾರ್ಗದರ್ಶನದಲ್ಲಿ ಮುನ್ನಡೆದು ಸಮಾಜದ ಸತ್ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದವರು ಕಿವಿ ಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕರ ದಿನಾಚರಣೆಯ ವಿಶೇಷ ದಿನದಂದು ಶಿಕ್ಷಕರು ತಮಗೆ ಒದಗಿ ಬಂದಿರುವ ಅಮುಲ್ಯವಾದ ಗುರು ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಶ್ರಮಿಸಬೇಕು. ಗುರುವಿನ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ನಮ್ಮ ದೇಶದ ಅಮೂಲ್ಯ ಸಂಸ್ಕೃತಿ ಹಾಗು ಆಚಾರಗಳನ್ನ ತಿಳಿದು ಅದನ್ನ ಉಳಿಸುವಲ್ಲಿ ಗಮನಹರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲೆ ಕೆ. ಪಿ ನಂದಕುಮಾರಿ, ಪರೀಕ್ಷಾ0ಗ ಕುಲಸಚಿವ ಗಣೇಶ್ ನಾಯಕ್, ಸ್ನಾತಕೋತ್ತರ ವಿಭಾಗದ ಡೀನ್ ಸೌಮ್ಯ ಬಿ. ಪಿ ಮತ್ತು ವಾಣಿಜ್ಯ ನಿಕಾಯದ ಡೀನ್ ಶಕುಂತಲಾ ಹಾಗೂ ಅಧ್ಯಾಪಕವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮತ್ತು ದೀಪ ಬೆಳಗುವ ಮೂಲಕ ಉದ್ಘಾಟಿಸಲಾಯಿತು. ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಅನ್ವಿಠಾ ಸೇರಾ ಶಿಕ್ಷಕರ ಬಗೆಗಿನ ಅನಿಸಿಕೆ ಹಂಚಿಕೊಂಡರು.
ತೃತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸೌಖ್ಯ ಜೈನ್ ಸ್ವಾಗತಿಸಿ, ಸ್ಪಂದನ ವಂದಿಸಿದರು. ತೃತೀಯ ಬಿ.ಸಿ.ಎ ವಿದ್ಯಾರ್ಥಿನಿ ಶ್ವೇತಾ ಕೆ ಜಿ ಮತ್ತು ಬಿ.ವೋಕ್ ವಿದ್ಯಾರ್ಥಿನಿ ಸಮ್ಯ ಕಾರ್ಯಕ್ರಮ ನಿರೂಪಿಸಿದರು. ಚಂದನಾ ಮತ್ತು ಬಳಗದವರು ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ವಿವಿಧ ಮನರಂಜನಾತ್ಮಕ ಆಟಗಳನ್ನು ಆಯೋಜಿಸಲಾಗಿತ್ತು.ಕಾಲೇಜಿನ ವಿವಿಧ ವಿಭಾಗದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ