ಮಂಗಳೂರು: ಬದುಕಿನಲ್ಲಿ ಭರವಸೆಯೊಂದಿಗೆ ನಿರ್ದಿಷ್ಟ ಗುರಿಯನ್ನು ಇರಿಸಿಕೊಂಡು ಮುನ್ನಡೆಯಬೇಕು. ಸಂಪಾದನೆಗಿಂತ ಸಾಧನೆ, ಸಂತಸ, ಸಂತೃಪ್ತಿ ಮುಖ್ಯವಾಗಿದ್ದು ಸಾಹಿತ್ಯ ಜೀವನಕ್ಕೆ ಅಗತ್ಯವಾದ ಮಾನವೀಯ ಮೌಲ್ಯಗಳನ್ನು ತಿಳಿಸಿ ಕೊಡುತ್ತವೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ಅಧ್ಯಕ್ಷರು ಮತ್ತು ಗಿಳಿವಿಂಡು (ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗಳ ಒಕ್ಕೂಟ) ಅಧ್ಯಕ್ಷ ಪ್ರೊ. ಶಿವರಾಮ ಶೆಟ್ಟಿ ಬಿ. ನುಡಿದರು.
ಅವರು ಮಂಗಳೂರು ಬೆಸೆಂಟ್ ನ್ಯಾಷನಲ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಗಿಳಿವಿಂಡು ಯಾನ, ಮರಳಿ ಮನೆಗೆ, ಬಾರಿಸು ಕನ್ನಡ ಡಿಂಡಿಮವ- ಅರಿವಿನ ವಿಸ್ತರಣೆ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಗಿಳಿವಿಂಡು ಸದಸ್ಯ ಮತ್ತು ಗೋವಿಂದ ದಾಸ ಕಾಲೇಜು ಸುರತ್ಕಲ್‌ನ ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಮಾತನಾಡಿ, ಗಿಳಿವಿಂಡು ಯಾನ ಹಿರಿಯ ತಲೆಮಾರಿನ ಜ್ಞಾನ ಪರಂಪರೆಯನ್ನು ಹೊಸ ತಲೆಮಾರಿಗೆ ವಿಸ್ತರಿಸುವ ಕಾಯಕವಾಗಿದ್ದು ಕನ್ನಡ ಭಾಷೆ, ಸಾಹಿತ್ಯ ಮತ್ತು ಮಾನವಿಕ ವಿಭಾಗಗಳ ಸಾಧ್ಯತೆ ಹಾಗೂ ಅವಕಾಶಗಳನ್ನು ಇದು ತೆರೆದಿಡುತ್ತದೆ ಎಂದರು.
ಮಂಗಳೂರು ವಿಶ್ವವಿದ್ಯಾಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರು ಮತ್ತು ಗಿಳಿವಿಂಡಿನ ಕಾರ್ಯದರ್ಶಿ ಪ್ರೊ. ನಾಗಪ್ಪ ಗೌಡ ಮಾತನಾಡಿ, ಕನ್ನಡ ಭಾಷೆ ಹಿರಿಯ ಸಾಹಿತ್ಯ ಪರಂಪರೆಯನ್ನು ಹೊಂದಿದ್ದು, ಮಾನವೀಯತೆ, ಸೌಹಾರ್ದ ಮತ್ತು ಸಮಾನತೆಯ ಸಮಾಜ ನಿರ್ಮಾಣದ ಅವಶ್ಯಕತೆಗಳನ್ನು ಪ್ರತಿಪಾದಿಸುತ್ತ ಬಂದಿದೆ. ಕನ್ನಡದ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳನ್ನು ಪಡೆದಿದ್ದಾರೆ ಎಂದರು.
ಕಾಲೇಜು ನ ಪ್ರಾಂಶುಪಾಲ ಡಾ. ನಾಯಕ್ ರೂಪ ಸಿಂಗ್ ಸ್ವಾಗತಿಸಿ ಶ್ರೇಷ್ಠ ಮೌಲ್ಯಗಳ ಅರಿವಿಗೆ ಭಾಷಾ ಅಧ್ಯಯನದ ಅವಶ್ಯಕತೆ ಪ್ರಸ್ತುತ ಸಂದರ್ಭದಲ್ಲಿ ಅತಿ ಮುಖ್ಯ ವಾಗಿದ್ದು ಗಿಳಿವಿಂಡು ಯಾನ ಉತ್ತಮ ಯೋಜನೆಯಾಗಿದೆ ಎಂದರು.
ಕನ್ನಡ ಪ್ರಾಧ್ಯಾಪಕ ಮತ್ತು ಗಿಳಿವಿಂಡಿನ ಸದಸ್ಯ ರಘು ಇಡ್ಕಿದು ವಂದಿಸಿದರು. ಪ್ರಾಧ್ಯಾಪಕಿ ಮತ್ತು ಗಿಳಿವಿಂಡು ಸದಸ್ಯೆ ಸುಶೀಲ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಅನನ್ಯ, ರಶ್ಮಿತಾ ಮತ್ತು ಅಮೃತ ಪ್ರಾರ್ಥನಾ ಗೀತೆ ಹಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


