ನಾ ಕಂಡ ದೇವತೆ- ಅಮ್ಮ

Upayuktha
0


ಅಮ್ಮ ಎಂಬ ಎರಡು ಅಕ್ಷರದ ಪದಕ್ಕೆ ಈ ಜಗತ್ತಿನಲ್ಲಿ ಬೇರೆಲ್ಲೂ ಸಿಗದಂತಹ ಶಕ್ತಿ ಇದೆ. ನನ್ನ ಅಮ್ಮ ನನಗಾಗಿ ಒಂಬತ್ತು ತಿಂಗಳು ತನ್ನ  ಹೊಟ್ಟೆಯಲ್ಲಿ ಪುಟ್ಟದೊಂದು ಉಸಿರನ್ನು ಇಟ್ಟುಕೊಂಡು ಅದೊಂದು ದಿನ ನನಗೆ ಜನ್ಮವನ್ನು ಕೊಟ್ಟ ದೇವತೆ. ಅವಳು ನೋಡಿದ ಹೊರ ಜಗತ್ತಿನ ಬೆಳಕನ್ನು ನನಗೂ ತೊರಿಸಿದವಳು. ಹಗಲು ರಾತ್ರಿ ಎಂದು ನೋಡದೆ ನನ್ನನ್ನೂ ಆ ಹೊಟ್ಟೆಯ ಪುಟ್ಟ ಪ್ರಪಂಚದಲ್ಲಿ ಜೋಪಾನ ಮಾಡಿದಳು. ನಾನು ಕೊಟ್ಟ ನೋವುಗಳನ್ನು ಅತೀಯಾಗಿ ಅನುಭವಿಸಿದವಳು. ಆ ದೇವತೆಯ ಪ್ರೀತಿ ಸ್ವರ್ಗಕ್ಕಿಂತ ಮಿಗಿಲು. ಜಗತ್ತಿನಲ್ಲಿ ಹುಡುಕಿದರು ಎಲ್ಲಿಯೂ ಸಿಗದು.


ಆಕೆಯ ಮನಸ್ಸು ತುಂಬಾ ಪರಿಶುದ್ಧವಾದುದು. ಆದರೆ ನನಗಾಗಿ ಪ್ರತೀ ಕ್ಷಣ ಮಿಡಿಯುತ್ತದೆ. ಅವಳ ಕರುಳು ಕೂಗುತ್ತಾ ಹಸಿವು ಎಂದಾಗ ತುತ್ತನಿಟ್ಟವಳು. ನಾನು ನಡೆಯುವ ಒಂದು ಹೆಜ್ಜೆಯಲ್ಲಿ ಬಿದ್ದಾಗ ಎತ್ತಿಕೊಂಡು ಹಣೆಗೆ ಮುತ್ತಿಟ್ಟುವಳು, ಸಾಕಿ ಸಲಹಿದವಳು. ಅತೀಯಾಗಿ ಚೇಷ್ಟೆಯನ್ನು ಮಾಡಿದರೆ ಪೆಟ್ಟು ಕೊಟ್ಟವಳು. ಆದರೂ ಒಳಗೊಳಗೆ ನೊಂದರೂ ಮುಚ್ಚಿಟ್ಟವಳು.ಯಾವ ದೇವಸ್ಥಾನವನ್ನು ಸುತ್ತಿದರೆ ನನ್ನ ಅಮ್ಮನಂತೆ ದೇವರು ಸಿಗಲು ಕಷ್ಟ. ಈ ಜಗತ್ತಿನಲ್ಲಿ ನಾ ಕಂಡ ಶ್ರೇಷ್ಠ ಹೆಣ್ಣು ಅಂದರೆ ಅದು ನನ್ನ ಅಮ್ಮ. ಈಗಿನ ಪರಿಸ್ಥಿತಿಯಲ್ಲಿ ಪ್ರತಿ ಸಮಯಕ್ಕೂ ಬದಲಾಗೊ ವ್ಯಕ್ತಿಗಳ ನಡುವೆ ಬದಲಾಗದೇ ಉಳಿದಿರುವುದು ಅದು ನನ್ನ ಅಮ್ಮನ ಪ್ರೀತಿ. ಈ ನನ್ನ ಉಸಿರಿಗೆ ಹೆಸರಾದವಳು. ನನ್ನ ಅಮ್ಮ ನನ್ನ ಪುಟ್ಟ ಹೆಜ್ಜೆಗಳನ್ನು ಕಂಡು ಖುಷಿ ಪಟ್ಟವಳು ಆಕೆ. ತನ್ನ ಕಷ್ಟಗಳನ್ನು ಮರೆತು ನನ್ನಲ್ಲಿ ಸಂತೋಷವನ್ನು ಕಂಡವಳು ನನ್ನ ಅಮ್ಮ. ಆಕೆ ದೇವತೆಯಾಗಬಹುದು, ಆದರೆ ಆ ಮೇಲಿರುವ ದೇವರು ಎಂದಿಗೂ ತಾಯಿಯಾಗಲಾರ. ನಾನು ಅಳುವಾಗ, ನಗುವಾಗ, ಬಿದ್ದಾಗ ಅಮ್ಮ ಎಂದು ಕರೆದರೆ ಓಡೋಡಿ ಬರುತ್ತಾಳೆ.


ಅಮ್ಮನ ಮಾತುಗಳಲ್ಲಿ ಪ್ರೀತಿ, ಅವಳ ಕೈಯಲ್ಲಿ ಆಶೀರ್ವಾದ, ಅವಳ ಹೃದಯದಲ್ಲಿ ಕರುಣೆ ತುಂಬಿರುತ್ತದೆ. ಮನೆಯಲ್ಲಿರುವ ಶಾಂತಿ, ಸಂತೋಷ, ಒಗ್ಗಟ್ಟು ಅವುಗಳಲ್ಲಿ ಮೂಲ ಅಮ್ಮನೇ. ಅಮ್ಮನ ಮೌಲ್ಯವನ್ನು ಅಳೆಯಲು ಸಾಧ್ಯವಿಲ್ಲ. ಜೀವನದಲ್ಲಿ ಎಷ್ಟೇ ಸಾಧನೆ ಮಾಡಿದರೂ ಅದರ ಹಿಂದೆ ಅಮ್ಮನ ತ್ಯಾಗ ಮತ್ತು ಪ್ರೋತ್ಸಾಹ ಇರುತ್ತದೆ. ಆದರಿಂದಲೇ ಮಾತೃ ದೇವೋಭವ ಎಂದು ನಮ್ಮ ಸಂಸ್ಕೃತಿ ಹೇಳುತ್ತದೆ. ಅಮ್ಮನ ಪ್ರೀತಿ ನಿಸ್ವಾರ್ಥ. ರಾತ್ರಿ ಹಗಲು ನಮ್ಮ ಬಗ್ಗೆ ಚಿಂತಿಸಿ ತನ್ನ ಸುಖವನ್ನು ಬಲಿ ಕೊಟ್ಟು ನಮ್ಮ ಸುಖಕ್ಕಾಗಿ ಶ್ರಮಿಸುವಳು. ನಾವು ದುಃಖದಲ್ಲಿ ಇದ್ದರೆ ಅವಳ ಕಣ್ಣು ನೀರಿನಿಂದ ತುಂಬಿರುತ್ತದೆ. ನಾವು ಸಂತೋಷದಿಂದ ಇದ್ದರೆ ಅವಳ ಮುಖದಲ್ಲಿ ನಗು ಅರಳುತ್ತದೆ. ಅವಳು ನನ್ನ ಮೊದಲ ಗುರು. ಜೀವನದಲ್ಲಿ ದಾರಿದೀಪ ಅಮ್ಮನ ಪ್ರೀತಿ ಮತ್ತು ತ್ಯಾಗವನ್ನು ಯಾವ ಮಾತುಗಳಲ್ಲೂ ವಿವರಿಸಲು ಸಾಧ್ಯವಿಲ್ಲ ನಮ್ಮ ಬದುಕಿನ ನಿಜವಾದ ಆಧಾರವೇ ಅಮ್ಮ.




- ಸ್ವಾತಿ

ಪ್ರಥಮ ಪತ್ರಿಕೋದ್ಯಮ ವಿಭಾಗ 

ವಿವೇಕಾನಂದ ಕಾಲೇಜು ಪುತ್ತೂರು‌


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top