ಸುರತ್ಕಲ್: ಸುರತ್ಕಲ್ ರೋಟರಿ ಕ್ಲಬ್‌ನ ವತಿಯಿಂದ ಸ್ಥಾಪಕ ದಿನಾಚರಣೆ, ಶಿಕ್ಷಕರ ದಿನಾಚರಣೆ ಮತ್ತು ಇಂಜಿನಿಯರುಗಳ ದಿನವನ್ನು ಆಚರಿಸಲಾಯಿತು.
ಸ್ಥಾಪಕ ಸದಸ್ಯ ಹಿರಿಯ ಇಂಜಿನಿಯರ್ ಸತೀಶ್ ರಾವ್ ಇಡ್ಯಾ ಮಾತನಾಡಿ, ರೋಟರಿ ಸಂಸ್ಥೆ ಸಮುದಾಯದ ಅಭುದ್ಯಯದಕ್ಕಾಗಿ ಶ್ರಮಿಸುತ್ತಾ ಬಂದಿದ್ದು ಸ್ನೇಹ ಸಾಮಾಜಿಕ ಸಾಮರಸ್ಯದ ಪ್ರತೀಕವಾಗಿದೆ ಎಂದರು.
ಸ್ಥಾಪಕ ಸದಸ್ಯ ಎನ್.ಐ.ಟಿ.ಕೆ ನಿವೃತ್ತ ಪ್ರಾಧ್ಯಾಪಕ ಪ್ರೊ. ಅಪ್ಪು ಕುಟ್ಟನ್ ಮಾತನಾಡಿ, ಸಮರ್ಥ ನಾಯಕರನ್ನು ರೂಪಿಸುವ ರೋಟರಿ ಸಂಸ್ಥೆ ಸರ್ವರನ್ನು ಒಳಗೊಳ್ಳುವ ಸಂಸ್ಥೆಯಾಗಿದೆ ಎಂದರು.
ಸುರತ್ಕಲ್ ರೋಟರಿ ಕ್ಲಬ್‌ನ ಸ್ಥಾಪಕ ಸದಸ್ಯರಾದ ಸತೀಶ್ ರಾವ್ ಇಡ್ಯಾ ಮತ್ತು ಪ್ರೊ. ಅಪ್ಪು ಕುಟ್ಟನ್ ಅವರನ್ನು ಗೌರವಿಸಲಾಯಿತು.
ಶಿಕ್ಷಕರ ದಿನಾಚರಣೆ ಪ್ರಯುಕ್ತ ವಿಶಿಷ್ಟ ಸಾಧನೆ ಮಾಡಿರುವ ಚೇಳಾಯಿರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ತೆರೆಸಾ ವೇಗಸ್ ಮತ್ತು ಸೂರಿಂಜೆ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಸವಿತಾ ಜಿ ನಾಯ್ಕ್ ಅವರನ್ನು ಸಮ್ಮಾನಿಸಲಾಯಿತು.
ರೋಟರಿ ಕ್ಲಬ್ ಸೇವಾ ನಿರ್ದೇಶಕ ಕೃಷ್ಣಮೂರ್ತಿ ಅಭಿನಂದನೆ ನುಡಿಗಳನ್ನಾಡಿದರು.
ತಮ್ಮ ಸೇವಾವಧಿಯಲ್ಲಿ ರೋಟರಿ ಸಂಸ್ಥೆ ಉತ್ತಮ ಸಹಕಾರ ನೀಡಿದೆ ಎಂದು ತೆರೆಸಾ ವೇಗಸ್ ಮತ್ತು ಸವಿತಾ ಜಿ. ನಾಯ್ಕ್ ನುಡಿದರು.
ಡಾ. ಬಿ.ಆರ್. ಸಾಮಗ ಉತ್ತಮ ಯುವ ಇಂಜಿನಿಯರ್ ಪ್ರಶಸ್ತಿ ಪುರಸ್ಕೃತ ಶ್ರೀಶ ಭಟ್ ಅವರನ್ನು ಅಭಿನಂದಿಸಲಾಯಿತು. ಇಂಜಿನಿಯರುಗಳ ದಿನಾಚರಣೆಯ ಕುರಿತು ಮಾತನಾಡಿದ ರಾಷ್ಟ್ರ ನಿರ್ಮಾಣದಲ್ಲಿ ಇಂಜಿನಿಯರುಗಳ ಪಾತ್ರ ಹಿರಿದಾದುದು ಎಂದರು.
ಪ್ರಕೃತಿ ಮತ್ತು ಪರಿಸರ ಸುಸ್ಥಿರತೆಯ ರೋಟರಿ ಕ್ರಿಯಾ ಸಂಸ್ಥೆಯ ಅಂತರಾಷ್ಟ್ರೀಯ ಸಂಘಟನೆಯ ಪಧಾದಿಕಾರಿಯಾಗಿ ನೇಮಕವಾಗಿರುವ ಸಂದೀಪ್ ರಾವ್ ಇಡ್ಯಾ ಅವರನ್ನು ಗೌರವಿಸಲಾಯಿತು.
ರೋಟರಿ ವಲಯ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಗಾಯನ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದ ಸ್ಫೂರ್ತಿ ರಾವ್ ಮತ್ತು ಸ್ಕಿಟ್ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದ ತಂಡದ ನಿರ್ದೇಶಕ ಚೇತನ್, ವಿನೋದ್ ಶೆಟ್ಟಿ, ಜಿತಿನ್ ಅವರನ್ನು ಗೌರವಿಸಲಾಯಿತು. ರೋಟರಿ ಕ್ಲಬ್‌ನಲ್ಲಿ ಸದಸ್ಯರಾಗಿರುವ ಶಿಕ್ಷಕರು ಮತ್ತು ಇಂಜಿನಿಯರುಗಳನ್ನು ಸನ್ಮಾನಿಸಲಾಯಿತು.
ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರ ಬಿ. ಕುಂದರ್ ಅಧ್ಯಕ್ಷತೆ ವಹಿಸಿದ್ದರು. ನಿಯೋಜಿತ ಅಧ್ಯಕ್ಷ ಶ್ರೀಧರ್ ಟಿ.ಎನ್ ಮತ್ತು ಸಾಮಾಜಿಕ ಸೇವಾ ನಿರ್ದೇಶಕ ಚಂದ್ರಕಾಂತ ಮರಾಠೆ ವಿವರಗಳನ್ನು ವಾಚಿಸಿದರು. ಕಾರ್ಯದರ್ಶಿ ರಾಮಮೋಹನ್ ವೈ. ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ