ಮಂಗಳೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ದಕ್ಷಿಣ ಕನ್ನಡ, ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀನಿವಾಸ ಇನ್ಸಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಮತ್ತು ಎ.ಶಾಮರಾವ್ ನರ್ಸಿಂಗ್ ಸ್ಕೂಲ್ ವಳಚ್ಚಿಲ್, ಮಂಗಳೂರು ವತಿಯಿಂದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯನ್ನು ಸೆಪ್ಟ್ಂಬರ್ 10 ರಂದು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಮುಖ್ಯ ಅತಿಥಿ ಜೈಬುನ್ನೀಸಾ, ಹಿರಿಯ ಸಿವಿಲ್ ನ್ಯಾಯಾಧೀಶರು, ಸದಸ್ಯ ಕಾರ್ಯದರ್ಶಿಗಳು, ದಕ್ಷಿಣ ಕನ್ನಡ, ಮಂಗಳೂರು ಇವರು ಉಧ್ಘಾಟಿಸಿದರು ಮತ್ತು ವಿದ್ಯಾರ್ಥಿಗಳಿಗೆ ಜೀವನದಲ್ಲಿ ಭರವಸೆಯನ್ನು ಕಳೆದುಕೊಳ್ಳಬೇಡಿ, ಮನಸ್ಸನ್ನು ಆರೋಗ್ಯವಾಗಿಟ್ಟುಕೊಳ್ಳಿ, ಆತ್ಮಹತ್ಯೆಯು ಕಾನೂನಿನ ಪ್ರಕಾರ ಅಪರಾಧ, ಕಷ್ಟದ ಸಮಯದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರ ತುಂಬಾ ಪ್ರಮುಖವಾಗಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಡಾ|| ಹೆಚ್.ಆರ್.ತಿಮ್ಮಯ್ಯರವರು ಮಾತನಾಡಿ, ಜೀವನವು ಅಮೂಲ್ಯವಾದದ್ದು, ದಿವಂಗತ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಸ್ಪೂರ್ತಿ ದಾಯಕ ಮಾತುಗಳಿಂದ ನೆಲೆಸಿದ ನರ್ಸಿಂಗ್ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಡಾ||ಸಿಎ ಎ.ರಾಘವೇಂದ್ರ ರಾವ್, ಕುಲಾಧಿಪತಿಗಳು, ಶ್ರೀನಿವಾಸ್ ಯೂನಿವರ್ಸಿಟಿ ಮತ್ತು ಅಧ್ಯಕ್ಷರು, ಎ.ಶಾಮರಾವ್ ಫೌಂಡೇಶನ್, ಮಂಗಳೂರು ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣವಾದಾಗ ಭರವಸೆಯನ್ನು ಕಳೆದುಕೊಳ್ಳಬಾರದು. ಜೀವನ ದೊಡ್ಡದು. ಜೀವನದಲ್ಲಿ ನಾವು ಗೆದ್ದು ತೋರಿಸಬೇಕು ಎಂದು ತಿಳಿಸಿದರು.
ಡಾ|| ಎ.ಶ್ರೀನಿವಾಸ್ ರಾವ್ ಸಹ ಕುಲಾಧಿಪತಿಗಳು, ಶ್ರೀನಿವಾಸ್ ಯೂನಿವರ್ಸಿಟಿ ಮತ್ತುಉಪಾಧ್ಯಕ್ಷರು, ಎ.ಶಾಮರಾವ್ ಫೌಂಡೇಶನ್, ಮಂಗಳೂರು ಇವರು ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಆತ್ಮಹತ್ಯಯನ್ನು ತಡೆಗಟ್ಟುವ ಕುರಿತಾಗಿ ಹೆಚ್ಚಿನ ಅಧ್ಯಯನವನ್ನು ಮಾಡಬೇಕು. ಪ್ರಸ್ತುತ ಲಭ್ಯವಿರುವ ತಂತ್ರ ಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಬೇಕು ಇದರಿಂದ ಆತ್ಮಹತ್ಯಯನ್ನು ತಡೆಗಟ್ಟಲು ಸಹಾಯವಾಗುತ್ತದೆ ಎಂದು ಸಲಹೆ ನೀಡಿದರು.
ಜೈಬುನ್ನೀಸಾ, ಹಿರಿಯ ಸಿವಿಲ್ ನ್ಯಾಯಾಧೀಶರು, ಸದಸ್ಯಕಾರ್ಯದರ್ಶಿಗಳು,ದಕ್ಷಿಣ ಕನ್ನಡ, ಮಂಗಳೂರು, ಡಾ||ಸಿಎ ಎ.ರಾಘವೇಂದ್ರ ರಾವ್, ಕುಲಾಧಿಪತಿಗಳು, ಶ್ರೀನಿವಾಸ್ ಯೂನಿವರ್ಸಿಟಿ ಮತ್ತು ಅಧ್ಯಕ್ಷರು, ಎ.ಶಾಮರಾವ್ ಫೌಂಡೇಶನ್, ಮಂಗಳೂರು, ಡಾ|| ಹೆಚ್.ಆರ್.ತಿಮ್ಮಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಡಾ|| ಎ.ಶ್ರೀನಿವಾಸ್ ರಾವ್ ಸಹ ಕುಲಾಧಿಪತಿಗಳು, ಶ್ರೀನಿವಾಸ್ ಯೂನಿವರ್ಸಿಟಿ ಮತ್ತು ಉಪಾಧ್ಯಕ್ಷರು, ಎ.ಶಾಮರಾವ್ ಫೌಂಡೇಶನ್, ಮಂಗಳೂರು, ನಂದ ಕುಮಾರ್ ಎಂ.ಎಂ. ಪೊಲೀಸ್ ಇನ್ಸ್ ಪೆಕ್ಟರ್, ಡಿ.ಎಸ್.ಪಿ ಯುನಿಟ್, ದಕ್ಷಿಣ ಕನ್ನಡ, ಮಂಗಳೂರು, ಡಾ|ಸುದರ್ಶನ್ ಸಿ.ಎಂ. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ, ದ.ಕ. ಮಂಗಳೂರು,ಡಾ| ಐಶ್ವರ್ಯ ಭಟ್ ಪಿ. ಸೀನಿಯರ್ ರೆಸಿಡೆಂಟ್ ಮನೋರೋಗ ವಿಭಾಗ, ಶ್ರೀನಿವಾಸ್ ಮೆಡಿಕಲ್ ಕಾಲೇಜು, ಮಂಗಳೂರು, ಶ್ರೀಮತಿ ಜ್ಯೋತಿ ಕೆ.ಉಳೆಪಾಡಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ, ದ.ಕ.ಮಂಗಳೂರು, ಫ್ರೊ.ಪ್ರದೀಪ ಎಂ.ಪ್ರಾಂಶುಪಾಲರು ,ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಮತ್ತು ಎ.ಶ್ಯಾಮರಾವ್ ನರ್ಸಿಂಗ್ ಸ್ಕೂಲ್, ವಳಚ್ಚಿಲ್, ಮಂಗಳೂರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


