ಕುಳಾಯಿ: ಪ್ರಗತಿಯಲ್ಲಿರುವ ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯವು ಸುವ್ಯವಸ್ಥಿತವಾಗಿ ಮುಂದುವರೆದು ಯಶಸ್ವಿಗೊಳಿಸುವ ಉದ್ದೇಶದಿಂದ ಊರ ಪರವೂರ ಭಕ್ತ ಪೋಷಕರುಗಳ ವಿಶೇಷ ಸಮಾಲೋಚನಾ ಸಭೆಯು ಎಂ.ಜೆ ಶೆಟ್ಟಿರವರ ಅಧ್ಯಕ್ಷತೆಯಲ್ಲಿ ಜರಗಿತು. ಇದುವರೆಗಿನ ಪ್ರಗತಿ ಪಟ್ಟಿಯನ್ನು ಸಭಿಕರಿಗೆ ತಿಳಿಸಿ ಮುಂದಿನ ಹಂತದ ಯೋಜನೆಗಳನ್ನು ಕಾರ್ಯಗತ ಗೊಳಿಸುವಲ್ಲಿ ಸರ್ವರ ಸಹಕಾರವನ್ನು ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರು ಎಂ.ಜೆ ಶೆಟ್ಟಿ ಕೋರಿದರು.
ಕಾರ್ಯಾಧ್ಯಕ್ಷ ಸದಾಶಿವ ಎಂ ರವರು ಮುಂದಿನ ಯೋಜನೆಗಳ ವಿವರವನ್ನು ಸಭೆಗೆ ತಿಳಿಸಿದ್ದರು. ಪ್ರಧಾನ ಕಾರ್ಯದರ್ಶಿ ಯೋಗೀಶ ಸನಿಲ್ ಕುಳಾಯಿ ರವರು ವಿಜ್ಞಾಪನಾ ಪತ್ರವನ್ನು ಮನೆ ಮನಕ್ಕೆ ತಲುಪಿಸುವಲ್ಲಿ ಸಹಕರಿಸಿದ್ದ ಸಂಘ ಸಂಸ್ಥೆಗಳು, ಭಜನಾ ಮಂಡಳಿಗಳು, ಸ್ವಸಹಾಯ ಸಂಘಗಳು, ವಿವಿಧ ಸಮಾಜದ ಮುಖಂಡರುಗಳು, ಊರಿನ ಹತ್ತು ಸಮಸ್ತರು, ಊರ ಪರವೂರ ಪೋಷಕರುಗಳು ಮತ್ತು ಕ್ಷೇತ್ರದ ಭಕ್ತ ವೃಂದದವರಿಗೆ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.
ಮುಂದಿನ ಹಂತದ ಯೋಜನೆಗಳ ಅನುಷ್ಠಾನಕ್ಕಾಗಿ ಅಗತ್ಯವಾಗಿರುವ ವಸ್ತು ಅಥವಾ ಧನ ಸಹಾಯ ಸಂಗ್ರಹಣೆಯಲ್ಲೂ ಎಲ್ಲರೂ ಪಾಲ್ಗೊಳ್ಳಬೇಕಾಗಿ ವಿನಂತಿಸಿದ್ದು ವಲಯವಾರು ಜವಾಬ್ದಾರಿ ನಿರ್ವಹಣೆಗಾಗಿ ತಂಡಗಳ ರಚನೆ ಬಗ್ಗೆ ವಿವರವನ್ನು ಸಭೆಯಲ್ಲಿ ತಿಳಿಸಿದರು.
ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರು ಮತ್ತು ಜೀರ್ಣೋದ್ದಾರ ಸಮಿತಿಯ ಕೋಶಾಧಿಕಾರಿ ಕೆ ಕೃಷ್ಣ ಹೆಬ್ಬಾರ್ ರವರು ನಿಗದಿಪಡಿಸಿದಂತೆ 2026 ರ ವಾರ್ಷಿಕ ಜಾತ್ರಾ ಮಹೋತ್ಸವದಂದು ದೇವಸ್ಥಾನದಲ್ಲಿ ಬ್ರಹ್ಮ ಕಲಶೋತ್ಸವ ನೆರವೇರಿಸುವಲ್ಲಿ ಸರ್ವರೂ ಭಾಗಿಗಳಾಗಿ ಶ್ರೀ ವಿಷ್ಣುಮೂರ್ತಿ ಮತ್ತು ಪರಿವಾರ ದೈವ ದೇವರುಗಳ ಅನುಗ್ರಹಕ್ಕೆ ಪಾತ್ರರಾಗಿರಿ ಎಂದು ಆಶೀರ್ವಚನ ನೀಡಿದರು. ಜೊತೆ ಕಾರ್ಯದರ್ಶಿ ಕೆ ಪಿ ಚಂದ್ರಶೇಖರ ರವರು ವಂದಿಸಿ ಶ್ರೀನಿವಾಸ ಕುಳಾಯಿ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ