ಪಿತೃ ಅಂದರೆ ತಂದೆ, ನಮ್ಮ ಪೂರ್ವಜರು, ಪಕ್ಷ ಅಂದರೆ ಹದಿನೈದು ದಿನಗಳು.
ಪಿತೃ ದೇವತೆಗಳು ಅಂದರೆ ಪೂರ್ವಜರ ಆತ್ಮಗಳ ಸಮೂಹ. ಇವರು ಮನುಷ್ಯರ ದೈವಿಕ ಪೂರ್ವಜರು. ದೇವತೆಗಳಂತೆ ಪೂಜಿಸಲ್ಪಡುತ್ತಾರೆ.
ಪೂರ್ವಜರ ಆತ್ಮಗಳು: ಪಿತೃ ದೇವತೆಗಳು ವಂಶಾವಳಿಯಲ್ಲಿ ಬಂದಿರುವ ಅಂದರೆ ಮೃತಪಟ್ಟ ನಮ್ಮ ಪೂರ್ವಜರ ಆತ್ಮಗಳು, ಅವರನ್ನು ಗೌರವಿಸುವ ಉದ್ದೇಶದಿಂದ ಅವರ ಸ್ಮರಣೆ ಮಾಡಿ ಅವರ ಹೆಸರಿನಲ್ಲಿ ನಮ್ಮ ಕೈಲಾದಷ್ಟು ದಾನ ಮಾಡುವುದು ಅವರ ಆತ್ಮಕ್ಕೆ ತೃಪ್ತಿ ನೀಡುವುದು ನಮ್ಮ ಕರ್ತವ್ಯ.
ಅವರು ತೃಪ್ತರಾದರೆ ನಮ್ಮ ಕುಟುಂಬಕ್ಕೆ ಸಮೃದ್ಧಿ ಸಿಗುತ್ತದೆ, ಅಡೆತಡೆಗಳಿಂದ ರಕ್ಷಣೆ ಸಿಗುತ್ತದೆ, ಕುಟುಂಬದ ಯೋಗಕ್ಷೇಮ ಹಾಗೂ ವಂಶದ ಅಭಿವೃದ್ಧಿ ಏಳಿಗೆಗೆ ಅವರ ಆಶೀರ್ವಾದ ಸದಾ ಸಿಗುತ್ತದೆ ಎನ್ನಬಹುದು.
ಜ್ಯೋತಿಷ್ಯ ಪ್ರಕಾರ ನಮ್ಮ ಜಾತಕದಲ್ಲಿ ಸೂರ್ಯ ದೇವನು ರಾಹು, ಕೇತು, ಶನಿ ಭಗವಾನ್ ರ ಸಂಪರ್ಕ ಹೊಂದಿದ್ದರೆ ಪಿತೃಶಾಪ ಇರುತ್ತದೆ. ಸೂರ್ಯ ದೇವನು ಉಚ್ಚ ಸ್ವಸ್ಥಾನದಲ್ಲಿ ಇದ್ದರೆ ಪಿತೃ ಶಾಪ ಇರುವುದಿಲ್ಲ ಪೂರ್ವ ಜನ್ಮದಲ್ಲಿ ಹಿರಿಯರನ್ನು ಆಧರ ಗೌರವದಿಂದ ಕಂಡಿದ್ದೇವೆ ಎಂದು ಅರ್ಥ.
ಸೂರ್ಯ ಪೂರ್ವ ಪುಣ್ಯ ಸ್ಥಾನದ ಅಧಿಪತಿ
ಇದರೊಂದಿಗೆ ಎಲ್ಲಾ ಗ್ರಹಗಳು ಸಹ ನಮ್ಮ ಸಂಬಂಧಿಗಳ ಕಾರಕತ್ವ ಹೊಂದಿರುವುದು ಕುಜನು ಸಹೋದರರಿಗೆ ಕಾರಕ, ಬುಧನು ಸೋದರ ಮಾವನಿಗೆ ಕಾರಕ, ಶುಕ್ರನು ಹೆಣ್ಣು ಮಕ್ಕಳ ಕಾರಕ, ಚಂದ್ರನು ಮಾತೃಕಾರಕ, ಗುರುವು ಕೆಲವೊಮ್ಮೆ ಗಂಡನಿಗೆ ಕಾರಕ, ಶನಿಯು ಹಿರಿಯರಿಗೆ ಕಾರಕ ಹೀಗೆ....... ಈ ಗ್ರಹಗಳೊಂದಿಗೆ ರಾಹು, ಕೇತುಗಳು ಸಂಪರ್ಕ ಹೊಂದಿದ್ದರೆ ಆ ಕಾರಕತ್ವದ ಸಂಬಂಧ ಜೀವಗಳ ತೃಪ್ತಿ ಪಡಿಸುವ ಸಲುವಾಗಿಯಾದರೂ ಪ್ರತಿಯೊಬ್ಬರೂ ಈ ಪಿತೃ ಪಕ್ಷದ ಆಚರಣೆ ಮಾಡುವುದು ಅವಶ್ಯಕ ಹಾಗಾಗಿ ಅವರವರ ಅನುಕೂಲಕ್ಕೆ ತಕ್ಕಂತೆ ಈ ಭಾದ್ರಪದ ಮಾಸದ ಹುಣ್ಣಿಮೆಯಿಂದ ಮಹಾಲಯ ಅಮಾವಾಸ್ಯೆವರೆಗೂ ಅಗಲಿದ ಆತ್ಮಗಳಿಗೆ ಗೌರವ ಸಲ್ಲಿಸುವುದು ಬಹಳ ಮುಖ್ಯ.
ಅಮಾವಾಸ್ಯೆ ದಿನ ಪಿತೃ ಕಾರ್ಯ ಮಾಡುವುದರಿಂದ ಸರ್ವಪಿತೃ ದೋಷ ನಿವಾರಣೆಗೆ ಸಹಕಾರಿ ಆಗುವುದು. ಅವರವರ ಸಂಪ್ರದಾಯದಂತೆ ಅವರವರು ಮಾಡಿಕೊಳ್ಳಿ. ಆದರೂ ಇದರಲ್ಲಿ ಸಂಪ್ರದಾಯ ಆಚರಣೆಗಿಂತ ಮುಖ್ಯವಾದದ್ದು ಆ ದಿನ ಅವರ ಹೆಸರಿನಲ್ಲಿ ಮಾಡುವ ದಾನಧರ್ಮ ಬಹಳ ಮುಖ್ಯ,
ಪ್ರಾಣಿ, ಪಕ್ಷಿಗಳ ರೂಪದಲ್ಲಿ, ಅಪರಿಚಿತ ವ್ಯಕ್ತಿಗಳ ರೂಪದಲ್ಲಿ, ಕೆಲವೊಮ್ಮೆ ಕರೆಯದೆ ಬರುವ ಅತಿಥಿಗಳ ರೂಪದಲ್ಲಿ ಪಿತೃಗಳು ಬರಬಹುದು ಯಾರಿಗೂ ಏನೂ ಇಲ್ಲ ಎನದೆ ಕೈಲಾದ ಮಟ್ಟಿಗೆ ಸಹಾಯ ಮಾಡಿ ಅದು ನಿಮ್ಮ ಜೀವನದ ಏಳಿಗೆಗೆ ಸಹಾಯಕವಾಗುತ್ತದೆ.
- ಕಲ್ಪನಾ ಕೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ