ದೋಷಯುಕ್ತ‍ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಾಡಿದ್ದ ಓಲಾಗೆ ದಂಡ

Upayuktha
0


 


ಮಂಗಳೂರು: ದೋಷಯುಕ್ತ ಎಲೆಕ್ಟ್ರಿಕ್ ವಾಹನ ಮಾರಾಟ ಮಾಡಿದ್ದ ಓಲಾ ಕಂಪೆನಿ ವಿರುದ್ಧ ದಕ್ಷಿಣ ಕನ್ನಡ ಗ್ರಾಹಕ ನ್ಯಾಯಾಲಯ ತೀರ್ಪು ನೀಡಿದೆ.


ಘಟನೆಯ ವಿವರ


ಮಂಗಳೂರಿನ ಸರ್ಕಾರಿ ಸ್ವಾಮ್ಯದ ಕಂಪೆನಿಯೊಂದರ ಉದ್ಯೋಗಿ ಉದಯ ಕುಮಾರ್ ಬಿ.ಸಿ. ಅವರು ಓಲಾ ಎಲೆಕ್ಟ್ರಿಕ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನಿಂದ ವಾಹವನ್ನು ಖರೀದಿಸಿದ್ದರು. ಓಲಾ ಸ್ಕೂಟರ್‌ಗೆ ಅವರು 1.17 ಲಕ್ಷ ರೂ.ಗಳನ್ನು ಪಾವತಿಸಿದ್ದರು.


ಖರೀದಿಸಿದ ಒಂದು ತಿಂಗಳಿಗೆ ಸ್ಕೂಟರ್ ರಸ್ತೆ ಮಧ್ಯದಲ್ಲಿ ಹಠಾತ್ತಾಗಿ ನಿಲ್ಲುತ್ತಿತ್ತು. ಈ ಬಗ್ಗೆ ಗ್ರಾಹಕರು ದೂರು ನೀಡಿದಾಗ ಮೊದಲ ಬಾರಿಗೆ ಓಲಾ ಸಂಸ್ಥೆಯೇ ವಾಹನದ ದುರಸ್ತಿ ಮಾಡಿತ್ತು.


ಆದರೆ, ಸ್ಕೂಟರ್ ಇದೇ ಸಮಸ್ಯೆಯಿಂದ ಪದೇ ಪದೇ ರಸ್ತೆ ಮಧ್ಯೆ ಹಠಾತ್ತನೆ ನಿಲ್ಲುತ್ತಿತ್ತು. ಇದರಿಂದ ಗ್ರಾಹಕರು ತೀವ್ರ ಸಮಸ್ಯೆಗೆ ಗುರಿಯಾಗಿದ್ದರು. ರಿಪೇರಿ ನೆಪದಲ್ಲಿ ಓಲಾ ಸಂಸ್ಥೆ ಸ್ಕೂಟರ್‌ನ್ನು ತನ್ನ ಬಳಿ ಇರಿಸಿತ್ತಾದರೂ, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ವಿಫಲವಾಗಿತ್ತು.


ಈ ಹಿನ್ನೆಲೆಯಲ್ಲಿ ಲೀಗಲ್ ನೋಟೀಸ್ ಜಾರಿಗೊಳಿಸಿದ ಗ್ರಾಹಕರು ಗ್ರಾಹಕರ ಪರಿಹಾರ ಆಯೋಗಕ್ಕೆ ಮೊರೆ ಹೋದರು. ಉದಯ್ ಕುಮಾರ್ ಸಲ್ಲಿಸಿದ ದೂರನ್ನು ವಿಚಾರಣೆ ನಡೆಸಿದ ಗ್ರಾಹಕರ ನ್ಯಾಯಾಲಯ, ಓಲಾ ಸಂಸ್ಥೆ ಸೇವಾ ನ್ಯೂನ್ಯತೆ ತೋರಿದೆ ಮತ್ತು ದೋಷಯುಕ್ತ ಉತ್ಪನ್ನವನ್ನು ಮಾರಾಟ ಮಾಡಿದೆ ಎಂದು ತೀರ್ಪು ನೀಡಿತು.


ಪ್ರಮಾದ ಎಸಗಿದ ಓಲಾ ಕಂಪೆನಿ 45 ದಿನದಲ್ಲಿ ಸ್ಕೂಟರ್‌ನ್ನು ಸಂಚಾರ ಯೋಗ್ಯವಾಗಿ ರಿಪೇರಿ ಮಾಡಿಕೊಡಬೇಕು. ತಪ್ಪಿದ್ದಲ್ಲಿ, 45 ದಿನದೊಳಗೆ ಶೇಕಡಾ 6ರ ಬಡ್ಡಿಯೊಂದಿಗೆ 1.17 ಲಕ್ಷ ರೂ. ಪಾವತಿಸಲು ಆದೇಶ ನೀಡಿದೆ. ಇದರ ಜೊತೆಗೆ ಸೇವಾನ್ಯೂನ್ಯತೆಗಾಗಿ ರೂ. 10,000/- ದಂಡ ಹಾಗೂ ಪ್ರಕರಣದ ವೆಚ್ಚವಾಗಿ ರೂ. 5000/-ವನ್ನು 45 ದಿನದೊಳಗೆ ಪಾವತಿಸಲು ಆದೇಶ ನೀಡಿದೆ.


ಗ್ರಾಹಕರ ಪರವಾಗಿ ಮಂಗಳೂರಿನ ವಕೀಲರಾದ ತೇಜಕುಮಾರ್ ಡಿ.ಎಂ. ಅವರು ವಾದ ಮಂಡಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top