ಈಜು ಸ್ಪರ್ಧೆ: 8 ಚಿನ್ನ ಪಡೆದ ವರ್ಷಾ ಪಿ. ಶ್ರೀಯಾನ್

Chandrashekhara Kulamarva
0



ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಥಮ ಬಿ.ಕಾಂ. ಪದವಿ ವಿದ್ಯಾರ್ಥಿನಿ ವರ್ಷಾ ಪಿ. ಶ್ರೀಯಾನ್ ಇತ್ತೀಚೆಗೆ ಪುತ್ತೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಈಜು ಸ್ಪರ್ಧೆಯಲ್ಲಿ ಒಟ್ಟು 8 ಚಿನ್ನದ ಪದಕ ಮತ್ತು 1 ಬೆಳ್ಳಿ ಪದಕ ಪಡೆದ್ದಾರೆ. 


ಫ್ರೀ ಸ್ಟೈಲ್ ವಿಭಾಗದ 50 ಮೀ., 100 ಮೀ., 200 ಮೀ., 400 ಮೀ., ಹಾಗೂ ಬ್ರೆಸ್ಟ್ ಸ್ಟ್ರೋಕ್ ವಿಭಾಗದಲ್ಲಿ 50 ಮೀ., 100 ಮೀ., 200 ಮೀ. ಹಾಗೂ ಇಂಡಿವಿಶುಯಲ್ ಮಿಡ್ಲೇ 200 ಮೀ.ನಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಅಲ್ಲದೇ, ಫ್ರೀ ಸ್ಟೈಲ್ 800 ಮೀ.ನಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.


ಈಕೆಯ ಸಾಧನೆಗೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಎಸ್., ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕೇಶವಮೂರ್ತಿ ಟಿ. ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.





Post a Comment

0 Comments
Post a Comment (0)
To Top