ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಖಾತ್ರಿ ಕೋಶದ ಸಹಯೋಗದಲ್ಲಿ ರಾಷ್ಟ್ರೀಯ ಕಡಲೆಕಾಯಿ ದಿನ ಆಚರಿಸಲಾಯಿತು. ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಬ್ರೈಟ್ ಮಾಡೆಲ್ ಶಾಲೆ ಶಿಕ್ಷಕಿ ಅಮೃತ, ಕಡಲೆಕಾಯಿಯ ಪೌಷ್ಠಿಕ ಅಂಶಗಳು ಮತ್ತು ಅದರ ಪ್ರಾಮುಖ್ಯತೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾಲೇಜಿನ ಹಿರಿಯ ಪ್ರಾಧ್ಯಾಪಕ ರಾಮಕೃಷ್ಣ ಬಿ. ಎಂ., ಕಡಲೆಕಾಯಿ ಬೆಳೆಯುವಲ್ಲಿ ಭಾರತವು ಜಗತ್ತಿನಲ್ಲೇ ಎರಡನೇ ಸ್ಥಾನದಲ್ಲಿದೆ ಹಾಗೂ ದೇಶದ ಆರ್ಥಿಕತೆಯಲ್ಲಿ ಕಡಲೆಕಾಯಿಯ ರಫ್ತಿನಲ್ಲೂ ಮಹತ್ವದ ಪಾತ್ರವಿದೆ ಎಂದು ತಿಳಿಸಿದರು.
ಐಕ್ಯುಎಸಿ ಸಂಯೋಜಕ ಡಾ. ಸಿದ್ದರಾಜು ಎಂ. ಎನ್., ಶೇ. 45ರಷ್ಟು ಕೊಬ್ಬಿನಾಂಶವುಳ್ಳ ನೆಲಗಡಲೆಯನ್ನು ಎಣ್ಣೆ ಕಾಳುಗಳ ರಾಜ ಎಂದು ತಿಳಿಸಿದರು. ಈ ದಿನದ ಅಂಗವಾಗಿ ತೃತೀಯ ಬಿಎಸ್ಸಿ ವಿದ್ಯಾರ್ಥಿಗಳು, ದಿನದ ವಿಶೇಷತೆ ಬಗ್ಗೆ ಕಿರು ಪ್ರಹಸನ ಪ್ರದರ್ಶನ ಮಾಡಿದರು. ವಿವಿಧ ಚಟುವಟಿಕೆಗಳ ಮೂಲಕ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸುತ್ತಾ ದಿನದ ಮಹತ್ವವನ್ನು ತಿಳಿಸಲಾಯಿತು. ವಿದ್ಯಾರ್ಥಿ ಮೇಘಶ್ರೀ ಮತ್ತು ಮಧುಶ್ರೀ ಪ್ರಾರ್ಥನೆ ನಡೆಸಿದರು. ಜನನ್ಯ ಸ್ವಾಗತಿಸಿ, ಪ್ರಜ್ಞಾ ವಂದಿಸಿದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಶೋಭಾ ಮತ್ತು ಗೋವಿಂದರಾಜ್ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ