ಮಜೂರು ಗ್ರಾಮ ಪಂಚಾಯತ್‌ ಪ್ರಥಮ ಹಂತದ ಗ್ರಾಮ ಸಭೆ

Upayuktha
0



ಮಜೂರು: ಮಜೂರು ಗ್ರಾಮ ಪಂಚಾಯತ್‌ ನ 2025-26 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಇಂದು ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಪ್ರಸಾದ್‌ ಶೆಟ್ಟಿ ವಳದೂರು ಇವರ ಅಧ್ಯಕ್ಷತೆಯಲ್ಲಿ ಮಜೂರು ಗ್ರಾಮ ಪಂಚಾಯತ್‌ನ ಸಭಾಭವನದಲ್ಲಿ ನಡೆಯಿತು.


ಮಾರ್ಗದರ್ಶಿ ಅಧಿಕಾರಿಯವರಾದ ಶ್ರೀಮತಿ ಸುಗುಣ ಸಹಾಯಕ ಲೆಕ್ಕಾಧಿಕಾರಿ ತಾ.ಪಂ ಕಾಪು ಇವರು ಗ್ರಾಮ ಸಭೆಯ ಮಹತ್ವದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಪೋಲಿಸ್‌ ಇಲಾಖೆ, ಮಹಾತ್ಮಾ ಗಾಂಧಿ ನರೇಗಾ ಯೋಜನೆ , ಕಂದಾಯಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ತಮ್ಮ ಇಲಾಖೆಯ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.


ಸಾರ್ವಜನಿಕರಿಂದ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಬಗ್ಗೆ, ನವಿಲು ಮಂಗಗಳ ಹಾವಳಿ ಬಗ್ಗೆ, 92 ಹೇರೂರು ಗ್ರಾಮದ ಪ್ಲಾಟಿಂಗ್‌ ಸಮಸ್ಯೆ ಬಗ್ಗೆ, ಪಾದೂರು ಗ್ರಾಮದಲ್ಲಿ ಜಲ್ಲಿ ಕ್ರಷರ್‌ ನಡೆಸದಂತೆ ವಿರೋಧ ವ್ಯಕ್ತಪಡಿಸಿದರು. 



ಗ್ರಾಮಸಭೆಯಲ್ಲಿ ನೋಡೆಲ್‌ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಡಾ ಅರುಣ್‌ ಹೆಗ್ಡೆ ಪಶು ವೈದ್ಯಾಧಿಕಾರಿ ಇವರು ವರ್ಗಾವಣೆಗೊಂಡಿರುವ ಬಗ್ಗೆ ಮತ್ತು ಪಾದೂರು ಗ್ರಾಮದಲ್ಲಿ ಗ್ರಾಮ ಸಹಾಯಕರಾಗಿ 46 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಲಕ್ಷಣ್‌ ಶೆಟ್ಟಿಗಾರ್‌, ಕರಂದಾಡಿ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ 25 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಕುಸುಮ, ಚಂದ್ರನಗರ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ 27 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಪುಷ್ಪ , ಮಜೂರು ಗ್ರಾಮ ಪಂಚಾಯತದ ಅಧಿಕೃತ ವೆಬ್‌ ಸೈಟ್‌ ಉಚಿತವಾಗಿ ಮಾಡಿಕೊಟ್ಟಿರುವ ಅರುಣ್‌ ಶೆಟ್ಟಿ ಅಂಡೆಮಾರುಗುತ್ತು ಪಾದೂರು ಇವರುಗಳನ್ನು ಗ್ರಾಮ ಪಂಚಾಯತ್‌ ನಿಂದ ಸನ್ಮಾನಿಸಲಾಯಿತು.


ಭಾವಾನಾತ್ಮಕ ಬೀಳ್ಕೊಡುಗೆ

ನೂರಾರು ವರ್ಷಗಳಿಂದ ತನ್ನ ಪೂರ್ವಜರೊಂದಿಗೆ ಹುಟ್ಟಿ ಬೆಳೆದು ಜೀವನ ಸಾಗಿಸುತ್ತಿದ್ದ ಅನಿವಾರ್ಯ ಸಂದರ್ಭದಲ್ಲಿ ISPRL 2 ನೇ ಹಂತದಲ್ಲಿ ಪಾದೂರು ಗ್ರಾಮದ ಸುಮಾರು 50 ಕುಟುಂಬ ನಿರ್ವಸಿತರಾಗಿ ಬೇರೆ ಕಡೆ ಹೋಗಬೇಕಾದ ನಿರ್ವಸಿತ ಕುಟುಂಬದವರಿಗೆ ಭಾವಾನಾತ್ಮಕ ಬೀಳ್ಕೊಡುಗೆ ನಡೆಸಲಾಯಿತು.


ಗ್ರಾಮಸ್ಥರಿಂದ ಸನ್ಮಾನ

ಕಳೆದ 5 ವರ್ಷಗಳಿಂದ ಪಾರದರ್ಶಕ ಆಡಳಿತ, ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಿದ ನಿಕಟ ಪೂರ್ವ ಅಧ್ಯಕ್ಷರಾದ ಶರ್ಮಿಳಾ ಆಚಾರ್ಯ , ನಿಕಟಪೂರ್ವ ಉಪಾಧ್ಯಕ್ಷರಾದ  ಮಧುಸೂಧನ್‌ ಸಾಲ್ಯಾನ್ , ಪಂಚಾಯತ್‌ ನ ಪ್ರಸ್ತುತ ಅಧ್ಯಕ್ಷರಾದ  ಪ್ರಸಾದ್‌ ಶೆಟ್ಟಿ ವಳದೂರು, ಹಾಗೂ ಉಪಾಧ್ಯಕ್ಷರಾದ ಮಂಜುಳಾ ಆಚಾರ್ಯ ಇವರಿಗೆ ಎಲ್ಲಾ ಗ್ರಾಮ ಪಂಚಾಯತ್‌ ಸದಸ್ಯರು ಹಾಗೂ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಹಾಗೂ ಸಿಬ್ಬಂದಿ ವರ್ಗ ದ ಪರವಾಗಿ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.


ISO (International Organisation for Standardisation) ಮಜೂರು ಗ್ರಾಮ ಪಂಚಾಯತ್‌ ಆಯ್ಕೆ ಯಾಗಿರುವ ಬಗ್ಗೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು. ಗ್ರಾಮ ಪಂಚಾಯತ್‌ ಉಪಾಧ್ಯಕ್ಷರಾದ ಶ್ರೀಮತಿ ಮಂಜುಳಾ ಆಚಾರ್ಯ, ಗ್ರಾಮ ಪಂಚಾಯತ್‌ ಸದಸ್ಯರು, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ವಿಲಾಸಿನಿ, ವಿವಿಧ ಇಲಾಖಾಧಿಕಾರಿಗಳಾದ ಬಸವರಾಜ ಹೆಚ್‌ ಎಲ್‌, ಸಮಾಜ ಕಲ್ಯಾಣ ಇಲಾಖೆ, ಚಂದ್ರಕಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಥಮಿಕ. ಆರೋಗ್ಯ ಕೇಂದ್ರ, ಮಲ್ಲಿಕಾರ್ಜುನ ಉಪವಲಯ ಅರಣ್ಯಾಧಿಕಾರಿ, ಪೂರ್ಣಿಮ ಅಂಗನವಾಡಿ ಮೇಲ್ವಿಚಾರಕಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಬಿತಾ ಸಿ.ಆರ್.‌ಪಿ, ಶಿಕ್ಷಣ ಇಲಾಖೆ, ಗಂಗಾಧರ್‌ , ಮಂಜುನಾಥ ಅಡಿಗ ಶಿರ್ವ ಆರಕ್ಷಕ ಠಾಣೆ, ಶ್ರೀಕಾಂತ್ ಗ್ರಾಮ ಆಡಳಿತ ಅಧಿಕಾರಿ, ಕ್ಲಾರೆನ್ಸ್‌ ಲೆಸ್ಟರ್ನ್‌ ಕರ್ನೇಲಿಯೋ ಗ್ರಾಮ ಆಡಳಿತ ಅಧಿಕಾರಿ, ಅಕ್ಷಯ್‌ ಕೃಷ್ಣ ನರೇಗಾ IEC ಕೋರ್ಡಿನೇಟರ್‌, ಶಂಕರ್‌ ಗ್ರಾಮ ತಾಂತ್ರಿಕ ಸಹಾಯಕರು , ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿ , ಸಮುದಾಯ ಆರೋಗ್ಯ ಅಧಿಕಾರಿ , ಸಂಜೀವಿನಿ ಸಂಘದ ಸದಸ್ಯರು, ಪಂಚಾಯತ್‌ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


ಗ್ರಾಮ ಪಂಚಾಯತ್‌ ಕಾರ್ಯದರ್ಶಿ ಪ್ರಸಾದ್‌ ಭಂಡಾರಿ ಕಾರ್ಯಕ್ರಮ ಸ್ವಾಗತಿಸಿ ವಂದಿಸಿದರು. ಆಶಾ ರವೀಂದ್ರ ಆಚಾರ್ಯ ಇವರು ಸನ್ಮಾನ ಕಾರ್ಯಕ್ರಮವನ್ನು ನಿರೂಪಿಸಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top