ಮೇಕೇರಿ: ಶ್ರೀ ಗಣೇಶ ಸೇವಾ ಸಮಿತಿಯಿಂದ ವಿಜೃಂಭಣೆಯ ಗಣೇಶೋತ್ಸವ

Upayuktha
0

ಗಮನಸೆಳೆದ ಭಜನೆ ಕುಣಿತ

 


ಮಡಿಕೇರಿ: ಮಡಿಕೇರಿ ಸಮೀಪದ ಮೇಕೇರಿ ಗ್ರಾಮದ ಶ್ರೀ ಗೌರೀಶಂಕರ ದೇವಾಲಯದಲ್ಲಿ  ಶ್ರೀ ಗಣೇಶ ಸೇವಾ ಸಮಿತಿ ಆಶ್ರಯದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಗಣೇಶನ ಶೋಭಾಯಾತ್ರೆಯಲ್ಲಿ ಪುತ್ತೂರಿನ ಭಜನಾ ತಂಡದಿಂದ ನೃತ್ಯ ಭಜನೆ  ಗಮನ ಸೆಳೆಯಿತು. 


ಆಗಸ್ಟ್ 27ರಂದು ಗಣೇಶನ ಉತ್ಸವ ಮೂರ್ತಿಯನ್ನು ಪ್ರತಿಷ್ಥಾಪಿಸುವ ಮೂಲಕ ಗಣೇಶೋತ್ಸವಕ್ಕೆ ಚಾಲನೆ ನೀಡಿ 29ರಂದು ಸಂಜೆ ಸುಭಾಷ್‌ನಗರದ ಹೊಳೆಯಲ್ಲಿ ಗಣೇಶನ ಉತ್ಸವ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು. 


ಈ ನಡುವೆ ದೇವಾಲಯದ ಆವರಣದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗ್ರಾಮದ ನಿವಾಸಿ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸನ್ಮಾನ ನಡೆಯಿತು. 


ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ  ವಾಗ್ಮಿ  ಶ್ರೀಶಾ ಅವರು  ಗಣೇಶೋತ್ವವದ ಆಚರಣೆ, ಮಹತ್ವ, ನಡೆದು ಬಂದ ಹಾದಿಯ ಕುರಿತು ಧಾರ್ಮಿಕ ಪ್ರವಚನ ನೀಡಿದರು. 


28ರಂದು ಸಂಜೆ ಖ್ಯಾತ ಗಾಯನ ತಂಡದಿಂದ ಸಂಗೀತ ಸತ್ಸಂಗ, ಧಾರ್ಮಿಕ ಪ್ರವಚನ ನಡೆಯಿತು.  ಶುಕ್ರವಾರ ಮಧ್ಯಾಹ್ನ 2ಗಂಟೆಗೆ ಶ್ರೀ ಗೌರಿ ಗಣೇಶನ ಉತ್ಸವ ಮೂರ್ತಿಯನ್ನು ಅಲಂಕೃತ ಭವ್ಯ ಮಂಟಪದಲ್ಲಿ ಮೇಕೇರಿ ಗ್ರಾಮದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಹೊರಟು ಸುಭಾಷ್ ನಗರದ ಹೊಳೆಯಲ್ಲಿ ವಿಸರ್ಜಿಸಲಾಯಿತು. ಶ್ರೀ ಗಣೇಶ ಸೇವಾ ಸಮಿತಿಯಿಂದ ಪ್ರತೀದಿ ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸಂತರ್ಪಣೆ ನಡೆಯಿತು. 


ಗಮನ ಸೆಳೆದ ಭಜನೆ ಕುಣಿತ 

ಈ ಬಾರಿ ಮೇಕೇರಿ ಗ್ರಾಮದಲ್ಲಿ ನೃತ್ಯ ಭಜನೆಯ ಸದ್ದು ಭಕ್ತಾದಿಗಳನ್ನು ಪುಳಕಿತಗೊಳಿಸಿತು. ಶ್ರೀ ಗಣೇಶ ಸೇವಾ ಸಮಿತಿಯ ಆಶ್ರಯದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಗಣೇಶನ ಶೋಭಾಯಾತ್ರೆಯಲ್ಲಿ  ಪುತ್ತೂರಿನ ಆನಡ್ಕದ ಶ್ರೀರಾಮ ಭಜನಾ ತಂಡದಿಂದ ನಡೆದ ನೃತ್ಯ ಭಜನೆಯು ಭಕ್ತಾದಿಗಳ ಮನಸೂರೆಗೊಂಡಿತು.




 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top