ಕೆನರಾ ಶಿಕ್ಷಣ ಸಂಸ್ಥೆ ವತಿಯಿಂದ ಇಸ್ರೋ ವಿಜ್ಞಾನಿ ಸುಮನ್ ಆರ್ ವಾಲ್ಕೆ ಅವರಿಗೆ ಸನ್ಮಾನ

Upayuktha
0


ಮಂಗಳೂರು: ಕೆನರಾ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿನಿ ಮತ್ತು ಇಸ್ರೋ ವಿಜ್ಞಾನಿಯಾದ ಶ್ರೀಮತಿ ಸುಮನ್ ಆರ್. ವಾಲ್ಕೆ ಅವರ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಳಿಗಾಗಿ ಕೆನರಾ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು


ಕೆನರಾದ ಹೆಮ್ಮಯ ಹಳೆಯ ವಿದ್ಯಾರ್ಥಿ ಹಾಗೂ ಪ್ರಸ್ತುತ ಮಂಗಳೂರು ದಕ್ಷಿಣದ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಈ ಸನ್ಮಾನವನ್ನು ನಡೆಸಿದ್ದು ಶ್ರೀಮತಿ ವಾಲ್ಕೆಯವರನ್ನು ಮರಳಿ ಈ ಸಂಸ್ಥೆಯಡಿ ಸನ್ಮಾನಿಸಲು ಹೆಮ್ಮೆಯಾಗುತ್ತದೆ ಎಂದರು.


ಇದೇ ವೇಳೆ ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಮತ್ತು ದಿ ಕೋಸ್ಟಲ್ ಆಸ್ಟ್ರೋನಮಿ ಗ್ರೂಪ್ ಜಂಟಿಯಾಗಿ ಆಯೋಜಿಸಿದ ಉಪಗ್ರಹ ಸಂವಹನ ಕಾರ್ಯಾಗಾರದಲ್ಲಿ, ಉಪಗ್ರಹ ಅಮೆಚೂರ್ ರೇಡಿಯೋ ಕ್ಲಬ್‌ನ ಸಹ ವಿಜ್ಞಾನಿಗಳಾದ ಡಾ. ರಾಹುಲ್ ವಾಘ್ಮರೆ, ಮೋಹನ್ ಮತ್ತು ಶ್ರೀಮತಿ ಶ್ವೇತಾ ಅವರ ವಿಶೇಷ ಕೊಡುಗೆಗಳಿಗಾಗಿ ಸನ್ಮಾನಿಸಲಾಯಿತು.


ಈ ನಮ್ಮ ಎಲ್ಲಾ ವಿಜ್ಞಾನಿಗಳ ಸಾಧನೆಗಳು ಕೆನರಾ ಸಮಾಜಕ್ಕೆ ಹೆಮ್ಮೆ ಮತ್ತು ಸ್ಫೂರ್ತಿಯಾಗಿದೆ. ಇಂದಿನ ಈ ಕಾರ್ಯಕ್ರಮವು ಸದಾ ಸ್ಮರಣೀಯವಾಗಿದ್ದು, ಸಮರ್ಪಣೆ ಮತ್ತು ಪರಿಶ್ರಮದಿಂದ, ಈ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಸಾಧನೆಯ ಶಿಖರವನ್ನು ಏರಿರುವುದು ಭವಿಷ್ಯದ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ.


ಈ ಸಂದರ್ಭದಲ್ಲಿ ಕೆನರಾ ಪ್ರೌಢಶಾಲಾ ಸಂಘದ ಗೌರವ ಕಾರ್ಯದರ್ಶಿ ರಂಗನಾಥ್ ಭಟ್, ಕೆನರಾ ವಿಕಾಸ್ ಸಂಸ್ಥೆಗಳ ಸಂಯೋಜಕ ಬಸ್ತಿ ಪುರುಷೋತ್ತಮ ಶೆಣೈ, ಕೆನರಾ ನಂದಗೋಕುಲ ಮತ್ತು ಕೆನರಾ ಅಂತಾರರಾಷ್ಟ್ರೀಯ ಶಾಲೆಯ ಸಂಚಾಲಕ ನರೇಶ್ ಶೆಣೈ, ಕೆನರಾ ಪ್ರೌಢಶಾಲೆ (ಮುಖ್ಯ) ಸಂಚಾಲಕಿ ಶ್ರೀಮತಿ ಅಶ್ವಿನಿ ಕಾಮತ್, ಕೆನರಾ ಪಿಯು ಕಾಲೇಜು ಪ್ರಾಂಶುಪಾಲೆ ಶ್ರೀಮತಿ ಲತಾ ಮಹೇಶ್ವರಿ ಹಾಗೂ ಕೋಸ್ಟಲ್ ಆಸ್ಟ್ರಾನೋಮಿ ಕ್ಲಬ್ ನ ಅಶ್ವಿನ್ ಶೆಣೈ ಕೂಡ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top