ಧರ್ಮಸ್ಥಳದಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವ

Upayuktha
0


ಚಿತ್ರ: ಧರ್ಮಸ್ಥಳದಲ್ಲಿ ಸೋಮವಾರ 108 ದಂಪತಿಗಳಿಂದ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಗಿರಿಜಾಕಲ್ಯಾಣ ಮಹೋತ್ಸವ ನಡೆಯಿತು.


ಉಜಿರೆ: ಬೆಂಗಳೂರಿನ ಅಖಿಲ ಕರ್ನಾಟಕ ಬ್ರಾಹ್ಮಣ ಯುವಕರ ಸಂಘ ಮತ್ತು “ನಮ್ಮ ಸಂಕಲ್ಪ ಪ್ರತಿಷ್ಠಾನ”ದ ಆಶ್ರಯದಲ್ಲಿ ಸೋಮವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಲೋಕಕಲ್ಯಾಣಾರ್ಥವಾಗಿ 108 ದಂಪತಿಗಳಿಂದ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಗಿರಿಜಾಕಲ್ಯಾಣ ಮಹೋತ್ಸವ ನಡೆಯಿತು.


ಸುಪ್ರಭಾತ, ಗಣಪತಿ ಪೂಜೆ, ದೇವನಾಂದಿ, ಕಂಕಣಧಾರಣೆ, ಗೋ ಪೂಜೆ, ಗಜ ಪೂಜೆ, ಸಾಮೂಹಿಕ ಶಿವಪೂಜೆ, ಅಷ್ಟಾವಧಾನ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆದವು.



ಮಹರ್ಷಿ ಆನಂದ ಗುರೂಜಿ ಶುಭಾಶಂಸನೆ ಮಾಡಿ ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಈ ಪವಿತ್ರ ಕಾರ್ಯಕ್ರಮದಿಂದ ಸಮಾಜದ ಆಪತ್ತುಗಳೆಲ್ಲ ನಿವಾರಣೆಯಾಗಿ ಸುಖ-ಶಾಂತಿ, ನೆಮ್ಮದಿ ನೆಲೆಸಲೆಂದು ಹಾರೈಸಿದರು.


ಆನಂದ ಗುರೂಜಿಯವರ ನೇತೃತ್ವದಲ್ಲಿ ವಿಶ್ವಶಾಂತಿಗಾಗಿ ಸಾಮೂಹಿಕ ಶಿವಪಂಚಾಕ್ಷರಿ ಪಠಣ ಮಾಡಲಾಯಿತು.


ಭಕ್ತಿಗೀತೆಗಳ ಗಾಯನ, ನೃತ್ಯಪ್ರದರ್ಶನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top