ಮಂಗಳೂರು, ಸೆಪ್ಟೆಂಬರ್ 11, 2025: 2025 ನೇ ಸಾಲಿನ ಹಬ್ಬದ ಸೀಸನ್ ಹತ್ತಿರ ಬರುತ್ತಿರುವ ಈ ಸಂದರ್ಭದಲ್ಲಿ ಭಾರತೀಯ ಸ್ವದೇಶಿ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್, `ಫ್ಯಾಷನ್ ಸ್ಪಾಟ್ ಲೈಟ್’ ಅನ್ನು ಘೋಷಣೆ ಮಾಡಿದೆ. ಇದು ವಿಶೇಷವಾಗಿ T2+ ಪ್ರದೇಶಗಳ ಡಿಜಿಟಲ್- ಮೊದಲ ಫ್ಯಾಷನ್ ಬ್ರ್ಯಾಂಡ್ ಗಳ ಬೆಳವಣಿಗೆಯನ್ನು ವೇಗಗೊಳಿಸುವ ದಿಸೆಯಲ್ಲಿ ವಿನ್ಯಾಸಗೊಂಡಿದೆ. ವಿಶೇಷವಾಗಿ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ಉತ್ತಮ ರೀತಿಯಲ್ಲಿ ವಿಸ್ತಾರಗೊಳಿಸಲು ಸಾಧ್ಯವಾಗದ T2+ ಪ್ರದೇಶಗಳ ವ್ಯಾಪಾರಿಗಳ ಬೆಳವಣಿಗೆಗೆ ಪೂರಕವಾದ ಫ್ಯಾಷನ್ ನ ಡಿ2ಡಿ ಲ್ಯಾಂಡ್ ಸ್ಕೇಪ್ ಆಗಿದೆ. ಫ್ಲಿಪ್ ಕಾರ್ಟ್ ವರ್ಷಾಂತ್ಯದ ವೇಳೆಗೆ 500 ಕ್ಕೂ ಹೆಚ್ಚು ಬ್ರ್ಯಾಂಡ್ ಗಳನ್ನು ತಲುಪುವ ಮೂಲಕ ಈ ಕಾರ್ಯಕ್ರಮವನ್ನು 10 ಪಟ್ಟಿನವರೆಗೆ ಹೆಚ್ಚಳ ಮಾಡುವ ಯೋಜನೆ ರೂಪಿಸಿದೆ ಮತ್ತು ಅದರ ವ್ಯಾಪ್ತಿಯನ್ನು ಹಲವಾರು ಬ್ರ್ಯಾಂಡ್ ಗಳಿಗೆ ವಿಸ್ತರಣೆ ಮಾಡಲಿದೆ. ಫ್ಯಾಷನ್ ಸ್ಪಾಟ್ ಲೈಟ್ ಅನ್ನು ಡಿ2ಸಿ ಫ್ಯಾಷನ್ ಪ್ರತಿಭೆಗಳಿಗೆ ನಿಜವಾಗಿಯೂ ಪ್ರಜಾಪ್ರಭುತ್ವೀಕರಿಸಿದ ಲಾಂಚ್ ಪ್ಯಾಡ್ ಆಗಿ ಪರಿವರ್ತನೆ ಮಾಡುತ್ತದೆ.
ಈ ಕಾರ್ಯಕ್ರಮವು ಹಬ್ಬದ ಋತುವಿಗೆ ಸರಿಯಾಗಿ ಬರುತ್ತದೆ. ಸಾಂಪ್ರದಾಯಿಕವಾಗಿ ಫ್ಯಾಷನ್ ಬೇಡಿಕೆಯ ಉತ್ತುಂಗದಲ್ಲಿದೆ. ಇಂದು ಫ್ಲಿಪ್ ಕಾರ್ಟ್ ಫ್ಯಾಷನ್ ನಲ್ಲಿ 100+ ಡಿ2ಸಿ ಫ್ಯಾಷನ್ ಬ್ರ್ಯಾಂಡ್ ಗಳು ಈಗಾಗಲೇ ಲಭ್ಯವಿದ್ದು, ದೇಶಾದ್ಯಂತ ಲಕ್ಷಾಂತರ ಖರೀದಿದಾರರಿಗೆ ಕ್ಯುರೇಟೆಡ್, ಟ್ರೆಂಡ್-ನೇತೃತ್ವದ ಆಯ್ಕೆಯನ್ನು ತಲುಪಿಸಲು ಸಂಸ್ಥೆಯು ತನ್ನ ಪ್ರಯತ್ನಗಳನ್ನು ವಿಸ್ತರಣೆ ಮಾಡುತ್ತದೆ. ಹಲವಾರು ಡಿ2ಸಿ ಫ್ಯಾಷನ್ ಬ್ರ್ಯಾಂಡ್ ಗಳು ಈಗಾಗಲೇ ಫ್ಲಿಪ್ ಕಾರ್ಟ್ ನ ಮಾರುಕಟ್ಟೆಯಲ್ಲಿ ಅದ್ಭುತ ಬೆಳವಣಿಗೆಯನ್ನು ಕಂಡಿವೆ. ಉದಾಹರಣೆಗೆ Rare Rabbit ವರ್ಷಕ್ಕೆ ಶೇ.500 ಕ್ಕಿಂತ ಹೆಚ್ಚು ಬೆಳವಣಿಗೆಯನ್ನು ಕಾಣುತ್ತಿದೆ. ಅದೇರೀತಿ, ಮಿರಾಜಿಯೊ ಶೇ.2300 ಕ್ಕಿಂತ ಅಧಿಕ ಪ್ರಮಾಣದಲ್ಲಿ ಪ್ರಗತಿ ಸಾಧಿಸುತ್ತಿದೆ ಮತ್ತು ಝೌಕ್ ಕಳೆದ ಒಂದು ವರ್ಷದಲ್ಲಿ ಶೇ.200 ಕ್ಕೂ ಹೆಚ್ಚು ಬೆಳವಣಿಗೆ ಕಂಡಿದೆ.
ಫ್ಲಿಪ್ ಕಾರ್ಟ್ ನ ಫ್ಯಾಷನ್ ವಿಭಾಗದ ಉತ್ಪನ್ನಗಳ ಖರೀದಿಯಲ್ಲಿ ಭಾಗಿಯಾಗುವ ಪ್ರತಿ 3 ಗ್ರಾಹಕರಲ್ಲಿ ಒಬ್ಬರು ಮೊದಲ ಬಾರಿಯ ಗ್ರಾಹಕರಾಗಿದ್ದಾರೆ. ಕಳೆದ ಒಂದು ವರ್ಷದಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಹೋಲಿಸಿದರೆ ಆ್ಯಪ್ ನಲ್ಲಿ ಖರೀದಿ ಉದ್ದೇಶವು 3 ಪಟ್ಟಿನಷ್ಟು ಹೆಚ್ಚಳವಾಗಿದೆ. ಈ ಮೂಲಕ ಡಿಜಿಟಲ್ –ಫಸ್ಟ್ ಬ್ರ್ಯಾಂಡ್ ಗಳಿಗೆ ಹೈ-ಕನ್ವರ್ಷನ್ ವಾತಾವರಣ ಸೃಷ್ಟಿಸುವ ವೇದಿಕೆಯಾಗಿ ಸ್ಪಾಟ್ ಲೈಟ್ ಹೊರಹೊಮ್ಮಿದೆ. ಸಾಂಪ್ರದಾಯಿಕ ವೇಗವರ್ಧಕ ಮಾದರಿಗಳನ್ನು ಮೀರಿ, ಈ ಕಾರ್ಯಕ್ರಮವು ಫ್ಲಿಪ್ ಕಾರ್ಟ್ ನ ಫುಲ್-ಸ್ಟ್ಯಾಕ್ ಸಾಮರ್ಥ್ಯಗಳನ್ನು ಸಂಯೋಜನೆ ಮಾಡುತ್ತದೆ. ಇದರಲ್ಲಿ ವಿಡಿಯೋ ಕ್ಯಾಟಲಾಗ್, ಇಮೇಜ್ ಸರ್ಚ್, ಲೈವ್ ಕಾಮರ್ಸ್ ಮತ್ತು ವರ್ಚುವಲ್ ಟ್ರೈ-ಆನ್ ಗಳು ಸೇರಿವೆ. ತಂತ್ರಜ್ಞಾನ-ಚಾಲಿತ, ನಂಬಿಕೆ-ನೇತೃತ್ವದ ಪರಿಸರ ವ್ಯವಸ್ಥೆಯನ್ನು ರಚಿಸಲು ಫ್ಯಾಷನ್ ಉದ್ಯಮಿಗಳು ವೇಗ ಮತ್ತು ವಿಶ್ವಾಸದಿಂದ ಮಾಪನ ಮಾಡಬಹುದಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ