ವೈಫಲ್ಯವೇ ಯಶಸ್ಸಿನ ಆಧಾರ ಸ್ತಂಭ: ಪ್ರೊ. ಪ್ರಶಾಂತ್ ನೀಲಾವರ

Chandrashekhara Kulamarva
0

ವಿವೇಕಾನಂದ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಉಪನ್ಯಾಸ



ಪುತ್ತೂರು: ನಾಗರಿಕ ಸೇವೆಯ ಹುದ್ದೆಯನ್ನು ಪಡೆಯುವುದರಿಂದ ಅಧಿಕಾರ ಮತ್ತು ಸಮಾಜದಲ್ಲಿ ಉತ್ತಮ ಗೌರವ ದೊರೆಯಲು ಸಾಧ್ಯ. ಈ ಹಾದಿಯಲ್ಲಿ ಯಶಸ್ಸು ಅನ್ನುವುದು ನಮ್ಮ ಪ್ರಯತ್ನದಲ್ಲಿ ರುತ್ತದೆ. ಆಗ ಎದುರಾಗುವ ವೈಫಲ್ಯವು ಯಶಸ್ಸಿನ ಆಧಾರಸ್ತಂಭವಾಗಲಿದೆ ಎಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ, ಪ್ರೊ. ಪ್ರಶಾಂತ್ ನೀಲಾವರ ಅಭಿಪ್ರಾಯಪಟ್ಟರು.


ಪುತ್ತೂರಿನ ವಿವೇಕಾನಂದ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ದ ರಾಜಕೀಯ ವಿಭಾಗ, ಪೊಲಿಟಿಕಲ್ ಪ್ರೊ., ಮಾನವಿಕ ಸಂಘ ಹಾಗೂ ಐಕ್ಯೂಎಸಿ ಆಶ್ರಯದಲ್ಲಿ ಶನಿವಾರ ನಡೆದ "ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸಿನ ತಂತ್ರಗಾರಿಕೆ" ಎಂಬ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಧರ್ ನಾಯ್ಕ್  ಅವರು, ಮಾನವನಿಗೆ ಸ್ಪರ್ಧಾತ್ಮಕ ಜೀವನ ಬಹಳ ಮುಖ್ಯ. ಪೈಪೊಟಿಗಾರರು ಇದ್ದಾಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಹೊರಹೊಮ್ಮಲು ಶೈಕ್ಷಣಿಕ ಉತ್ಕೃಷ್ಟತೆಯ ಜೊತೆಗೆ ಗುಣ ಮತ್ತು ನಡತೆ ಮಹತ್ವದ ಪಾತ್ರ ವಹಿಸುತ್ತದೆ. ಆದರೆ ಶೈಕ್ಷಣಿಕದಲ್ಲಿ ಶ್ರೇಷ್ಠತೆಯನ್ನು ಪಡೆಯಬೇಕಾದರೆ ಸ್ಪರ್ಧಾತ್ಮಕ ಪರೀಕ್ಷೆ  ಪ್ರಮುಖವಾಗಿರುತ್ತದೆ ಎಂದರು.


ರಾಜಕೀಯ ವಿಭಾಗದ ವಿದ್ಯಾರ್ಥಿ ಸಂಯೋಜಕ ಮಧು. ಕೆ. ಆರ್ ಉಪಸ್ಥಿತರಿದ್ದರು.


ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆಅನಿತಾ ಕಾಮತ್ ಸ್ವಾಗತಿಸಿದರು. ಮಾನವಿಕ ವಿಭಾಗದ ಸಂಯೋಜಕಿ ಹಾಗೂ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ವಿದ್ಯಾ. ಎಸ್. ವಂದಿಸಿದರು. ತೃತೀಯ ಕಲಾ ವಿಭಾಗದ ವಿದ್ಯಾರ್ಥಿ ವರುಣ್‍ ಕೃಷ್ಣ ನಿರೂಪಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
To Top