ಎಂಸಿಎಫ್ ಕಂಪೆನಿಯ ಸಾಮಾಜಿಕ ಬದ್ಧತಾ ನಿಧಿಯಡಿ ಸೌಲಭ್ಯ ವಿತರಣೆ

Chandrashekhara Kulamarva
0


ಮಂಗಳೂರು: ಎಂಸಿಎಫ್ ಕಂಪೆನಿಯ ಸಾಮಾಜಿಕ ಬದ್ಧತಾ ನಿಧಿಯಡಿ ಕೃತಕ ಮಂಡಿ ಜೋಡಣೆ, ಶ್ರವಣ ಸಾಧನ ವಿತರಣೆ, ಲೇಡಿಗೋಷನ್ ಹಾಗೂ ಮೂಡುಶೆಡ್ಡೆಯ ಟಿಬಿ ಸೆಂಟರ್‍ಗೆ ಸೌಲಭ್ಯ ವಿತರಣೆ ಎಂಸಿಎಫ್ ಸಭಾಂಗಣದಲ್ಲಿ ಗುರುವಾರ ಜರಗಿತು.


ಶಾಸಕರಾದ ಡಾ.ಭ ರತ್ ಶೆಟ್ಟಿ ವೈ, ದ.ಕ ಸಂಸದ ಕ್ಯಾ. ಬ್ರಿಜೇಶ್ ಚೌಟ, ಎಂಸಿಎಫ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತಿನ್ ಎಂ. ಕಾಂತಕ್, ಎಂಸಿಎಫ್ ಉತ್ಪಾದನಾ ವಿಭಾಗದ ಮುಖ್ಯಾಧಿಕಾರಿ ಗಿರೀಶ್ ಎಸ್., ಮುಖ್ಯ ಹಣಕಾಸು ಅಧಿಕಾರಿ ಟಿ.ಎಂ ಮುರಳೀಧರನ್, ಸಿಎಸ್‍ಆರ್ ವಿಭಾಗದ ಅಧಿಕಾರಿಗಳು, ಎಂಡೋಲೈಟ್ ಸಂಸ್ಥೆಯ ಪ್ರಮುಖರು, ಫಲಾನುಭ ವಿಗಳು ,ವೆನ್‍ಲಾಕ್ ಸಂಸ್ಥೆಯ ವೈದ್ಯರು, ಸರಕಾರೇತರ ಸಂಘ ಸಂಸ್ಥೆಯ ಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರು.



ಎಂಸಿಎಫ್ ಸಂಸ್ಥೆಯ ಡಾ.ಯೋಗೀಶ್ ನಿರೂಪಿಸಿದರು. ವಿವೇಕ್ ಕೋಟ್ಯಾನ್ ವಂದಿಸಿದರು.


ಕಾರ್ಯಕ್ರಮದಲ್ಲಿ 12 ಲಕ್ಷಕ್ಕೂ ಹೆಚ್ಚು ಮೌಲ್ಯದ 12 ಕೃತಕ ಕಾಲು ಜೋಡಣೆ, ಒಂದು ಶ್ರವಣ ಸಾಧನ ಲೇಡಿಗೋಷನ್ ನವಜಾತ ಶಿಶುಕೇಂದ್ರಕ್ಕೆ 3.50 ಲಕ್ಷ ರೂಪಾಯಿಯ ಎನ್‍ಐಸಿಯು ಯಂತ್ರ, ಮೂಡುಶೆಡ್ಡೆ ಟಿಬಿ ಸೆಂಟರ್ ಗೆ 10 ಮಂಚಗಳು, ಒಂದು ಟ್ರಾಲಿ ವಿತರಣೆ ಮಾಡಲಾಯಿತು.


Post a Comment

0 Comments
Post a Comment (0)
To Top