'ಅನಂತ ಸೌಖ್ಯ' ಪ್ರಕಲ್ಪದಿಂದ ವೈದ್ಯರೊಂದಿಗೆ ಸಂವಾದ

Upayuktha
0


ಮಂಗಳೂರು: ಸೇವಾಭಾರತಿ (ರಿ) ಮಂಗಳೂರು ಇದರ ಹಿರಿಯ ನಾಗರಿಕರ ಸೇವಾ ಪ್ರಕಲ್ಪವಾದ “ಅನಂತ ಸೌಖ್ಯ” ಇದರ ವತಿಯಿಂದ, ಶನಿವಾರ ((ಸೆ. 20) “ಇಳಿ ವಯಸ್ಸಿನಲ್ಲಿ ಮಾನಸಿಕ ಆರೋಗ್ಯ” ಎಂಬ ವಿಷಯದ ಕುರಿತು ಖ್ಯಾತ ಮನೋವಿಜ್ಞಾನ ಸಮಾಲೋಚಕರು ಮತ್ತು ಸಂಮೋಹನಾ ವಿದ್ಯಾ ಚಿಕಿತ್ಸಕರೂ ಆದ ಡಾ. ಡೆನ್ನಿಸ್ ರಾಡ್ರಿಗಸ್, ಪಿ.ಹೆಚ್.ಡಿ ಇವರಿಂದ ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮವು, ವಿ.ಟಿ. ರಸ್ತೆಯಲ್ಲಿರುವ ಚೇತನಾ ಬಾಲವಿಕಾಸ ಕೇಂದ್ರ ಶಾಲಾ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಡಾ.ಡೆನ್ನಿಸ್ ರಾಡ್ರಿಗಸ್ ಅವರು ಪ್ರಾತ್ಯಕ್ಷಿಕೆ ಮೂಲಕ ಉಪನ್ಯಾಸ ನೀಡಿ ವೃದ್ಧಾಪ್ಯದಲ್ಲಿ ಬರುವ ಸಮಸ್ಯೆಗಳು ಹಾಗೂ ಅದಕ್ಕೆ ಪರಿಹಾರೋಪಾಯವನ್ನು ತಿಳಿಸಿದರು. “ನಮ್ಮಲ್ಲಿ ಕಾಲಾನುಕ್ರಮ ವಯಸ್ಸು ಮತ್ತು ಜೈವಿಕ ವಯಸ್ಸು ಎಂಬ ಎರಡು ವಿಧಗಳಿವೆ. ಕಾಲಾನುಕ್ರಮ ವಯಸ್ಸು ಜಾಸ್ತಿ ಇದ್ದರೂ, ನಾವು ನಮ್ಮ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಂಡರೆ ಜೈವಿಕ ವಯಸ್ಸನ್ನು ಕಾಲಾನುಕ್ರಮ ವಯಸ್ಸಿಗಿಂತಲೂ ಕಡಿಮೆಇರುವಂತೆ ನೋಡಿಕೊಳ್ಳಲು ಸಾಧ್ಯ್ಯ” ಎಂದು ತಿಳಿಸಿದರು.


ಅನಂತರ, ನಡೆದ ಸಂವಾದದಲ್ಲಿ ಡಾ.ಡೆನ್ನಿಸ್ ರಾಡ್ರಿಗಸ್ ಅವರು ಸಭಿಕರ ಪ್ರಶ್ನೆಗೆ ಸೂಕ್ತ ಉತ್ತರವನ್ನು ನೀಡಿದರು. ವೇದಿಕೆಯಲ್ಲಿ ಸೇವಾಭಾರತಿ ಸಂಸ್ಥೆಯ ಗೌರವಾಧ್ಯಕ್ಷ ನಾಗರಾಜ್ ಭಟ್, ಕೋಶಾಧಿಕಾರಿ  ವಿನೋದ್ ಶೆಣೈ ಹಾಗೂ ಅನಂತ ಸೌಖ್ಯದ ಸಂಚಾಲಕ ಉಮೇಶ್ ಶೆಣೈ ಇವರು ಉಪಸ್ಥಿತರಿದ್ದರು.


ಉಮೇಶ್ ಶೆಣೈ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೇತನಾ ಶಾಲಾ ಶಿಕ್ಷಕಿ ಶ್ರೀಮತಿ ವೀಣಾ ನಾಯಕ್ ಅವರು ಪ್ರಾರ್ಥನಾಗೀತೆ ಹಾಡಿದರು. ನಾಗರಾಜ್ ಭಟ್ ಸ್ವಾಗತಿಸಿ, ಹಿರಿಯ ಸ್ವಯಂಸೇವಕರಾದ  ಪ್ರಕಾಶ್ ಪೈ ವಂದಿಸಿದರು. ಚೇತನಾ ಶಾಲಾ ಸಿಬ್ಬಂದಿ, ಶಿಕ್ಷಕ, ಶಿಕ್ಷಕೇತರರು ಮತ್ತು ಸೇವಾಭಾರತಿ ಸಂಸ್ಥೆಯ ಸ್ವಯಂಸೇವಕರು ಸಹಕರಿಸಿದರು. ಸುಮಾರು 62 ಮಂದಿ ಸಂವಾದದಲ್ಲಿ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top