ಸುರತ್ಕಲ್: ವಿಶ್ವದ ಸಕಲ ಜೀವದ ಒಳಿತಗಾಗಿ ನಡೆಸುವ ಸ್ವಚ್ಛ ಸಾಗರ ಸುರಕ್ಷಿತ ಸಾಗರ ಅಭಿಯಾನದ ಅಂಗವಾಗಿ ಸುರತ್ಕಲ್ ರೋಟರಿ ಕ್ಲಬ್ ಚಿತ್ರಾಪುರ ಕಡಲ ಕಿನಾರೆಯಲ್ಲಿ ಸ್ವಚ್ಛತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾರ್ಯದರ್ಶಿ ರಾಮಮೋಹನ್ ಎಣ್ಮಕಜೆ ಪ್ಲಾಸ್ಟಿಕ್ ತ್ಯಾಜ್ಯಗಳ ದುಷ್ಪರಿಣಾಮ ತಿಳಿಸಿದರು. ಅಧ್ಯಕ್ಷ ರಾಮಚಂದ್ರ ಬಿ. ಕುಂದರ್, ನಿರ್ದೇಶಕರಾದ ಕೃಷ್ಣ ಮೂರ್ತಿ, ಆನಂದ ರಾವ್, ರಘು, ಶ್ರೀಧರ್ ಟಿ. ಎನ್., ಪಣಂಬೂರು ಮೊಗವೀರ ಮಹಾ ಸಭಾದ ಅಧ್ಯಕ್ಷ ಮಾಧವ ಸುವರ್ಣ, ಎಂ.ಆರ್.ಪಿ.ಎಲ್ ನ ರಾಜೇಂದ್ರ, ಸಂಪತ್ ಕುಮಾರ್, ಗೋವಿಂದ ದಾಸ ಕಾಲೇಜಿನ ರಕ್ಷಕ ಶಿಕ್ಷಕರ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಮತ್ತುರೋಟರಿ ಕ್ಲಬ್‌ನ ಸದಸ್ಯರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

