ಪುತ್ತೂರು: ಮೇಯಲು ಬಿಟ್ಟ ದನ ಕಾಣೆಯಾದ ಬಗ್ಗೆ ಪುತ್ತೂರು ತಾಲೂಕು ಪಾಣಾಜೆ ಚಂದ್ರಗಿರಿಯ ನಿವಾಸಿ ಗಣೇಶ್ ಎ.ಆರ್ ಅವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸೆ.4ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಚಂದ್ರಗಿರಿ ಎಂಬಲ್ಲಿ ಮೇಯಲು ಬಿಟ್ಟ ದನ ಕಾಣೆಯಾಗಿರುತ್ತದೆ. ದನದ ಟ್ಯಾಗ್ ನಂಬರ್ 102996883365 ಆಗಿರುತ್ತದೆ. ನಾವು 3 ದಿವಸದಿಂದ ದನಕ್ಕಾಗಿ ಹುಡಕಾಡಿದ್ದು, ದನದ ಯಾವುದೇ ಸುಳಿವು ಕಂಡುಬಂದಿರುವುದಿಲ್ಲ. ಆದರೆ ಮಾಂಸಕ್ಕಾಗಿ ಯಾರಾದರೂ ಕೊಂಡುಹೋಗಿರಬಹುದೆಂಬ ಸಂಶಯ ನಮಗೆ ಉಂಟಾಗಿದೆ. ಇದರಿಂದ ಭಯದ ವಾತಾವಾರಣ ಸೃಷ್ಟಿಯಾಗಿರುತ್ತದೆ. ಆದ್ದರಿಂದ ನಮಗೆ ಇದರ ಬಗ್ಗೆ ಪರಿಶೀಲನೆ ಮಾಡಿ ಸರಿಯಾದ ಕ್ರಮ ಕೈಗೊಳ್ಳಬೇಕಾಗಿ ಈ ಮೂಲಕ ವಿನಂತಿಸುತ್ತಿದ್ದೇನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ