ಬುಡ್ನಾರು ಶ್ರೀಪತಿ ಆಚಾರ್ಯ ನಿಧನ

Chandrashekhara Kulamarva
0



ಉಡುಪಿ: ಬುಡ್ನಾರು ನಿವಾಸಿ ಶ್ರೀಪತಿ ಆಚಾರ್ಯ (75 ವರ್ಷ) ಬುಧವಾರದಂದು ಬೆಂಗಳೂರಿನ ಪುತ್ರನ ಮನೆಯಲ್ಲಿ ನಿಧನ ಹೊಂದಿದರು. 


ಶ್ರೀ ಪೇಜಾವರ ಮಠದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪೂರ್ವಾಶ್ರಮದ ಹತ್ತಿರದ ಸಂಬಂಧಿಯಾಗಿದ್ದ ಆಚಾರ್ಯರು ಕರ್ಣಾಟಕ ಬ್ಯಾಂಕ್ ಸಿಬಂದಿಯಾಗಿ ಅನೇಕ ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.


ಏಳು ತಿಂಗಳ ಹಿಂದೆ ರಸ್ತೆ ಅಫಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದರು. ಬ್ರಾಹ್ಮಣ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಆಚಾರ್ಯರು ಓರ್ವ ಪುತ್ರ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಆಚಾರ್ಯರ ನಿಧನಕ್ಕೆ ಉಡುಪಿಯ ಬ್ರಾಹ್ಮಣ ಸಂಘಟನೆಗಳು ತೀವ್ರ ಸಂತಾಪ ವ್ಯಕ್ತಪಡಿಸಿವೆ.


Post a Comment

0 Comments
Post a Comment (0)
To Top