ಬಳ್ಳಾರಿ: ಬಳ್ಳಾರಿ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ (ಬಿಐಟಿಎಂ) ಸೆಪ್ಟೆಂಬರ್ 15ರಿಂದ 20ರವರೆಗೆ “ಸ್ಮಾರ್ಟ್ ಮತ್ತು ಸುಸ್ಥಿರ ಕೃಷಿ: ಸಾಮಾಜಿಕ ಪರಿಣಾಮಕ್ಕಾಗಿ ಎಐ, ಐಓಟಿ ಮತ್ತು ಬಿಗ್ ಡೇಟಾವನ್ನು ಬಳಸಿಕೊಳ್ಳುವುದು” (“Smart and Sustainable Agriculture: Leveraging AI, IoT, and Big Data for Societal Impact”) ಎಂಬ ವಿಷಯದಡಿ ಒಂದು ವಾರದ ಅಟಲ್ ಫ್ಯಾಕಲ್ಟಿ ಅಭಿವೃದ್ಧಿ ಕಾರ್ಯಕ್ರಮ (ATAL Faculty Development Program) ಆಯೋಜಿಸಿದೆ.
ಈ ಕಾರ್ಯಕ್ರಮವನ್ನು ಎಐಸಿಟಿಇಯ ಅಟಲ್ ಅಕಾಡೆಮಿ ಪ್ರಾಯೋಜಿಸಿದ್ದು, ಬಿಐಟಿಎಂನ ಕಂಪ್ಯೂಟರ್ ಸೈನ್ಸ್ (ಡೇಟಾ ಸೈನ್ಸ್) ವಿಭಾಗವು ನಡೆಸಲಿದೆ. ದೇಶದ ಪ್ರತಿಷ್ಠಿತ ಐಐಟಿ, ಎನ್‌ಐಟಿ ಹಾಗೂ ಕೈಗಾರಿಕಾ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆ, ಸುಸ್ಥಿರತೆ ಮತ್ತು ಸಾಮಾಜಿಕ ಪರಿಣಾಮಗಳ ಕುರಿತು ವಿಶ್ಲೇಷಣೆ ಹಾಗೂ ಚರ್ಚೆ ನಡೆಸಲಿದ್ದಾರೆ. “ಪ್ರಾಧ್ಯಾಪಕರಿಗೆ ನವೀಕೃತ ಜ್ಞಾನವನ್ನು ನೀಡುವತ್ತ ಈ ಕಾರ್ಯಕ್ರಮ ಮಹತ್ವದ ಹೆಜ್ಜೆಯಾಗಲಿದೆ” ಎಂದು ಕಾಲೇಜಿನ ಪ್ರಾಚಾರ್ಯರು ಡಾ. ಯಡವಳ್ಳಿ ಬಸವರಾಜ್ ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಸಂಸ್ಥೆಯ ನಿರ್ದೇಶಕ ವೈ. ಜೆ. ಪೃಥ್ವಿರಾಜ ಭೂಪಾಲ್ ಹಾಗೂ ಅಧ್ಯಕ್ಷ ಡಾ. ಯಶವಂತ್ ಭೂಪಾಲ್ ಅವರ ಸಂಪೂರ್ಣ ಬೆಂಬಲ ಲಭಿಸಿದೆ. ಕಾರ್ಯಕ್ರಮದ ಮಾರ್ಗದರ್ಶನವನ್ನು ವಿಭಾಗ ಮುಖ್ಯಸ್ಥೆ ಡಾ. ಆರಾಧನಾ ಡಿ (ಸಿಎಸ್‌ಇ – ಡೇಟಾ ಸೈನ್ಸ್), ಡೀನ್ ಡಾ.ಆರ್.ಎನ್.ಕುಲಕರ್ಣಿ (ಕಂಪ್ಯೂಟರ್ ಸೈನ್ಸ್) ಹಾಗೂ ಉಪ ಪ್ರಾಚಾರ್ಯರು ಡಾ. ಬಿ. ಎಸ್. ಖೇಣೆದ್ ಒದಗಿಸುತ್ತಿದ್ದಾರೆ. ಸಂಯೋಜಕರಾಗಿ ಡಾ. ಜಗದೀಶ್ ಆರ್. ಎಮ್., ಸಹ ಸಂಯೋಜಕರಾಗಿ ಡಾ. ರೇಣುಕಾ ಸಾಗರ್ ಮತ್ತು ಅಝರ್ ಬೈಗ್ ಎಂ ಕಾರ್ಯನಿರ್ವಹಿಸುತ್ತಿದ್ದು, ಮಂಜುನಾಥ್ ಕೆ ಕೋರ್ಸ್ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ