ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 2ರ ವರೆಗೆ ತಿರುಮಲದಲ್ಲಿ ಜರುಗುವ ಬ್ರಹ್ಮೋತ್ಸವದ ಅಂಗವಾಗಿ ಬೆಂಗಳೂರಿನ ವಯ್ಯಾಲಿಕಾವಲಿನ 16ನೇ ಅಡ್ಡರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ (ಟಿ ಟಿ ಡಿ) ದಲ್ಲಿ ಪ್ರತಿದಿನ ಸಂಜೆ 6-00 ರಿಂದ 7-15ರ ವರೆಗೆ ಸಂಗೀತೋತ್ಸವ ಕಾರ್ಯಕ್ರಮ ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ :
ಸೆಪ್ಟೆಂಬರ್ 24, ಬುಧವಾರ : ಗುಣವರ್ಧನ್ ಆನಂದ ರಾಮ್ ಮತ್ತು ಸಂಗಡಿಗರು
ಸೆಪ್ಟೆಂಬರ್ 25, ಗುರುವಾರ : ಎಸ್.ಆರ್. ರಾಘವೇಂದ್ರ ಮತ್ತು ಸಂಗಡಿಗರು
ಸೆಪ್ಟೆಂಬರ್ 26, ಶುಕ್ರವಾರ : ಕು|| ಮನಸ್ವಿ ಜಿ. ಕಶ್ಯಪ್ (ಗಾಯನ), ಕೃಷ್ಣ ಕಶ್ಯಪ್ (ಪಿಟೀಲು), ಆರ್. ಸೂರ್ಯ ಕಿರಣ್ (ಮೃದಂಗ)
ಸೆಪ್ಟೆಂಬರ್ 27, ಶನಿವಾರ : ರೂಪಾ ಶ್ರೀಕಾಂತ್ ಮತ್ತು ಸಂಗಡಿಗರು
ಸೆಪ್ಟೆಂಬರ್ 28, ಭಾನುವಾರ : ರಾಜಶ್ರೀ ಜೋಶ್ಯರ್ ಮತ್ತು ಸಂಗಡಿಗರು
ಸೆಪ್ಟೆಂಬರ್ 29, ಸೋಮವಾರ : ವರ್ಣಶ್ರೀ ಮುರೂರ್ (ಗಾಯನ), ಶ್ರೀ ಕೃಷ್ಣ ಕಶ್ಯಪ್ (ಪಿಟೀಲು), ಕೌಂಡಿನ್ಯ (ಮೃದಂಗ)
ಸೆಪ್ಟೆಂಬರ್ 30, ಮಂಗಳವಾರ : ಕು|| ಅನನ್ಯ ಬೆಳವಾಡಿ (ಗಾಯನ), ಕೃಷ್ಣ ಕಶ್ಯಪ್ (ಪಿಟೀಲು), ಕೌಂಡಿನ್ಯ (ಮೃದಂಗ)
ಅಕ್ಟೋಬರ್ 1, ಬುಧವಾರ : ಕವನಾ ರಾಜ್ ಕುಮಾರ್ ಮತ್ತು ಸಂಗಡಿಗರು
ಅಕ್ಟೋಬರ್ 2, ಗುರುವಾರ : ಎ.ಎಂ. ಭಾಗ್ಯಲಕ್ಷ್ಮಿ ಮತ್ತು ಸಂಗಡಿಗರು
ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಟಿ ಟಿ ಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ ಪಿ. ಭುಜಂಗರಾವ್ ಅವರು ವಿವರಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


