ಅಳಿವಿನ ಅಂಚಿನಲ್ಲಿರುವ ಹಳ್ಳಿ ಬದುಕು

Upayuktha
0


ಳ್ಳಿ ಎಂದು ಹೇಳುವಾಗ ನಮಗೆ ನೆನಪಿಗೆ ಬರುವುದು ಅಲ್ಲಿಯ ವಾತಾವರಣ. ವಿಶಾಲವಾದ ಪರಿಸರದಲ್ಲಿ ತನ್ನದೇ ಆದ ಗಾಳಿ ಬೀಸಿದಾಗ ಮನಸ್ಸಿಗೆ ಆಗುವ ಖುಷಿ ಅಂತಿಂಥದ್ದಲ್ಲ. ಸುತ್ತ ನಾಲ್ಕು ದಿಕ್ಕು ವಿಶಾಲವಾದ ಬೆಟ್ಟ, ಗುಡ್ಡ, ನದಿ, ಕೆರೆ, ಕಣಿವೆಗಳನ್ನು ಒಳಗೊಂಡಿದ್ದು ಜನರಿಗೆ ಜೀವಿಸಲು  ಅನುವು ಮಾಡಿಕೊಟ್ಟಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಹಳ್ಳಿಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡು ಮುಂಬರುವ ಸಾಧ್ಯತೆ ಇದೆ. ಹಳ್ಳಿಗಳನ್ನು ನಗರಗಳನ್ನಾಗಿ ವಿಸ್ತರಿಸಲು ಬೃಹತ್ ಪ್ರಮಾಣದಲ್ಲಿ ಮರಗಳನ್ನು ಕಡಿದು ಕಾಡುಗಳನ್ನು ನಾಶ ಮಾಡಲಾಗುತ್ತಿದ್ದು, ಅಲ್ಲಿ ಗಗನಚುಂಬಿ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ.


ಇದರಿಂದ ಬಹುತೇಕ ಅರಣ್ಯಗಳು ನಾಶವಾಗುತ್ತವೆಯೇ ಹೊರತು ಅಭಿವೃದ್ಧಿಯಾಗುವುದಿಲ್ಲ. ನಮ್ಮ ಪೂರ್ವಜರು ನಿಸರ್ಗದೊಡನೆ ಬೆರೆತು ಬದುಕಿದವರಾಗಿದ್ದು, ಅವರು ತಮ್ಮ ಮನೆಗಳನ್ನು ಮುಳಿ ಹುಲ್ಲಿನಿಂದ ನಿರ್ಮಿಸುತ್ತಿದ್ದರು ಅಷ್ಟೇ ಅಲ್ಲದೆ ಮಣ್ಣಿನ ಮಡಿಕೆಗಳು, ಅಡಿಗೆ ಮಾಡಲು ಬಳಸುತ್ತಿದ್ದ ಮಣ್ಣಿನ ಒಲೆಗಳು, ರುಬ್ಬುವ ಕಲ್ಲುಗಳು ಇತ್ತೀಚಿನ ದಿನಗಳಲ್ಲಿ ಕಾಣಸಿಗುವುದೇ  ಅಪರೂಪವಾಗಿದೆ. ಇಂದಿನ ದಿನಗಳಲ್ಲಿ ಇವುಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡು ಕಣ್ಮರೆಯಾದರೂ ಕೆಲವರು ಇಂದಿಗೂ ಇವುಗಳನ್ನು ಬಳಸಿಕೊಂಡು ಬರುತ್ತಿದ್ದಾರೆ. ಹಿಂದೆ ಜನರು ಯಾವುದೇ ರೀತಿಯ ಮೂಲಭೂತ ಸೌಲಭ್ಯವಿಲ್ಲದೇ ಸಹಜವಾಗಿ ಜೀವನವನ್ನು ನಡೆಸುತ್ತಿದ್ದರು. ಈಗ ಇಲ್ಲಿ ತಂತ್ರಜ್ಞಾನಗಳು, ಡಿಜಿಟಲ್ ಯುಗಗಳು, ನಾಗರಿಕರಣವಾಗಿ ಪರಿವರ್ತನೆಗೊಂಡಿದೆ. ಹಿಂದಿನ ಹಳ್ಳಿ ಜನರ ಜೀವನ ಇವತ್ತಿನ ಹಳ್ಳಿಗರ ಜೀವನಕ್ಕಿಂತ ನೂರು ಪಟ್ಟು ಉತ್ತಮವಾಗಿತ್ತು.


ಅವತ್ತಿನ ಕಾಲಕ್ಕೆ ಹಾಗೂ ಇವತ್ತಿನ ಕಾಲಕ್ಕೆ ಹೋಲಿಸಿದರೆ ನಮ್ಮ ಜೀವನ ತುಂಬಾನೇ ಮುಂದುವರೆದಿದೆ. ಈ ಹಿಂದೆ ಜನರು ಹಳ್ಳಿಯಲ್ಲಿ ವಾಸಿಸಬೇಕೆಂದು ಇಚ್ಛಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಜನರು ಹಳ್ಳಿ ಜೀವನವನ್ನು ತ್ಯಜಿಸಿ ಪಟ್ಟಣ ಜೀವನವನ್ನು ಅನುಭವಿಸಲು ಹೊರಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಳ್ಳಿಯವರು ಕೂಡ ಪಟ್ಟಣದ ಜೀವನ ಶೈಲಿಯನ್ನು ಮುಂದುವರಿಸುತ್ತಿದ್ದಾರೆ, ಅಷ್ಟೇ ಅಲ್ಲದೆ ಅವರು ತಿನ್ನುವ ಆಹಾರದಲ್ಲಿ ಕೂಡ ಬದಲಾವಣೆಯನ್ನು ಮಾಡಿಕೊಂಡು ಬಂದಿದ್ದಾರೆ.


ಆಗಿನ ಕಾಲದಲ್ಲಿ ಹಳ್ಳಿಯಲ್ಲಿ ಬೆಳೆದ ಆಹಾರ ಪದಾರ್ಥವನ್ನು ಜನರು ಸೇವಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಜನರಿಗೆ ಪಟ್ಟಣದಲ್ಲಿ ಸಿಗುವಂತಹ ಜಂಕ್ ಫುಡ್ ಇಂತಾದವುಗಳಲ್ಲಿ ಒಲವು ಹುಟ್ಟಿಕೊಂಡಿದೆ. ಆದರೆ ಅವರಿಗೆ ತಿಳಿದು ತಿಳಿಯದಿದ್ದು ಅದರಲ್ಲಿ ಆರೋಗ್ಯ ಕೆಡಿಸುವಂತಹ ಪದಾರ್ಥಗಳಿದ್ದರೂ ಅದನ್ನೇ ಆರಿಸುತ್ತಿದ್ದಾರೆ. ಹಿಂದೆ ಹಳ್ಳಿಗಳಲ್ಲಿ ಆದರೆ ನಾವೇ ನಮ್ಮ ಕೈಯಾರೆ ಮಾಡಿದಂತಹ ತರಕಾರಿ ಹಣ್ಣು ಆಹಾರವನ್ನು ಬೆಳೆಯುತ್ತಿದ್ದೆವು. ಅಲ್ಲದೆ ಯಾವುದೇ ರೀತಿಯ ರಾಸಾಯನಿಕ ಗೊಬ್ಬರವನ್ನು ಹಾಕದೆ ಮನೆಯಲ್ಲಿದ್ದಂತಹ ದನದ ಗೊಬ್ಬರವಾಗಲಿ ಇತರ ಗೊಬ್ಬರಗಳನ್ನು ಹಾಕುತ್ತಿದ್ದೆವು. ಅದರಿಂದ ಆರೋಗ್ಯಕರ ಆಹಾರ ಸಿಗುತ್ತಿತ್ತು.


ಅಲ್ಲದೆ ಈಗಿನ ಕಾಲದಲ್ಲಿ ಹಳ್ಳಿ ಪ್ರದೇಶದಲ್ಲಿ ಕೃಷಿ ಮಾಡುವವರ ಸಂಖ್ಯೆ ಸ್ಥಗಿತಗೊಳ್ಳುತ್ತಿದೆ. ಇದಕ್ಕೆ ಒಂದು ರೀತಿಯಲ್ಲಿಈಗಿನ ಜನಾಂಗದ ಜನರೇ ಕಾರಣ ಆದರೆ ಈಗಿನ ದಿನಗಳಲ್ಲಿ ಹಳ್ಳಿಯ ದೃಶ್ಯ ಸಂಪೂರ್ಣವಾಗಿ ಬದಲಾಗಿದೆ ಹಳ್ಳಿಯ ಯುವಕರು ಉತ್ತಮ ಶಿಕ್ಷಣ, ಉದ್ಯೋಗ ಜೀವನಮಟ್ಟವನ್ನು ಹೆಚ್ಚಿಸಲು ಪಟ್ಟಣಗಳಿಗೆ ಸ್ಥಳಾಂತರಗೊಂಡಿದ್ದಾರೆ. ಇತ್ತ ಹಳ್ಳಿಗರ ಮನೆಗಳು ಖಾಲಿಯಾಗುತ್ತಿವೆ ಹಾಗೂ ಜಮೀನುಗಳು ಬತ್ತಿ ಹೋಗುತ್ತಿವೆ. ಈ ಬದಲಾವಣೆಯ ಹಂತದಲ್ಲಿ ಇರುವ ಇಲ್ಲಿಯ ಸೊಗಡು ಕುಂದು ಹೋಗುತ್ತಿರುವಂತೆ ಕಾಣುತ್ತಿದೆ. ಈ ಕಡೆ ಊರಿನಲ್ಲಿದ್ದ ಯುವಶಕ್ತಿ ಕಡಿಮೆಯಾಗಿದೆ. ಕೃಷಿಯ ಮೇಲಿದ್ದ ಆಸಕ್ತಿ ಕುಸಿಯುತ್ತಿದ್ದರೆ ಇದರಿಂದ ಹಳ್ಳಿ ತನ್ನ ಸೊಗಡನ್ನು ಕಳೆದುಕೊಂಡು ಬರುವಂತಿದೆ. ಅಳಿವಿನತ್ತ ಹೊರಟ ಹಳ್ಳಿ ಜೀವನವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಹಳ್ಳಿಯ ಜೀವನ ಕೇವಲ ನೆನಪಿನ ಪುಟಗಳಲ್ಲಿ ಉಳಿಯಬಾರದು ಅದನ್ನು ಬದುಕಿನ ಶೈಲಿಯಾಗಿ ಉಳಿಸಿಕೊಳ್ಳುವುದು ಪ್ರತಿ ಪೀಳಿಗೆಯ ಕರ್ತವ್ಯ.


- ದೀಪಿಕಾ ದೋಳ 

ದ್ವಿತೀಯ ಪತ್ರಿಕೋದ್ಯಮ ವಿಭಾಗ,

ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top