ಯಶಸ್ವಿ ಶಾಸನತಂತ್ರ ಕಾರ್ಯಾಗಾರ; ಕಾರ್ಯಕ್ರಮ ಉದ್ಘಾಟಿಸಿದ ತಿಮ್ಮಪ್ಪಯ್ಯ ಮಡಿಯಾಲ್ IPS

Upayuktha
0


ಬೆಂಗಳೂರು: ಬೆಂಗಳೂರಿನ ಗಿರಿನಗರದ ಶ್ರೀರಾಮಚಂದ್ರಾಪುರಮಠದ ಶಾಖಾಮಠದಲ್ಲಿ ಶ್ರೀರಾಮಚಂದ್ರಾಪುರ ಮಠದ ನೂತನ ಆಡಳಿತ ವ್ಯವಸ್ಥೆ ಶಾಸನತಂತ್ರದ ಕಾರ್ಯಾಗಾರ ನಡೆಯಿತು. ಶ್ರೀಮಠದ ಸಮ್ಮುಖ ಸರ್ವಾಧಿಕಾರಿಗಳು ಹಾಗೂ ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ ಶ್ರೀ ತಿಮ್ಮಪ್ಪಯ್ಯ ಮಡಿಯಾಲ್ IPS ಅವರು ಕಾರ್ಯಾಗಾರವನ್ನು ಉದ್ಘಾಟಿಸಿ, ಗೋಷ್ಠಿ ಹಾಗೂ ಸಂವಾದಗಳು ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.



ಶಾಸನತಂತ್ರದ ಅಧ್ಯಕ್ಷರಾದ ಮೋಹನ ಭಾಸ್ಕರ ಹೆಗಡೆ ಮಾತನಾಡಿ, ಶ್ರೀಮಠವು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನದಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಅವುಗಳನ್ನು ಸೂಕ್ತ ರೀತಿಯಲ್ಲಿ ಮುನ್ನೆಡೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಬೃಹತ್ ಕಾರ್ಯಗಳನ್ನು ಯಶಸ್ವಿಯಾಗಿಸಲು ಬದ್ಧರಾಗಿ ಸೂಕ್ತ ಕಾರ್ಯತಂತ್ರಗಳೊಡಣೆ ಮುನ್ನಡೆಯೋಣ ಎಂದರು.


ಖ್ಯಾತ ಆಯುರ್ವೇದ ತಜ್ಞರಾದ ಡಾ. ಗಿರಿಧರ ಕಜೆ ಮಾತನಾಡಿ, ಯಾವುದೇ ಕಾರ್ಯ ಯಶಸ್ವಿಯಾಗಬೇಕಾದರೆ ಮೊದಲು ಸಮಸ್ಯೆಗಳನ್ನು ಪಟ್ಟಿ ಮಾಡಬೇಕು. ಬಳಿಕ ಅದನ್ನು ಹಂತಹಂತವಾಗಿ ಬಗೆಹರಿಸುವುದನ್ನು ರೂಢಿಸಿಕೊಂಡರೆ ಕಾರ್ಯ ಸಫಲ್ಯ ಸಾಧ್ಯ ಎಂದ ಅವರು, ಮಠದ ಆಡಳಿತ ವ್ಯವಸ್ಥೆಯಾದ ಶಾಸನತಂತ್ರವನ್ನು ಪರಿಣಾಮಕಾರಿಯಾಗಿ ಮುಂದೆ ಕೊಂಡೊಯ್ಯಲು ಮುಖ್ಯವಾಗಿ ಬೇಕಾಗಿರುವುದು ಪ್ರಾಶಸ್ತ್ಯ. ಯಾವ ಕೆಲಸಕ್ಕೆ ಯಾವಾಗ ಎಷ್ಟು ಪ್ರಾಮುಖ್ಯತೆ ನೀಡಬೇಕು ಎನ್ನುವುದು ತಿಳಿಯುವುದು ಅತ್ಯಗತ್ಯ ಎಂದರು.


ದಿಕ್ಸೂಚಿ ಭಾಷಣ ಮಾಡಿದ ಯೋಜನಾ ಖಂಡ ಶ್ರೀಸಂಯೋಜಕ ವಿದ್ವಾನ್ ಜಗದೀಶ ಶರ್ಮಾ ಸಂಪ, ಕಾರ್ಯಕ್ಕೆ ತೊಡಗುವ ಮೊದಲು ಕಾರ್ಯ ಏಕೆ? ಏನು ?  ಮತ್ತು ಹೇಗೆ ಎನ್ನುವುದನ್ನು ಸ್ಪಷ್ಟಪಡಿಸಿ ಕೊಳ್ಳಬೇಕು. ಅದಕ್ಕಾಗಿ ಈ ಕಾರ್ಯಾಗಾರವನ್ನು ಏರ್ಪಡಿಸಲಾಗಿದ್ದು, ಶಾಸನತಂತ್ರದ ವಿವಿಧ ಖಂಡಗಳ ಪ್ರಮುಖರು ತಮ್ಮ ವ್ಯಾಪ್ತಿಯ ಕಾರ್ಯಯೋಜನೆಗಳನ್ನು ಸಮರ್ಪಕವಾಗಿ ಯೋಜಿಸುವ ಮೂಲಕ ಶ್ರೀಮಠದ ಸಾಮಾಜಿಕ ಕಾರ್ಯಗಳನ್ನು ಹೆಚ್ಚಿನ ಜನರಿಗೆ ತಲುಪಿಸಬೇಕು ಎಂದರು.


ಶಾಸನತಂತ್ರದ ವಿವಿಧ ಖಂಡಗಳ ಬಗ್ಗೆ ಗೋಷ್ಠಿಗಳು, ವಿಶ್ಲೇಷಣೆ, ಸಂವಾದ, ಹಾಗೂ ಮಾರ್ಗದರ್ಶನದ ಕಾರ್ಯಕ್ರಮಗಳು ಜರುಗಿದವು. ಶ್ರೀಮಠದ ಪ್ರಶಾಸನಾಧಿಕಾರಿಗಳಾದ ಶ್ರೀ ಸಂತೋಷ ಹೆಗಡೆ, ವಿತ್ತಾಧ್ಯಕ್ಷರಾದ ಶ್ರೀ ಗಣೇಶ ಜೆಡ್ಡಿನಮನೆ, ಶಾಸನತಂತ್ರದ ಕಾರ್ಯದರ್ಶಿ ಶ್ರೀ ಕೃಷ್ಣಪ್ರಸಾದ ಎಡಪ್ಪಾಡಿ ಹಾಗೂ ಕಾರ್ಯಾಲಯ ಕಾರ್ಯದರ್ಶಿ ಶ್ರೀಮತಿ ಅನೂರಾಧಾ ಪಾರ್ವತಿ, ನೂತನ ಶಾಸನತಂತ್ರದ ಖಂಡಗಳಾದ ಶ್ರೀಚರಣ ಖಂಡ, ಶ್ರೀಸಂದೇಶ ಖಂಡ, ಧರ್ಮಕರ್ಮ ಖಂಡ, ಸುಪ್ರಸಾರ ಖಂಡ, ಉತ್ಸವ ಖಂಡ, ಪ್ರಕಲ್ಪ ಖಂಡ, ಸೇವಾ ಖಂಡ, ಯೋಜನಾ ಖಂಡ, ಸುಶಾಸನ ಖಂಡ, ಸಂಘಟನಾ ಖಂಡ, ಸಂಪನ್ಮೂಲ ಖಂಡ, ಸಂಶೋಧನಾ ಖಂಡ, ಸುರಕ್ಷಾ ಖಂಡ ಹಾಗೂ ಲೋಕಸಂಪರ್ಕ ಖಂಡಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top