ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಫಿಜಿಯೋಥೆರಪಿ, ಮಾನ್ಯ ಕುಲಾಧಿಪತಿ ಡಾ. CA. ಎ. ರಾಘವೇಂದ್ರ ರಾವ್ ಅವರ ಮಾರ್ಗದರ್ಶನದಲ್ಲಿ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯವನ್ನು ಜಾಗತಿಕ ಶ್ರೇಷ್ಠತೆಯ ಕೇಂದ್ರವನ್ನಾಗಿ ರೂಪಿಸಲು, ಹೆಮ್ಮೆಯಿಂದ ತನ್ನ ಪ್ರಥಮ ಅಂತರಾಷ್ಟ್ರೀಯ ಫಿಜಿಯೋಥೆರಪಿ ಕಾನ್ಸರೆನ್ಸ್ SPARC 2025 ಅನ್ನು ಘೋಷಿಸುತ್ತಿದೆ. ಈ ಕಾರ್ಯಕ್ರಮವು ಆಗಸ್ಟ್ 29 ಮತ್ತು 30, 2025ರಂದು ಶ್ರೀನಿವಾಸ ವಿವಿ ಪಾಂಡೇಶ್ವರ ಹೊಸ ಕ್ಯಾಂಪಸ್‌ನಲ್ಲಿ ನಡೆಯಲಿದೆ.
“ರಿವೈಟಲೈಸಿಂಗ್ ರಿಹ್ಯಾಬಿಲಿಟೇಷನ್: ಶೇಪಿಂಗ್ ದ ಪ್ಯೂಚರ್ ಆಫ್ ಫಿಜಿಯೋಥೆರಪಿ" ಎಂಬ ವಿಷಯಾಧಾರಿತ ಈ ಭವ್ಯ ಅಕಾಡೆಮಿಕ್ ಕಾರ್ಯಕ್ರಮವನ್ನು ಆಗಸ್ಟ್ 29ರಂದು ಮಾನ್ಯ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ. 5 ದೇಶಗಳು, ಭಾರತದ 10 ರಾಜ್ಯಗಳು ಮತ್ತು 35 ಫಿಜಿಯೋಥೆರಪಿ ಕಾಲೇಜುಗಳಿಂದ ಸುಮಾರು 1500 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದು, ಇದು ಈ ಪ್ರದೇಶದ ಅತಿದೊಡ್ಡ ಫಿಜಿಯೋಥೆರಪಿ ವೃತ್ತಿಪರರು ಮತ್ತು ವಿದ್ಯಾರ್ಥಿಗಳ ಸಮಾಗಮವಾಗಲಿದೆ.
ಈ ಎರಡು ದಿನಗಳ ಅಕಾಡೆಮಿಕ್ ಕಾರ್ಯಕ್ರಮದಲ್ಲಿ ವೈಜ್ಞಾನಿಕ ಸೆಷನ್‌ಗಳು, ಪೇಪರ್ ಮತ್ತು ಪೋಸ್ಟರ್ ಪ್ರಸ್ತುತಿಗಳು, ಕೀ ನೋಟ್ ಉಪನ್ಯಾಸಗಳು ಮತ್ತು ಪ್ಯಾನಲ್ ಚರ್ಚೆಗಳು ನಡೆಯಲಿದ್ದು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ತಜ್ಞರು ಕಾರ್ಡಿಯೋರೆಸ್ಪಿರೇಟರಿ, ಅಂಕಾಲಜಿ, ಆರ್ಥೋ, ನ್ಯೂರೋ, ವುಮೆನ್ಸ್ ಹೆಲ್ತ್ ಮುಂತಾದ ಪುನರ್ವಸತಿ ವಿಜ್ಞಾನ ಕ್ಷೇತ್ರಗಳಲ್ಲಿ ತಮ್ಮ ಪ್ರಭಾವಿ ಆಲೋಚನೆಗಳನ್ನು ಹಂಚಿಕೊಳ್ಳಲಿದ್ದಾರೆ.
ಪ್ರೀ-ಕಾನ್ಸರೆನ್ಸ್ ವರ್ಕ್‌ಶಾಪ್ ಆಗಸ್ಟ್ 27 ಮತ್ತು 28ರಂದು, ಡಾ. ಸಮನಾ ಸಯೇದ್ (ದುಬೈ, ಯುಎಇ) ಅವರಿಂದ ಅಡ್ವಾನ್ಸ್‌ಡ್ ಕಾರ್ಡಿಯಾಕ್ ಮತ್ತು ಪಲ್ಮನರಿ ರಿಹ್ಯಾಬಿಲಿಟೇಷನ್ ವಿಷಯದಲ್ಲಿ ನಡೆಯಲಿದೆ. ಪೋಸ್ಟ್-ಕಾನ್ಸರೆನ್ಸ್ ವರ್ಕ್‌ಶಾಪ್‌ಗಳು ಆಗಸ್ಟ್ 31ರಂದು ನಡೆಯಲಿದ್ದು, ಡಾ. ವಾಕರ್ ಎಂ. ನಕ್ವಿ (ಖತಾರ್) ಅವರು ರಿಹ್ಯಾಬಿಲಿಟೇಷನ್‌ನಲ್ಲಿ ಕೃತಕ ಬುದ್ಧಿಮತ್ತೆ (AI) ಕುರಿತು ಹಾಗೂ ಕೊಬಿ ವೈಸ್ (ಇಸ್ರೇಲ್) ಅವರು ಫೆಷಿಯಲ್ ಮ್ಯಾನಿಪ್ಯುಲೇಶನ್ ಕುರಿತು ಕಾರ್ಯಾಗಾರ ನಡೆಸಲಿದ್ದಾರೆ. ಇವು ಪ್ರತಿನಿಧಿಗಳಿಗೆ ಪ್ರಾಯೋಗಿಕ ತರಬೇತಿ, ಜಾಗತಿಕ ದೃಷ್ಟಿಕೋನ ಹಾಗೂ ಪ್ರಮಾಣಪತ್ರಗಳನ್ನು ನೀಡಲಿದ್ದು, ಅವರ ಅಕಾಡೆಮಿಕ್ ಮತ್ತು ಕ್ಲಿನಿಕಲ್ ಜ್ಞಾನಕ್ಕೆ ಅಪಾರ ಮೌಲ್ಯ ವರ್ಧನೆಯಾಗುತ್ತದೆ.
ಸಮ್ಮೇಳನದ ಸಾಂಸ್ಕೃತಿಕ ಅಂಶವಾಗಿ, ಆಗಸ್ಟ್ 29ರ ಸಂಜೆ "ಪ್ಯೂಷನ್ ಫಿಯೆಸ್ವಾ” ಅಂತರ್‌ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಗುಂಪು ನೃತ್ಯ, ಸೊಲೋ ಪ್ರದರ್ಶನಗಳು, ಸ್ಕಿಟ್‌ಗಳು, ಫ್ಯಾಷನ್ ಶೋ ಮುಂತಾದ ಕಾರ್ಯಕ್ರಮಗಳು ನಡೆಯಲಿದ್ದು, ವಿವಿಧ ಕಾಲೇಜುಗಳ ತಂಡಗಳು ನಗದು ಬಹುಮಾನಗಳಗಾಗಿ ಸ್ಪರ್ಧಿಸಲಿದ್ದಾರೆ. ಇದಲ್ಲದೆ, ಭೋಜನವನ್ನೂ ಆಯೋಜಿಸಲಾಗಿದೆ.
ಪ್ರಮುಖ ಅಕಾಡೆಮಿಷಿಯನ್‌ಗಳು, ವೈದ್ಯರು, ಸಂಶೋಧಕರು ಮತ್ತು ವಿದ್ಯಾರ್ಥಿಗಳ ಭಾಗವಹಿಸುವಿಕೆಯಿಂದ SPARC 2025 ಫಿಜಿಯೋಥೆರಪಿ ಕ್ಷೇತ್ರದಲ್ಲಿ ವೈಜ್ಞಾನಿಕ ಜ್ಞಾನ ಮತ್ತು ಸಾಂಸ್ಕೃತಿಕ ಹಬ್ಬದ ಸಂಯೋಜನೆಯಾದ ಐತಿಹಾಸಿಕ ಕಾರ್ಯಕ್ರಮವಾಗಲಿದೆ.
ಸುದ್ದಿಗೋಷ್ಠಿಯಲ್ಲಿ ಡಾ. ಅಜಯ್ ಕುಮಾರ್, ಶ್ರೀನಿವಾಸ ವಿವಿ ಅಭಿವೃದ್ಧಿ ರಿಜಿಸ್ಟ್ರಾರ್; ಡಾ. ತ್ರಿಶಾಲಾ ನೊರೋನ್ಹಾ ಪಿ.ಟಿ., ಡೀನ್, ಫಿಸಿಯೋಥೆರಪಿ ಸಂಸ್ಥೆ, ಶ್ರೀನಿವಾಸ ವಿಶ್ವವಿದ್ಯಾಲಯ ಹಾಗೂ SPARC ಸಂಘಟನಾ ಅಧ್ಯಕ್ಷೆ; ಡಾ. ಪ್ರೇಮ್ ಕುಮಾರ್, ಸಂಚಾಲಕ, ಡಾ. ಮಧುರಿಪು ಪಿ. ಪಿ.ಟಿ. ಮತ್ತು ಡಾ. ಐಶ್ವರ್ಯ ಸೊನವನೆ ಪಿ.ಟಿ. ಸಹ-ಸಂಚಾಲಕರು ಉಪಸ್ಥಿತರಿದ್ದರು.