ಮಂಗಳೂರು: ಸಾರ್ವಜನಿಕ ಗಣೇಶೋತ್ಸವ ಒಗ್ಗಟ್ಟಿನ ಸಂಕೇತ, ಅದು ಬಾಂಧವ್ಯ ಮತ್ತು ಸಹೋದರತೆಯ ಭಾವನೆಯನ್ನು ಗಟ್ಟಿಗೊಳಿಸುತ್ತದೆ ಎಂದು ಕ ಸಾ ಪ ಮಂಗಳೂರು ತಾ. ಘಟಕದ ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ಹೇಳಿದರು.
ಅವರು ಗೌರಿ ಮಠ ರಸ್ತೆ , ಮಂಗಳೂರು ಇಲ್ಲಿನ ಶ್ರೀ ಮಹಾಮಾರಿಯಮ್ಮ ಯುವಕ ವೃಂದದ 34 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಗಣೇಶೋತ್ಸವವೆಂದರೆ ಹೊಸತನ ಹೊಸ ತೆನೆ, ಸಮೃದ್ಧಿ , ಹೊಸ ಕನಸುಗಳು ಅಲ್ಲದೆ ಗಣೇಶನ ಆರಾಧನೆಯಿಂದ ವಿದ್ಯೆ, ಬುದ್ಧಿ ಸಿದ್ಧಿಯಾಗಿ ಬದುಕಿಗೆ ಹೊಸ ಶಕ್ತಿ ಮತ್ತು ಸ್ಫೂರ್ತಿ ದೊರೆಯು ವುದೆಂದು ಅಭಿಪ್ರಾಯಪಟ್ಟರು. ಶ್ರೀನಿಧಿ ಕಂಪ್ಯೂಟರ್ಸ್ ಪ್ರೈ ಲಿ. ನಿರ್ದೇಶಕ ರಾಜೇಶ್ ಎಸ್. ರಾವ್ ಮುಖ್ಯ ಅತಿಥಿಯಾಗಿದ್ದರು. ಯುವಕ ವೃಂದದ ಅಧ್ಯಕ್ಷ ರಾಜೇಶ್ ಎನ್. ಶೆಟ್ಟಿ , ಪಿ.ಸಿ. ತಂಗವೇಲು, ಕನಕರಾಜು ಎಂ. ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶ್ರೀ ಮಹಾಮಾರಿಯಮ್ಮ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹಲವು ದಾನಿಗಳು ದೇಣಿಗೆ ನೀಡಿದರು. ವೇ. ಮೂ. ಗಣೇಶ ಬಾರಿತಾಯ ಮತ್ತು ತಂಡದವರು ಮಹಾಗಣಪತಿಯ ಪೂಜೆಯನ್ನು ನೆರವೇರಿಸಿದರು , ರಾತ್ರು ವೈಭವದ ಶೋಭಾಯಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.
ವಿದ್ಯಾ ದಿನೇಶ್ , ಮಂಜುಳಾ ಗೋಪಾಲ್ ಪ್ರಾರ್ಥಿಸಿದರು. ಪಿ. ಸಿ. ಗುರು , ರಮೇಶ್ ಜಿ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.png)
