ಬೆಂಗಳೂರು: ‘ಮನುಷ್ಯನ ಸಹಜ ಜ್ಞಾನ ಅಥವಾ ಸಾಮಾನ್ಯ ಜ್ಞಾನ, ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ವ್ಯವಹರಿಸುವ ಅಥವ ಪ್ರತಿಕ್ರಿಯಿಸುವ ದೈವದತ್ತ ಕೊಡುಗೆ. ಇದಕ್ಕೆ ವಿಶೇಷ ಜ್ಞಾನ ಸಂಪಾದನೆ ಅಥವ ತರಬೇತಿಯ ಅವಶ್ಯಕತೆಯಿಲ್ಲ. ನಾವೇ ಕಂಡುಕೊಂಡಂತಹ ಕೃತಕ ಬುದ್ದಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಕೆಲಸ ಮಾಡುವುದು ಗಣಕೀಕೃತ ಅಂಕಿಅಂಶಗಳ ಆಧಾರದ ಮೇಲೆ ಎಂಬುದನ್ನು ಮರೆಯಬಾರದು. ಹೀಗಾಗಿ ಕೃತಕ ಬುದ್ಧಿಮತ್ತೆ ಮತ್ತು ಅದರ ಮುಂದುವರಿದ ತಂತ್ರಜ್ಞಾನಗಳು ಮನುಷ್ಯನ ಸೃಷ್ಟಿಗಳೇ ಹೊರತು ಮತ್ತೇನಿಲ್ಲ. ಹೀಗಾಗಿ ಕೃತಕ ಬುದ್ದಿಮತ್ತೆಯಿಂದ ಮನುಷ್ಯ ಉದ್ಯೋಗ ಕಳೆದುಕೊಳ್ಳುವುದಿಲ್ಲ, ಆ ಉದ್ಯೋಗ ಬೇರೆ ಸ್ವರೂಪ ಪಡೆದಿರುತ್ತದೆ ಎಂದು ಸ್ಪೈನ್ ದೇಶದ ಸಾಲಮಂಕ ವಿಶ್ವವಿದ್ಯಾಲಯದ ಮುಖ್ಯಾಧಿಕಾರಿ ಡಾ. ಜುವಾನ್ ಮ್ಯಾನುಯಲ್ ಕೊರ್ಚಾಡೊ ರೋಡ್ರಿಗ್ವೆಜ್ ನುಡಿದರು.
'ಆತ ಕೃತಕ ಬುದ್ದಿಮತ್ತೆಯನ್ನು ಆಸಕ್ತಿಯಿಂದ ಕಲಿಯಬೇಕು, ಆ ಕ್ಷೇತ್ರದಲ್ಲಿ ಅದನ್ನು ಮತ್ತೆ ಬದುಕಿಗೆ ಅನುಕೂಲವಾದ ನೆರವು ಒದಗಿಸುವಂತೆ ಸುಧಾರಿಸಬೇಕು. ಇದೇ ಭವಿಷ್ಯದಲ್ಲಿ ಮನುಷ್ಯನ ನೂತನ ಉದ್ಯೋಗ. ಏಕೆಂದರೆ ಕೆಲವೊಂದು ವಿಷಯಗಳಲ್ಲಿ ಗಣಿತಾತ್ಮಕ ಅಂಕಿಅಂಶಗಳ ಆಧಾರದ ಮೇಲೆ ಅತ್ಯಂತ ಅಲ್ಪ ಅವಧಿಯಲ್ಲಿ ಪರಿಹಾರಗಳನ್ನು ಸೂಚಿಸುವುದಕ್ಕೆ ಹಾಗೂ ಕೆಲಸದ ವೇಗ ಹೆಚ್ಚಿಸುವುದಕ್ಕೆ ಕೃತಕ ಬುದ್ದಿಮತ್ತೆ ನಮಗೆ ಬೇಕು’, ಎಂದು ಅವರು ಹೇಳಿದರು.
ಅವರು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗಸAಸ್ಥೆ ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಐ.ಇ.ಇ.ಇ ಬೆಂಗಳೂರು ಶಾಖೆಯ ಸಹಯೋಗದಲ್ಲಿ ಆಯೋಜನೆಗೊಂಡಿದ್ದ ಅಂತರ್ಜಾಲ, ಬಹುಮಾಧ್ಯಮ ಹಾಗೂ ಮಾಹಿತಿ ತಂತ್ರಜ್ಞಾನಗಳ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದ 3ನೇ ಆವೃತ್ತಿ ‘ಎನ್.ಎಂ.ಐ.ಟಿ.ಕಾನ್-2025’ ಅನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
‘ಕೃತಕ ಬುದ್ದಿಮತ್ತೆಯಿಂದ ಸ್ವಯಂಚಾಲಿತ ಯಂತ್ರಗಳ ತಂತ್ರಜ್ಞಾನದ ಬಳಕೆ ಎಂದೂ ಜನರ ಪಾರಂಪಾರಿಕ ನಂಬಿಕೆ, ನೆಲದ ಕಾನೂನು ಹಾಗೂ ನೈತಿಕ ಮೌಲ್ಯಮಾಪನ ಪ್ರಕ್ರಿಯೆಗಳ ಆಯಕಟ್ಟುಗಳೊಳಗೆ ಒಳಪಟ್ಟಿರಬೇಕೆಂಬುದನ್ನು ನಮ್ಮ ತಂತ್ರಜ್ಞರು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಆಗ ಮಾತ್ರ ಜನಪರ ಹಾಗೂ ಜೀವನ ಪರ ತಂತ್ರಜ್ಞಾನ ನಮ್ಮ ಬದುಕನ್ನು ಹಸನುಗೊಳಿಸುತ್ತವೆ’ ಎಂದು ಅವರು ತಿಳಿಸಿದರು.
ಸAಶೋಧನೆಯಲ್ಲಿ ತೊಡಗಿಸಿಕೊಂಡಿರುವ ವಿಶ್ವದ ವಿವಿಧ ಭಾಗಗಳಿಂದ ತಂತ್ರಜ್ಞಾನದ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಸಾದರಪಡಿಸಲು ಒಟ್ಟು 4,260 ಸಂಶೋಧನಾ ಪ್ರಬಂಧ/ಪ್ರಾಜೆಕ್ಟ್‌ಗಳನ್ನು ಸಲ್ಲಿಸಿದ್ದರು. ಪ್ರಮುಖ ದೇಶಗಳೆಂದರೆ - ಅಮೆರಿಕ, ಮಲೇಶಿಯಾ, ಇಂಡೋನೇಷಿಯಾ, ಫಿಲಿಪೈನ್ಸ್, ಯುನೈಟೆಡ್ ಕಿಂಗ್‌ಡA, ಸ್ಪೆöÊನ್, ದಕ್ಷಿಣ ಆಫ್ರಿಕಾ, ಫ್ರಾನ್ಸ್, ನೈಜೀರಿಯ ಹಾಗೂ ಇಥಿಯೋಪಿಯಾ ಅಲ್ಲದೆ ಭಾರತದ ಪ್ರತಿಷ್ಠಿತ ಐ.ಐ.ಟಿಗಳು, ಎನ್.ಐ.ಟಿಗಳು ಹಾಗೂ ಡಿ.ಆರ್.ಡಿ.ಓ ಕೂಡ ಪಾಲ್ಗೊಂಡಿವೆ. ಜಾಗತಿಕ ಗುಣಮಟ್ಟದ ಮಾನದಂಡಗಳಿಗನುಸಾರವಾಗಿ ಐ.ಇ.ಇ.ಇ ಪರಾಮರ್ಶನ ಸಮಿತಿ 289 ಸಂಶೋಧಕ ಪ್ರಾಜೆಕ್ಟ್ಗಳನ್ನು ಸಮ್ಮೇಳನದಲ್ಲಿ ಸಾದರಪಡಿಸಲು ಆಯ್ಕೆ ಮಾಡಿದೆ. ಸಮಾನಾಂತರವಾಗಿ ವಿವಿಧ ಸ್ಥಳಗಳಲ್ಲಿ ಮಂಡನೆಯಾಗುವ ಈ ಪ್ರಬಂಧ/ಪ್ರಾಜೆಕ್ಟ್‌ಗಳನ್ನು ತಜ್ಞರು ಮೌಲ್ಯಮಾಪನ ಮಾಡಿ ಅತ್ಯುತ್ತಮವಾದುದಕ್ಕೆ ಪ್ರಶಸ್ತಿ ಪತ್ರಗಳನ್ನು ನೀಡಲಿದ್ದಾರೆ.
ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದವರು, ಥೈಲ್ಯಾಂಡ್ ದೇಶದ ಚುಲಾಲಾಂಗ್‌ಕಾರ್ನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಹಾಗೂ ಐ.ಇ.ಇ.ಇ ಥೈಲ್ಯಾಂಡ್ ಶಾಖೆಯ ಮುಖ್ಯಸ್ಥೆ ಡಾ. ಸುಪವದೀ ಅರಂವಿತ್. ತಮ್ಮ ಭಾಷಣದಲ್ಲಿ, ‘ಕೃತಕ ಬುದ್ದಿಮತ್ತೆ ಬೆಂಬಲಿತ ವೀಡಿಯೋ ವಿಚಕ್ಷಣೆ ಅರ್ಥಪೂರ್ಣವಾದ ಅತಿಸೂಕ್ಷ್ಮ ವಿವರಗಳನ್ನು ನಮಗೆ ಒದಗಿಸುತ್ತದೆ. ಈ ಬಗೆಗಿನ ಸಂಶೋಧನೆ ಸರ್ವ ಜನರ ಹಿತದಿಂದ ಬಹಳ ಮುಖ್ಯ. ಸ್ಮಾರ್ಟ್ ಸಿಟಿ ಯೋಜನೆ, ಆರೋಗ್ಯ ತಪಾಸಣೆ ಹಾಗೂ ಶಸ್ತçಚಿಕಿತ್ಸೆ ಮತ್ತು ಉತ್ಪಾದನ ಕ್ಷೇತ್ರಗಳಲ್ಲಿ ಕೃತಕ ಬುದ್ದಿಮತ್ತೆ ಬೆಂಬಲಿತ ವೀಡಿಯೋ ತಂತ್ರಜ್ಞಾನ ಮಹತ್ವದ ಕಾಣಿಕೆ ನೀಡುತ್ತದೆ. ನಮ್ಮ ತಂತ್ರಜ್ಞರು ಈ ಕ್ಷೇತ್ರದಲ್ಲಿ ತಂತ್ರಜ್ಞಾನ ಸುಧಾರಣೆಗೆ ಶ್ರಮಿಸಬೇಕು’ ಎಂದು ಅವರು ವಿಶ್ಲೇಷಿಸಿದರು.
ಒಂದೇ ಸಮಯದಲ್ಲಿ 28 ವಿವಿಧ ಸ್ಥಳಗಳಲ್ಲಿ ಪ್ರಬಂಧಗಳ ಮಂಡನೆ ಮತ್ತು ಆ ಕುರಿತ ವಿಸ್ತೃತ ಚರ್ಚೆಗಳು ನಡೆಯಲಿವೆ. ಪ್ರತಿಯೊಂದು ಸ್ಥಳದಲ್ಲೂ ತಜ್ಞ ತಂತ್ರಜ್ಞರು ಹಾಜರಿದ್ದು ಅತ್ಯುತ್ತಮ ಸಂಶೋಧನಾ ಪ್ರಬಂಧಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಿದ್ದಾರೆ.
ಪ್ರಾರಂಭದಲ್ಲಿ ಸಮ್ಮೇಳನದ ಪ್ರಧಾನ ಆಯೋಜಕರು ಹಾಗೂ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥರಾದ ಡಾ. ಪರಮೇಶಾಚಾರಿ ಬಿ.ಡಿ ಅವರು ಸಮ್ಮೇಳನದ ಧ್ಯೇಯೋದ್ದೇಶಗಳ ಬಗ್ಗೆ ಸವಿವರವಾಗಿ ನಿವೇದಿಸಿದರು. ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್ ಅವರು ತಮ್ಮ ಭಾಷಣದಲ್ಲಿ ತಂತ್ರಜ್ಞಾನದ ಶಿಕ್ಷಣ ಸಂಸ್ಥೆಗಳು ಸಂಶೋಧನೆಗೆ ನೀಡಬೇಕಾದ ಆದ್ಯತೆ ಹಾಗೂ ಪ್ರೋತ್ಸಾಹಗಳ ಬಗ್ಗೆ ವಿವರಿಸಿದರು. ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಡಾ. ಸೌಮ್ಯ ಮಾಧವನ್ ಪ್ರಾರಂಭದಲ್ಲಿ ಸ್ವಾಗತಿಸಿದರು. ಡಾ. ಸುನಿಲ್ ಎಸ್. ಹರಕಣ್ಣನವರ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ