ಆಳ್ವಾಸ್ ಇಂಜಿನಿಯರಿಂಗ್ ಕಾಲೇಜ್: ವರ್ಷದ ಅತ್ಯುತ್ತಮ ಪ್ರಾಜೆಕ್ಟ್ ಪ್ರಶಸ್ತಿ

Upayuktha
0



ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕೃಷಿ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಚಂದನ್ ಬಿ.ಎಂ, ಉಸ್ಮಾ, ಪ್ರೇಕ್ಷಾ ಹಾಗೂ ಸಾವನ್ ಶೆಟ್ಟಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತು ಶಿವಮೊಗ್ಗದ ಜವಾಹರಲಾಲ್ ನೆಹರು ನ್ಯಾಷನಲ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ಆಯೋಜಿಸಿದ್ದ  48ನೇ ಸರಣಿಯ ರಾಜ್ಯ ಮಟ್ಟದ ವಿದ್ಯಾರ್ಥಿ ಪ್ರಾಜೆಕ್ಟ್ ಪ್ರದರ್ಶನದಲ್ಲಿ ಅವರು ತಯಾರಿಸಿದ ಪ್ರಾಜೆಕ್ಟ್ ಗೆ ‘ವರ್ಷದ ಅತ್ಯುತ್ತಮ ಪ್ರಾಜೆಕ್ಟ್’ ಪ್ರಶಸ್ತಿ ಲಭಿಸಿತು.  ಒಟ್ಟು ಈ ವಿಭಾಗದಲ್ಲಿ 496 ಪ್ರಾಜೆಕ್ಟ್ ಗಳು ಸ್ಪರ್ಧೆಗೆ ಆಗಮಿಸಿದ್ದವು.


ಮೆಕ್ಕುಜೋಳದ ಒಣಗಿದ ಸಿಪ್ಪೆಯಿಂದ ಕಪ್ ತಯಾರಿಕಾ ಯಂತ್ರದ ಅಭಿವೃದ್ಧಿಗಾಗಿ ಈ ಪ್ರಶಸ್ತಿ ಪಡೆದುಕೊಂಡರು. ಪರಿಸರ ಸ್ನೇಹಿ ಆವಿಷ್ಕಾರ ಮತ್ತು ದಕ್ಷತೆಯ ಹಿನ್ನೆಲೆಯಲ್ಲಿ ಈ ಪ್ರಾಜೆಕ್ಟ್ ಮೌಲ್ಯಮಾಪನಾ ಸಮಿತಿಯ ಸದಸ್ಯರ ಮೆಚ್ಚುಗೆಗೆ ಪಾತ್ರವಾಯಿತು.   ಈ ಪ್ರಾಜೆಕ್ಟ್ ಗೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕೃಷಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಡಾ. ಕೆ. ವಿ. ಸುರೇಶ್ ಮಾರ್ಗದರ್ಶನ ನೀಡಿದ್ದರು.  ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಶ್ಲಾಘಿಸಿದ್ದಾರೆ.


ರೈತರಿಗೆ ಉಪಯೋಗವಾಗುವ ಯಂತ್ರ

10 ರಿಂದ 12 ಡಿಗ್ರಿ  ಬಿಸಿ ನೀರನ್ನು  4 ಗಂಟೆ,  ತಣ್ಣೀರನ್ನು 5 ರಿಂದ 6 ಘಂಟೆ ಶೇಖರಿಸಬಹುದಾಗಿದೆ.  ಒಂದು ಕಪ್‌ಗೆ 59 ಪೈಸೆ  ಖರ್ಚಾಗಲಿದ್ದು, ಒಂದು ರೂಪಾಯಿಗೆ ಮಾರಾಟ ಮಾಡಿದರೂ 41 ಪೈಸೆಯನ್ನು ಉಳಿಸಬಹುದಾಗಿದೆ. ಈ ಯಂತ್ರ ಒಂದು ಗಂಟೆಗೆ 114  ಕಪ್‌ಗಳನ್ನು  ಉತ್ಪಾದನೆ ಮಾಡಬಲ್ಲದು. 



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

Post a Comment

0 Comments
Post a Comment (0)
Advt Slider:
To Top