ಬಾಳಿಗೆ ಬೆಳಕು: ತಾಳ್ಮೆಯ ಮಹತ್ವ

Upayuktha
0




ಕಾಳನುದಯದಿ ಬಿತ್ತೆ ಸಂಜೆಗದು

ಪೈರಹುದೇ?

ಪಾಲುಂಟು ಕಾಲಂಗೆ ನಮ್ಮ ಕೃಷಿಗಳಲಿ|

ವೇಳೆಗಡು ಮರೆತಾತುರದಿನ್

ಅಡುಗೆ ಪಕ್ಕಹುದೇ?

ತಾಳುಮೆಯೇ ಪರಿಪಾಕ ಮಂಕುತಿಮ್ಮ||


ಕೃಷಿಯಲ್ಲಿ ಕಾಲನಿಗೂ ಪಾಲಿದೆ. ಕೃಷಿಕ ಭೂಮಿಯನ್ನು ಉತ್ತಿ ಬೀಜ ಬಿತ್ತನೆ ಮಾಡುತ್ತಾನೆ. ಗೊಬ್ಬರ ನೀರು ಹಾಕಲಾಗುತ್ತದೆ. ಬೇಲಿ ಕಟ್ಟಿ, ರೋಗಗಳು ಬೆಳೆಗೆ ಬಾರದಂತೆ ಮಾಡುತ್ತೇವೆ. ಫಲಬರಲು ಕಾಲವು ಬರಬೇಕು. ಕಾಲಕ್ಕೆ ನಾವು ಕಾಯಲೇ ಬೇಕು. ಅದುವೇ ತಾಳ್ಮೆ. ತಾಳ್ಮೆಯೇ ಪರಿಪಾಕವೆಂದು ಕಗ್ಗ ಹೇಳುತ್ತದೆ. ತಾಳ್ಮೆ ಪ್ರತಿಯೊಬ್ಬರ ಜೀವನದಲ್ಲಿ ಅಮೂಲ್ಯ ಸಂಪತ್ತು. ತಾಳ್ಮೆ ಅರ್ಥಪೂರ್ಣವಾಗಿ ಕಾರ್ಯಗತಗೊಳ್ಳುವದಕ್ಕೆ ಅವಶ್ಯಕ ಗುಣವಾಗಿದೆ.ಇದು ನಮ್ಮ ಜೀವನದಲ್ಲಿ ಸಮರ್ಥನೆ, ನಿಯಂತ್ರಣ, ಅವಧಿಯನ್ನು ತಡೆಗಟ್ಟುವ ಶಕ್ತಿ ನೀಡುತ್ತದೆ. ತಾಳ್ಮೆಯ ಮೂಲಕ ನಾವು ಕಠಿಣ ಪರಿಸ್ಥಿತಿಯನ್ನು ಎದುರಿಸಬಲ್ಲೆವು.ನಮ್ಮ ಕೆಲಸವನ್ನು ನಿರ್ವಹಿಸಬಲ್ಲೆವು. ಸ್ಥಿರ ಹಾಗೂ ಆತ್ಮವಿಶ್ವಾಸ ಬೆಳೆಸಬಲ್ಲೆವು.


ತಾಳ್ಮೆಯಿಲ್ಲದ ವ್ಯಕ್ತಿಯು ತನ್ನ ನಡುವಳಿಕೆಯಿಂದ ಅಪರಾಧ ಮಾಡುವ ಸಾಧ್ಯತೆಯಿದೆ.ಸಂಬಂಧಗಳ ಬಗ್ಗೆ ಕಾಳಜಿವಹಿಸಿ ತಾಳ್ಮೆಯಿಂದಿರಬೇಕು.ಜನರ ಉತ್ತಮ ಗುಣಗಳು, ವೈಯಕ್ತಿಕ ಗುಣಲಕ್ಷಣಗಳ ಮೇಲೆ ಕೇಂದ್ರೀಕರಿಸಬೇಕು. ನಮ್ಮ ಜೀವನದಲ್ಲಿ ತಾಳ್ಮೆಯ ಪ್ರಾಮುಖ್ಯತೆ ಕಲಿಯಲು ಮಾರ್ಗವೆಂದರೆ ಜನರಕಡೆಗೆ ಸಹಾನುಭೂತಿಯ ವಿಧಾನವನ್ನು ಅಳವಡಿಸಿಕೊಳ್ಳುವದು. ಇತರ ಜನರನ್ನೂ ಅವರ ಸಂದರ್ಭಗಳನ್ನು ಅರ್ಥಮಾಡಿಕೊಳ್ಳಲು ಸಹಾನುಭೂತಿ ಸಹಾಯ ಮಾಡುತ್ತದೆ. ತಾಳ್ಮೆ ಮತ್ತು ಸಾಮರ್ಥ್ಯವನ್ನು ಪರಿವರ್ತಿಸುತ್ತದೆ. ಸಂಪತ್ತು ಅಥವಾ ದೈಹಿಕ ಶಕ್ತಿಯು ಯಶಸ್ವಿ ಜೀವನದ ಏಕೈಕ ಅಳತೆಯಾಗಿದೆಯಂದು ಜನರು ತಪ್ಪಾಗಿ ಭಾವಿಸುತ್ತಾರೆ. ಆದರೆ ತಾಳ್ಮೆಯು ಜನರನ್ನು ಆಯಾ ಕ್ಷೇತ್ರದಲ್ಲಿ ಶ್ರೇಷ್ಟತೆಯ ಕಡೆಗೆ ಮಾರ್ಗದರ್ಶನ ಮಾಡುತ್ತದೆ.


ತಾಳ್ಮೆಯ ಪ್ರಯೋಜನಗಳು

1. ದೀರ್ಘಾವಧಿಯ ದೃಷ್ಟಿ- ದೀರ್ಘಕಾಲದ ಗುರಿಗಳ ಮೇಲೆ ಅಚಲವಾದ ಗಮನ ಕಾಪಾಡಿಕೊಳ್ಳಬಹುದು.

2. ಮಾನಸಿಕ ದೈಹಿಕ ಯೋಗಕ್ಷೇಮ- ನಮ್ಮ ಜೀವನದಲ್ಲಿ ತಾಳ್ಮೆಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವ ಮೂಲಕ ನಾವು ಭಾವನೆಗಳನ್ನು ನಿಯಂತ್ರಿಸಲು ಕಲಿಯಬಹುದು. ಕೋಪ, ಹತಾಶೆ, ಅಸಹಾಯಕತೆ ಎಂಬ ನಕಾರಾತ್ಮಕ ಭಾವನೆಗಳನ್ನು ತಪ್ಪಿಸಬಹುದು.

3. ನಿರಂತರ ಪ್ರಯತ್ನಮಾಡುವ ಸಾಮರ್ಥ್ಯ ಪಡೆಯಬಹುದು.

4. ಶಾಂತಿ ಮತ್ತು ಜನಪ್ರಿಯತೆ.


ಸ್ವಯಂ ನಿಯಂತ್ರಣ, ತಾಳ್ಮೆ, ಶಾಂತ, ಸಹಾನುಭೂತಿಯ ನಡುವಳಿಕೆ ಮನುಷ್ಯನನ್ನು ಬಹಳ ಜನಪ್ರಿಯಗೊಳಿಸುವದು. ತಾಳ್ಮೆ ಪ್ರತಿಯೊಬ್ಬರ ಜೀವನದ ಅಮೂಲ್ಯ ಸಂಪತ್ತು. ತಾಳ್ಮೆ ಮಹಾಸಂಪತ್ತು. ನಮ್ಮೆಲ್ಲರ ಬದುಕಿನಲ್ಲಿ ವ್ಯಕ್ತಿತ್ವದಲ್ಲಿ ತಾಳ್ಮೆ ಬರಲಿ. ಜೀವನ ಸುಖಮಯವಾಗಿರಲಿ.




- ಗಿರಿಜಾ.ಎಸ್. ದೇಶಪಾಂಡೆ ಬೆಂಗಳೂರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top