ವಿಜಯಪುರ: ಭಾರತದ ಪ್ರಮುಖ ವೈವಿಧ್ಯಮಯ ಕೃಷಿ ಉದ್ಯಮಗಳಲ್ಲಿ ಒಂದಾಗಿರುವ ಗೋದ್ರೇಜ್ ಅಗ್ರೋವೆಟ್ ಲಿಮಿಟೆಡ್ (ಗೋದ್ರೇಜ್ ಅಗ್ರೋವೆಟ್), ವಿಶೇಷವಾಗಿ ಮೆಕ್ಕೆಜೋಳ ಬೆಳೆಗೆ ಹೊಸ ಕಳೆನಾಶಕವನ್ನು ಪರಿಚಯಿಸಿದೆ.
ಐಎಸ್‍ಕೆ ಜಪಾನ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿರುವ ಕಳೆನಾಶಕ 'ಅಶಿತಕ' ಭಾರತದಲ್ಲಿ ಮೆಕ್ಕೆಜೋಳ ರೈತರು ಎದುರಿಸುತ್ತಿರುವ ಪ್ರಮುಖ ಸವಾಲಾಗಿರುವ ಹುಲ್ಲು ಮತ್ತು ಅಗಲವಾದ ಎಲೆ ಹೊಂದಿರುವ ಕಳೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಹೊಸ ಪರಿಹಾರವಾಗಿದೆ. ಮೆಕ್ಕೆಜೋಳ ಬೆಳೆಗೆ ಕಳೆ ಬಾಧೆ ಪ್ರಮುಖ ಸಮಸ್ಯೆಯಾಗಿದ್ದು, ಆರಂಭಿಕ ಬೆಳವಣಿಗೆಯ ಹಂತಗಳಲ್ಲಿ, ಅಶಿತಕವನ್ನು 2 ರಿಂದ 4 ಎಲೆಗಳ ಹಂತದಲ್ಲಿ ಅನ್ವಯಿಸಿದರೆ, ಕಳೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಎಂದು ಗೋದ್ರೇಜ್ ಅಗ್ರೋವೆಟ್ ಬೆಳೆ ಸಂರಕ್ಷಣಾ ವಹಿವಾಟಿನ ಸಿಇಒ ರಾಜವೇಲು ಎನ್.ಕೆ. ಪ್ರಕಟಣೆಯಲ್ಲಿ ಹೇಳಿದ್ದಾರೆ.
ಮೆಕ್ಕೆಜೋಳದಲ್ಲಿ ಅಶಿತಕದ ಪರಿಣಾಮಕಾರಿ ಕಳೆ ನಿಯಂತ್ರಣವು ಬೆಳೆ-ಕಳೆ ಸ್ಪರ್ಧೆಯನ್ನು ನಿಯಂತ್ರಿಸುತ್ತದೆ. ಸೀಮಿತ ಪ್ರಮಾಣದಲ್ಲಿ ಮಣ್ಣಿನ ತೇವಾಂಶ ಮತ್ತು ಪೋಷಕಾಂಶಗಳ ಉತ್ತಮ ಬಳಕೆಗೆ ಚಾಲನೆ ನೀಡುತ್ತದೆ. ಹೂಬಿಡುವ ಮತ್ತು ಧಾನ್ಯ ಭರ್ತಿಯಾಗುವ ಮಹತ್ವದ ಹಂತಗಳಲ್ಲಿ ಸಸ್ಯದ ಆರೋಗ್ಯವನ್ನು ರಕ್ಷಿಸುತ್ತದೆ ಎಂದು ವಿವರಿಸಿದ್ದಾರೆ.
2 ರಿಂದ 4 ಎಲೆಗಳ ಹಂತದಲ್ಲಿ ಎಕರೆಗೆ 400 ಮಿಲಿ ದ್ರಾವಕದೊಂದಿಗೆ ಬಳಸಿ ಕಳೆಗಳನ್ನು ಮೊದಲೇ ನಿಯಂತ್ರಿಸಬಹುದಾಗಿದೆ. ಇದು ಹೆಚ್ಚು ಸ್ಥಿರವಾದ ಉತ್ಪಾದನೆ, ಉತ್ತಮ ಧಾನ್ಯದ ಗುಣಮಟ್ಟ ಮತ್ತು ವಿಶೇಷವಾಗಿ ಮಳೆಯಾಶ್ರಿತ ಪ್ರದೇಶಗಳಲ್ಲಿ ಏರಿಳಿತದಿಂದ ಕೂಡಿರುವ ಕೃಷಿ ಆದಾಯದ ವಿರುದ್ಧ ಬಲಿಷ್ಠ ರಕ್ಷಣೆ ಒದಗಿಸುತ್ತದೆ ಎಂದು ಹೇಳಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


