ನಮ್ಮ ಹಿಂದು ದೇವತಾ ಪೂಜಾ ಕಾರ್ಯದಲ್ಲಿ ಕದಳಿಗೆ ವಿಶೇಷವಾದ ಸ್ಥಾನಮಾನ. ಅದರಲ್ಲೂ ನಮ್ಮ ಮೇೂದಕ ಪ್ರಿಯ ಗಣಪನಿಗಂತೂ ಕದಳಿ ಎಲೆಯಲ್ಲಿಯೇ ಸಮಪಿ೯ಸಿದರೆ ಅತ್ಯಂತ ಶ್ರೇಷ್ಠ.
ಹಾಗಾದರೆ ಅಬುಧಾಬಿಯಂತಹ ಮರಳು ಭೂಮಿಯಲ್ಲಿ ನಮ್ಮ ಗಣಪ ಈ ಕದಳಿಯನ್ನು ನಿರೀಕ್ಷೆ ಮಾಡುವುದಾದರೂ ಹೇಗೆ?.ಹಾಗಾಗಿ ಕದಳಿ/ಬಾಳೆ ಎಲೆ ಭಾರತದಂತಹ ಗಣಪನ ನೆಲದಿಂದಲೇ ಬರಬೇಕು. ಆದುದರಿಂದ ಅಬುಧಾಬಿಯಲ್ಲಿ ಗಣೇಶನ ಪೂಜಕ ಭಕ್ತಾದಿಗಳಿಗೆ ಈ ಕದಳಿ ಎಲೆ ಅಥಾ೯ತ್ ಬಾಳೆ ಎಲೆಯ ಮೇಲೆ ಎಷ್ಟೊಂದು ಪ್ರೀತಿ ಎಷ್ಟೊಂದು ಗೌರವ. ಅಬುಧಾಬಿ ದುಬೈಯಂತಹ ಕೆಲವೊಂದು ಮಾರುಕಟ್ಟೆಯ ಮಹಲುಗಳಲ್ಲಿ ಬಾಳೆ ಎಲೆಗಳು ಲಭ್ಯ. ಕೇವಲ ನಾಲ್ಕು ಬಾಳೆ ಎಲೆಯ ಒಂದು ಕಟ್ಟಿಗೆ ನಮ್ಮ ರೂಪಾಯಿಗಳಲ್ಲಿ ಹೇಳಬೇಕಾದರೆ ಸುಮಾರು 75₹. ಅಂದರೆ ಯು.ಎ.ಇ.ಯ Dirham ಪ್ರಕಾರ 3.75. ಅಂದರೆ ಒಂದು Dirham=23.86.₹ ಸಮ. ಅಂದರೆ ನಮ್ಮ ರೂಪಾಯಿ ಪೈಸಾ ಲೆಕ್ಕಾಚಾರದ ಪ್ರಕಾರ ಒಂದು ಬಾಳೆ ಎಲೆಗೆ ಸರಿ ಸುಮಾರು 18 ರಿಂದ 19 ₹.
ಹಾಗಂತ ಅಬುಧಾಬಿಯಲ್ಲಿ ಇದು ದುಬಾರಿ ಅಂತಹ ಹೇಳುವುದು ಕೂಡಾ ತಪ್ಪು. ಇದನ್ನು ಬಹುದೂರದ ಬಾಳೆ ಬೆಳೆಯುವ ದೇಶಗಳಿಂದ ಚಿಗುರಿನ ಬಾಳೆ ಎಳೆಗಳನ್ನು ಅತ್ಯಂತ ಸೇೂಪಾನವಾಗಿ ಜೋಪಾನವಾಗಿ ಸಾಗಿಸಿಕೊಂಡು ಬರಬೇಕು. ಮಾತ್ರವಲ್ಲ ಅನಿವಾಸಿ ಭಾರತೀಯ ಭಕ್ತಾದಿಗಳು ತಮ್ಮ ಪೂಜಾ ಕಾರ್ಯಕ್ರಮಕ್ಕೆ ಬಳಸಿಕೊಳ್ಳುತ್ತಾರೆ ವಿನಾ ಯಾವಾಗಲೂ ವಿಪರೀತ ಬೇಡಿಕೆ ಇದೆ ಅನ್ನುವ ಹಾಗೆ ಇಲ್ಲ.
ಇವಿಷ್ಟು ನಮ್ಮ ಮೇೂದಕ ಪ್ರಿಯ ಗಣಪನ ಹಬ್ಬದಲ್ಲಿ ಮರಳು ನಾಡಿನ ಚಿನ್ನದ ಬೀಡು ಅಬುಧಾಬಿ ದುಬೈಯಲ್ಲಿ ನೇೂಡಿ ಸವಿಯಬಹುದಾದ ಗಣಪನ ಕದಳಿ ಪುರಾಣ.
- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ