ಕೇರಳ - ಕರ್ನಾಟಕ ಗಡಿ ಭಾಗದ ಹಚ್ಚ ಹಸಿರಿನಿಂದ ಆವೃತವಾದ ಈ ಊರು ಮುರೂರು. ದಟ್ಟ ಅರಣ್ಯದ ನಡುವೆ ಕಿರಿದಾದ ರಸ್ತೆಯ ಮೂಲಕ ನಗರದ ಕಡೆ ಸಾಗುತ್ತಾ ತನ್ನೆಡೆ ಎಲ್ಲಾರನ್ನು ಸೆಳೆಯುತ್ತದೆ. ಸುಳ್ಯ ಎಂಬ ಜೀವವೀಣೆಯೊಂದಿಗೆ ಬೆರೆಯುತ್ತಾ ಮೈದುಂಬಿ ಹರಿಯುವ ಪಯಸ್ವಿನಿ ನದಿಯು ತನ್ನ ಇಕ್ಕೆಲಗಳಲ್ಲಿ ಇರುವ ಎಲ್ಲರಿಗೂ ಉಪಯೋಗವಾಗುವುದು ಹಾಗೂ ಮಳೆಗಾಲದಲ್ಲಿ ತನ್ನ ರೌದ್ರಾವತಾರವನ್ನು ಭೀಕರವಾಗಿ ತೋರಿಸುತ್ತಾ ಎಲ್ಲವನ್ನೂ ತನ್ನ ಮಡಿಲಿಗೆ ಸೇರಿಸಿ ಅರಬ್ಬೀ ಸಮುದ್ರವನ್ನು ಸೆರುತ್ತದೆ.
ಅದರಲ್ಲೂ ಹೇಸರೇ ಹೇಳುವಂತೆ ಮುರೂರು ಎಂಬ ಪ್ರದೇಶ ಮೂರು ಜಾಗವನ್ನು ಸೇರಿ ಬಂದಿದೆ ಎಂಬುದಾಗಿ ಹಿರಿಯರು ಹೇಳುತ್ತಾರೆ.
ದೈವ ಕೋಲವನ್ನು ಹೆಚ್ಚಾಗಿ ನಂಬಿರುವ ಈ ಊರಿನವರು ಸೀಮೆಯ ತೊಡಿಕಾನ, ಮಂಡೆಕೋಲು & ಅಡೂರು ಮಹಾಲಿಂಗೇಶ್ವರ ದೇವರನ್ನು ಪೂಜಿಸುತ್ತಿರುವರು.
ಹಾಗೆಯೇ ಎಲ್ಲಾ ಮತಧರ್ಮದವರಿರುವ ನನ್ನೂರು ಗೌಡರ ಅರೆಭಾಷೆಯೊಂದಿಗೆ ಸೇರಿ ತುಳುವಿನವರೊಂದಿಗೆ ಬೆರೆತು, ಅತ್ತ ಮಲಯಾಳಿಯವರೊಂದಿಗೆ ಕೊಂಕಣಿ, ಮರಾಠಿ ಎಲ್ಲಾ ಮಿಶ್ರಿತಗೊಂಡು ಸುಖ ದುಃಖದಲ್ಲಿ ಒಟ್ಟಾಗಿ ಇರುವ ಊರು ಇದು. ಶಬರಿ ಯಾತ್ರ ದಿನಗಳಲ್ಲಿ ಎಲ್ಲರನ್ನೂ ಸತ್ಕರಿಸುತ್ತ ಅವರನ್ನು ಹರಸುತ್ತಾರೆ.
ಹಲವಾರು ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿರುವ ಈ ಭಾಗ ಕೊರಗಜ್ಜ, ಮಹಾಲಿಂಗೇಶ್ವರ, ಮುಂತಾದ ದೇವಾನುದೇವತೆಗಳನ್ನು ಪೂಜಿಸುತ್ತಾ ಬಂದಿದೆ. ಅದರಲ್ಲೂ ನಮ್ಮ ಹಿಂದಿನ ಕಾಲದವರು ಹೇಳುವಂತೆ ಗ್ರಾಮೀಣ ಭಾಗದಲ್ಲಿ ಹಂಡೆ(ಮಂಡೆ)ಗೆ ಕೋಲಿನಲ್ಲಿ ಹೊಡೆದರಿಂದ ಬಂದ ಹೆಸರು ನನ್ನ ಗ್ರಾಮವಾದ ಮಂಡೆಕೋಲಿನಲ್ಲಿ ಮಾವಜಿ, ಕೇನಾಜೆ, ಬೊಳುಗಲ್ಲು, ಪಡುಮಜಲು ಎಂಬ ನಾಲ್ಕೂರಿನ ಗಲಾಟೆಯನ್ನು ಉಳ್ಳಾಕುಲ ದೈವ ಬಿಡಿಸುವುದನ್ನು ನೋಡಲು ದೂರದೂರಿನಿಂದ ಮಕ್ಕಳು, ಮರಿಮಕ್ಕಳೆಲ್ಲರೂ ಬರುವ ಅಪರೂಪದ ದೃಶ್ಯಗಳನ್ನು ನೋಡುವುದೇ ಖುಷಿ.
ನೂರಾರು ಮಕ್ಕಳನ್ನು ತನ್ನ ಮಡಿಲಿನಲ್ಲಿ ಬೆಳೆಸಿ ಎಂದು ಎಲ್ಲೇಲ್ಲೊ ಉದ್ಯೋಗದಲ್ಲಿರುವವರನ್ನು ಈ ಊರು ಆದರದಿಂದಲೇ ಬರಮಾಡಿಕೊಳ್ಳುತ್ತದೆ. ಆದರೆ ಶಿಕ್ಷಣ ನೀಡಿದ ಶಾಲೆ ಇಂದು ಮುಚ್ಚಿರುವುದೇ ವಿಪರ್ಯಾಸ.
- ಧನ್ಯ ದಾಮೋದರ
ವಿವೇಕಾನಂದ ಕಾಲೇಜು ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ