ಚನ್ನರಾಯಪಟ್ಟಣ: ಶ್ರೀ ಹೃದ್ಯಾ ಅಕಾಡೆಮಿ ತಂಡದಿಂದ ನೃತ್ಯ ಕಾರ್ಯಕ್ರಮ

Upayuktha
0




ಬೆಂಗಳೂರು: ಗುರು ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ಅಖಿಲ ಭಾರತೀಯ ಸಂಗೀತ ನೃತ್ಯ ಕಲಾವಿದರ ಒಕ್ಕೂಟ (ರಿ) ಇದರ ಸಹಯೋಗದೊಂದಿಗೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ರಾಯರ ರಂಗಮಂದಿರದ ಆವರಣದಲ್ಲಿ ವಿದುಷಿ ಸ್ವಾತಿ ಪಿ ಭಾರದ್ವಾಜ ಅವರ ನೇತೃತ್ವದಲ್ಲಿ ವಿದುಷಿ ಶ್ರೀಮತಿ ರೂಪಶ್ರೀ ಕೆ ಎಸ್ ಅವರ ನಿರ್ದೇಶನದಲ್ಲಿ ಶ್ರೀ ಹೃದ್ಯಾ ಅಕಾಡೆಮಿ (ರಿ) ತಂಡದಿಂದ ಭಾನುವಾರ (ಆ.10) ನೃತ್ಯ ಕಾರ್ಯಕ್ರಮ ನಡೆಯಿತು.


ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾಷ್ಟ್ರೀಯ ಸಂಗೀತ ನೃತ್ಯ ವೇದಿಕೆಯಲ್ಲಿ ಬೆಂಗಳೂರಿನ ಶ್ರೀ ಹೃದ್ಯಾ ಅಕಾಡಮಿ (ರಿ.) ತಂಡದ ವಿದ್ಯಾರ್ಥಿನಿಯರಾದ ಕುಮಾರಿ ಹೃದ್ಯಾ ಭಟ್ ಕೆ., ಜಿನೋವಿಯಾ ಪಿ., ಪ್ರಗತಿ ಪಿ., ದುತಿಶ್ರೀ ಸಿ., ಶ್ರದ್ಧ ಎಚ್ ಎಸ್, ಆವ್ಯಾ ತಿವಾರಿ, ಸೇಜಲ್ ವಿ ಆರಾಧ್ಯ ತಮ್ಮ ಗುರುಗಳಾದ ಶ್ರೀಮತಿ ರೂಪಶ್ರೀ ಕೆ ಎಸ್ ಅವರೊಂದಿಗೆ ನೃತ್ಯ ಪ್ರದರ್ಶನ ನೀಡಿದರು. ಮಧ್ಯಾಹ್ನದ ಮಹಾ ಮಂಗಳಾರತಿಯೊಂದಿಗೆ ಹಲವಾರು ರಾಯರ ಭಕ್ತರ ಸಮ್ಮುಖದಲ್ಲಿ ವಿಶೇಷ ಪೂಜಾ ಕಾರ್ಯಕ್ರಮವು ವೈಭವವಾಗಿ ನಡೆಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top