ಮಂಗಳೂರು: ಹಸಿರು ಹೊದಿಕೆಯನ್ನು ಉತ್ತೇಜಿಸುವ, ಮಕ್ಕಳಿಗೆ ನಳನಳಿಸುವ ಮತ್ತು ಸುರಕ್ಷಿತ ಜಾಗವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಹೌಸ್ ಆಫ್ ಬಿಂದು (ಎಸ್.ಜಿ.ಕಾರ್ಪೊರೇಟ್ಸ್) ಅರಣ್ಯ ಇಲಾಖೆ ಸಹಯೋಗದಲ್ಲಿ ಪುತ್ತೂರಿನಲ್ಲಿ ಉದ್ಯಾನವನ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಂಡಿದೆ.
ಸಮುದಾಯ ತೊಡಗಿಸಿಕೊಳ್ಳುವಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಬಿಂದು ಸಮೂಹದ ಸಿಎಸ್‍ಆರ್ ಮತ್ತು ಕಾರ್ಯಾಚರಣೆ ವಿಭಾಗದ ನಿರ್ದೇಶಕಿ ರಂಜಿತಾ ಶಂಕರ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಯೋಜನೆಯ ಚಾಲನಾ ಸಮಾರಂಭದಲ್ಲಿ ಪುತ್ತೂರು ಸಹಾಯಕ ಅರಣ್ಯ ಸಂರಕ್ಷಕ ಸುಬ್ಬಯ್ಯ ನಾಯ್ಕ, ಆರ್‍ಎಫ್‍ಓ ಕಿರಣ್ ಕುಮಾರ್, ಉಪ ಆರ್.ಎಫ್.ಓ ಗಳಾದ ರಾಜೇಂದ್ರ ಕುಮಾರ್, ಉಲ್ಲಾಸ್, ಮೇಘ ಫ್ರೂಟ್ ಪ್ರೊಸೆಸಿಂಗ್‍ನ ರಾಷ್ಟ್ರೀಯ ಖರೀದಿ ವ್ಯವಸ್ಥಾಪಕ ಮುರಳೀಧರ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ