ಬೆಂಗಳೂರು : ಪ್ರಕಾಶನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಅಂಗವಾಗಿ ಆಗಸ್ಟ್ 7 ರಿಂದ 13ರ ವರೆಗೆ ಏಳು ದಿನಗಳ ಕಾಲ "ಆರಾಧನಾ ಸಪ್ತಾಹ" ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು (ಪ್ರತಿದಿನ ಸಂಜೆ 7-00ಕ್ಕೆ): ಆಗಸ್ಟ್ 7ರಂದು "ದಾಸರ ಪದಗಳ ಗಾಯನ"-ಕುಮಾರಿಯರಾದ ಮನಸ್ವಿ ಜಿ. ಕಶ್ಯಪ್, ಅನನ್ಯ ಬೆಳವಾಡಿ, ದೀಪ್ತಿ ಶ್ರೀನಿವಾಸನ್, ಶ್ರೇಯಾ ರಾವ್ ಮತ್ತು ನಿಶಿತಾ ಪ್ರಸಾದ್. ಕೀ-ಬೋರ್ಡ್ : ಟಿ.ಎಸ್. ರಮೇಶ್, ತಬಲಾ : ಮಧುಸೂದನ್ ಕೊಪ್ಪ.
ಆಗಸ್ಟ್ 8ರಂದು : ವಿದ್ವಾನ್ ಮೈಸೂರು ರಾಮಚಂದ್ರಾಚಾರ್ ಮತ್ತು ಸಂಗಡಿಗರಿಂದ "ದಾಸವಾಣಿ". ಆಗಸ್ಟ್ 9ರಂದು : ವಿದುಷಿ ರೂಪಶ್ರೀ ಮಧುಸೂದನ್ ಮತ್ತು ಸಂಗಡಿಗರಿಂದ "ಭರತನಾಟ್ಯ ಪ್ರದರ್ಶನ".
ಆಗಸ್ಟ್ 10ರಂದು : ವಿದ್ವಾನ್ ಶಶಾಂಕ್ ಎಸ್. ಗಿರಿ ಮತ್ತು ಸಂಗಡಿಗರಿಂದ "ಕೊಳಲು ವಾದನ".
ಆಗಸ್ಟ್ 11ರಂದು : ವಿದುಷಿ ಇಂದು ನಾಗರಾಜ್ ಹಾಗೂ ವಿದುಷಿ ಲಕ್ಷ್ಮೀ ನಾಗರಾಜ್ ಮತ್ತು ಸಂಗಡಿಗರಿಂದ "ಹರಿನಾಮ ಸಂಕೀರ್ತನೆ".
ಆಗಸ್ಟ್ 12ರಂದು : ವಿದುಷಿ ನಂದಿನಿ ಗುಜಾರ್ ಮತ್ತು ಸಂಗಡಿಗರಿಂದ "ಹರಿದಾಸ ಮಂಜರಿ".
ದಿನಾಂಕ 13-8-2025, ಬುಧವಾರ : ಬೆಳಗ್ಗೆ 9-00ಕ್ಕೆ ಸೋಸಲೆ ಶ್ರೀ ವ್ಯಾಸರಾಜ ಮಠಾಧೀಶರಾದ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದಂಗಳವರ ಅಧ್ಯಕ್ಷತೆಯಲ್ಲಿ ಪವನ ಪರಿಮಳ ಪ್ರಸಿರಿಣೀ ಸಭಾ ವಾಚಿಕ ಪರೀಕ್ಷೆಗಳು, ವಿದ್ಯಾರ್ಥಿಗಳಿಂದ ಶಾಸ್ತ್ರಾನುವಾದ. ಸಂಜೆ 6-30ಕ್ಕೆ ಆರಾಧನಾ ಸಮಾರೋಪ ಸಮಾರಂಭ : ವಿದ್ಯಾರ್ಥಿಗಳಿಗೆ ದಿ|| ನಂದಗುಡಿ ರಾಮಚಂದ್ರ ರಾವ್ ಸ್ಮಾರಕ ಪಾರಿತೋಷಕ ವಿತರಣೆ.
ವಿದ್ವಾಂಸರಾದ ರಾಮವಿಠಲಾಚಾರ್ಯ ಮತ್ತು ಡಾ|| ಹೆಚ್. ಸತ್ಯನಾರಾಯಣಾಚಾರ್ಯ ಇವರಿಂದ ಉಪನ್ಯಾಸ. ನಂತರ ಶ್ರೀಪಾದಂಗಳವರ ಅನುಗ್ರಹ ಸಂದೇಶ ಮತ್ತು ಫಲ ಮಂತ್ರಾಕ್ಷತೆ ವಿತರಣೆ.
ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಪ್ರಕಾಶನಗರ, ಬೆಂಗಳೂರು-560021.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ