ನವಭಾರತ ರಾತ್ರಿ ಪ್ರೌಢಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವ

Upayuktha
0


ಮಂಗಳೂರು: 83 ವರ್ಷಗಳ ಇತಿಹಾಸ ಈ ಶಾಲೆಗಿದೆ. ಅಂದೇ ನಮ್ಮ ಸ್ಥಾಪಕರು ವಿದ್ಯಾರ್ಥಿಗಳಿಗೆ ಶಿಕ್ಷಣದ ಔಚಿತ್ಯವನ್ನು ಮನಗಂಡಿದ್ದರು. ಸ್ವಾತಂತ್ರ್ಯ ಜ್ಯೋತಿ ಬೆಳಗುವುದರ ಹಿಂದೆ ಅನೇಕರ ಬಲಿದಾನ ಆಗಿದೆ. ಅಹಿಂಸಾ ತತ್ವಕ್ಕಿಂತಲೂ ಮಿಗಿಲಾಗಿ ಸ್ವಾತಂತ್ರ್ಯ ಸೇನಾನಿಗಳಿಂದ ಹೋರಾಟ ನಡೆಸಿದೆ. ಆ ವಿಚಾರವನ್ನು ನಮ್ಮ ಎಳೆಯರಿಗೆ ತಲುಪಿಸಿ ಅವರಲ್ಲಿ ದೇಶಾಭಿಮಾನ ಉದ್ದೀಪನಗೊಳಿಸಬೇಕು. ಈ ದೇಶ ಉಳಿಯಬೇಕಾದರೆ ರಾಷ್ಟ್ರೀಯತೆ ಪ್ರತಿಯೋರ್ವನಲ್ಲೂ ಸಹಜವಾಗಿ ಮೂಡಬೇಕು. ದೇಶಕ್ಕಾಗಿ ದುಡಿಯುವ ಮತ್ತು ಮಡಿಯುವವರ ಸಂಖ್ಯೆ ಹೆಚ್ಚಲಿ. ವಿದ್ಯಾರ್ಥಿಗಳು ಇದನ್ನರಿತು ಬಾಳಿರಿ ಎಂದು ನವ ಭಾರತ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಡಾ.ಪಿ.ವಿ. ಶೆಣೈಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು.


CA ಸುಧೀರ್ ಶೆಣೈ ಮುಖ್ಯ ಅತಿಥಿಯಾಗಿ ಭಾಗವಹಿಸಿ ಧ್ವಜಾರೋಹಣ ಮಾಡಿದರು. ಮಧುಸೂದನ ಅಯಾರ್, ಗಣೇಶ್ ರಾವ್, ಫಕ್ರುದ್ದೀನ್ ಆಲಿ,  ಆನಂದ ಕೆ., ಜಯಧರ್, ವರ್ಕಾಡಿ ಮಾಧವ ನಾವಡ, ದಿನೇಶ್ ಕುಮಾರ್, ಬಾಲಕೃಷ್ಣ, ರವೀಶ್ ಆಚಾರ್ಯ, ಭರತ್ ಮಾಡ, ಸಾವಿತ್ರಿ ಸೋಮಶೇಖರ್ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ವರ್ಕಾಡಿ ರವಿ ಅಲೆವೂರಾಯ ಮಾರ್ಗದರ್ಶನವಿತ್ತರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top