ಅಪಘಾತದಲ್ಲಿ ತೀವ್ರ ಗಾಯ: ಚಿಕಿತ್ಸೆ ನೆರವಿಗಾಗಿ ಮನವಿ

Upayuktha
0


ಮಂಗಳೂರು: ಅಪಘಾತದಿಂದ ತಲೆಗೆ ಗಂಭೀರ ಗಾಯಗೊಂಡು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ನಿವಾಸಿಯಾದ ಸುಮಿತ್ರಾ (46) ಅವರ ಚಿಕಿತ್ಸೆಗೆ ನೆರವಾಗುವಂತೆ ಅವರ ಪುತ್ರ ಶ್ರೇಯಸ್ ಕೆ.ಬಿ. ವಿನಂತಿಸಿದ್ದಾರೆ.


ಸುಮಿತ್ರಾ ಅವರು ಜುಲೈ 3ರಂದು ಕೆಲಸಕ್ಕೆಂದು ಕುಲ್ಕುಂದದಿಂದ ಮರ್ಧಾಳ ಕಡೆಗೆ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಕೈಕಂಬ ಬಳಿ ರಿಕ್ಷಾ ಪಲ್ಟಿಯಾಗಿ ಅವರ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿತ್ತು. ರಿಕ್ಷಾದ ಹಿಂಬದಿ ಕುಳಿತಿದ್ದ ಅವರ ತಲೆಯ ಬಲಭಾಗಕ್ಕೆ ತೀವ್ರ ಗಾಯವಾಗಿದ್ದು, ತಕ್ಷಣವೇ ಕಡಬ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ 108 ಆಂಬುಲೆನ್ಸ್ ಮೂಲಕ ಪುತ್ತೂರು ಸಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ, ನಂತರ ಮಂಗಳೂರಿನ ಅಂಬೇಡ್ಕರ್ ವೃತ್ತದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಪ್ರಸ್ತುತ ಅವರು ಚಿಕಿತ್ಸೆಯಲ್ಲಿದ್ದು, ತಲೆಯ ಶಸಚಿಕಿತ್ಸೆ ನಡೆಸಲಾಗಿದೆ. ಮುಂದೆಯೂ ಶಸ್ತ್ರಚಿಕಿತ್ಸೆ ಅಗತ್ಯವಿದ್ದು, ಒಟ್ಟು ವೆಚ್ಚ ಸುಮಾರು ೧೫ ಲಕ್ಷ ರೂ.ಗೂ ಹೆಚ್ಚು ಆಗಬಹುದೆಂದು ವೈದ್ಯರು ತಿಳಿಸಿದ್ದಾರೆ.


ಸುಮಿತ್ರಾ ಅವರ ಕುಟುಂಬವು ಆರ್ಥಿಕವಾಗಿ ದುರ್ಬಲವಾಗಿದ್ದು, ಯಾವುದೇ ಕೃಷಿ, ಇತರ ಆದಾಯದ ಮೂಲಗಳು ಇರುವುದಿಲ್ಲ. ಇವರ ಪತಿ ಟೈಲರ್ ವೃತ್ತಿ ಮಾಡುತ್ತಿದ್ದು, ಇತ್ತೀಚೆಗೆ ಅವರಿಗೆ ಬೆನ್ನುಮೂಳೆಯ ಸಮಸ್ಯೆಯಿಂದ ಮನೆ ಖರ್ಚು ಹಾಗೂ ಮಕ್ಕಳ ವಿದ್ಯಾಭ್ಯಾಸದ ಖರ್ಚು ಎಲ್ಲವೂ ಸುಮಿತ್ರಾ ಅವರ ಮೇಲಿತ್ತು. ಇಂತಹ ಸಂಕಷ್ಟದ ಸಂದರ್ಭದಲ್ಲಿ ಆಸ್ಪತ್ರೆ ಮತ್ತು ಚಿಕಿತ್ಸಾ ವೆಚ್ಚವನ್ನು ಭರಿಸುವುದು ಈ ಕುಟುಂಬಕ್ಕೆ ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಹೃದಯಿ ದಾನಿಗಳು ಅಮ್ಮನ ಚಿಕಿತ್ಸೆಗೆ ನೆರವಾಗುವಂತೆ ಸುಮಿತ್ರಾ ಅವರ ಪುತ್ರ ಶ್ರೇಯಸ್ ಕೆ.ಬಿ. ವಿನಂತಿಸಿದ್ದಾರೆ. ಮಾಹಿತಿಗೆ ಶ್ರೇಯಸ್ (ದೂ. 9108243172) ಅವರನ್ನು ಸಂಪರ್ಕಿಸಬಹುದು.


----------------

ನೆರವು ನೀಡುವವರು ಸುಮಿತ್ರಾ ಅವರ ಪುತ್ರಿ ಶ್ರೇಯಾ ಕೆ.ಬಿ. ಅವರ ಬ್ಯಾಂಕ್ ಖಾತೆಗೆ ಹಣ ನೀಡಬಹುದು.

Bank of Baroda -ಸುಬ್ರಹ್ಮಣ್ಯ ಶಾಖೆ

ಅಕೌಂಟ್ ನಂಬರ್: 70570100004654

IFSC: BARB0VJSUBR

ಗೂಗಲ್ ಪೇ ನಂಬರ್: 9743203656


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top