ಐತಾಳ ಹಾಗೂ ಕಾರಂತರಿಗೆ ಕೂಟ ಗುರುಶ್ರೀ ರತ್ನ ಪುರಸ್ಕಾರ
ಮಂಗಳೂರು: ಲೋಕ ಕಲ್ಯಾಣಾರ್ಥವಾಗಿ ಕೂಟ ಮಹಾಜಗತ್ತಿನ ಮಂಗಳೂರು ಅಂಗ ಸಂಸ್ಥೆಯು ಸೆ.5ರಂದು ಸಪ್ತಶತಿ ಪಾರಾಯಣದೊಂದಿಗೆ ಸಾಮೂಹಿಕ ದುರ್ಗಾಪೂಜೆಯನ್ನು ಪಾಂಡೇಶ್ವರದ ಶ್ರೀ ಗುರುನರಸಿಂಹ ಸಭಾಭವನದಲ್ಲಿ ನಡೆಸಲಾಗುವುದು. ಈ ಕಾರ್ಯಕ್ರಮದ ಯಶಸ್ವಿಗೆ ಇಡೀ ಅಂಗ ಸಂಸ್ಥೆಯ ಸದಸ್ಯರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಅಧ್ಯಕ್ಷ ಶ್ರೀಧರ ಹೊಳ್ಳ ಹೇಳಿದರು.
ಕೂಟ ಮಹಾಜಗತ್ತು ಸಂಸ್ಥೆಯ ಮಂಗಳೂರು ಅಂಗ ಸಂಸ್ಥೆಯು ಗುರುಪೂರ್ಣಿಮೆಯ ಹಿನ್ನೆಲೆಯಲ್ಲಿ ಪಾಂಡೇಶ್ವರದಲ್ಲಿರುವ ಗುರು ನರಸಿಂಹ ಸಭಾ ಭವನದಲ್ಲಿ ಆಯೋಜಿಸಿದ್ದ ಮಂಗಳೂರಿನ ಶ್ರೀಮಂಗಳಾದೇವಿ ದೇವಸ್ಥಾನದ ಅನುವಂಶಿಕ ಹಿರಿಯ ಅರ್ಚಕ ಶ್ರೀನಿವಾಸ ಐತಾಳ ಹಾಗೂ ಕುಡುಪು ಕ್ಷೇತ್ರದ ಪವಿತ್ರಪಾಣಿ ಕೆ. ಬಾಲಕೃಷ್ಣ ಕಾರಂತ್ ಅವರಿಗೆ ಕೂಟ ಗುರುಶ್ರೀ ರತ್ನ ಪುರಸ್ಕಾರ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಗುರುವಿನ ಮಹತ್ವದ ಬಗ್ಗೆ ವ್ಯಾಖ್ಯಾನಿಸುತ್ತಾ, ಸರಿಯಾದ ಹಾಗೂ ಯೋಗ್ಯ ಗುರುವಿನ ಆಯ್ಕೆ ಒಂದು ಘಟ್ಟವಾದರೆ, ಆಯ್ಕೆ ಮಾಡಿಕೊಂಡು ಗುರುವಿಗೆ ಸಂಪೂರ್ಣ ಸಮರ್ಪಣಾ ಬಾವದಿಂದ ಶರಣಾಗಿ, ಅವರಿಂದ ಜ್ಞಾನವನ್ನು ಪಡೆದುಕೊಂಡು ಅನುಗ್ರಹ ಪಡೆದರೆ ಯಶಸ್ಸು ಸಾಧ್ಯ. ಕರ್ಮದ ಫಲ ಭಸ್ಮವಾಗಬೇಕಾದರೆ ಜ್ಞಾನ ಪ್ರಾಪ್ತಿಯಾಗಬೇಕು. ಹುಟ್ಟಿನಿಂದ ಬ್ರಾಹ್ಮಣ ಎಂದು ಗುರುತಿಸಿಕೊಳ್ಳುವುದಕ್ಕಿಂತ ಜ್ಞಾನ, ವಿದ್ಯೆ, ತಪಸ್ಸು, ಆಚರಣೆ, ಅನುಷ್ಠಾನದಿಂದ ಬ್ರಾಹ್ಮಣನಾಗಬೇಕು ಎಂದು ವಿದ್ವಾನ್ ಬಾಳಂಭಟ್ ಮನೆತನದ ಡಾ. ಸತ್ಯಕೃಷ್ಣ ಭಟ್ ಹೇಳಿದರು.
ಸಮುದಾಯದ ನಮ್ಮ ಸಂಸ್ಕೃತಿಯ ಮಹತ್ವವನ್ನು ಮಕ್ಕಳಿಗೆ ಸರಿಯಾಗಿ ಹೇಳಿಕೊಡಬೇಕು. ಸಂಸ್ಕೃತಿಯನ್ನು ಹೇಳಿಕೊಡದಿದ್ದರೆ, ಮನೆತನ ಮತ್ತು ಸಂಸ್ಕಾರವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೂಟ ಮಹಾಜಗತ್ತು (ರಿ) ಸಾಲಿಗ್ರಾಮ ಇಲ್ಲಿನ ಸಂಘಟನಾ ಕಾರ್ಯದರ್ಶಿ ಮಧೂರು ಕೃಷ್ಣಪ್ರಸಾದ್ ಅಡಿಗ ಹೇಳಿದರು.
ಪರಂಪರೆಯನ್ನು ಇಟ್ಟುಕೊಂಡು ಬಂದ ಸಮಾಜ ನಮ್ಮದು. ಜೀವನಕ್ಕೆ ಹಣದ ಅವಶ್ಯಕತೆ ಇದೆ. ಆದರೆ ಹಣವೇ ಜೀವನವಲ್ಲ. ಬದುಕಿನಲ್ಲಿ ಸಂಸ್ಕಾರ, ಆಚಾರ, ವಿಚಾರ ಇದ್ದರೆ ಸುಸಂಸ್ಕೃತ ಬದುಕು ಸಾಧ್ಯ. ಸಮಾಜದಲ್ಲಿ ಆತ್ಮಬಂಧು ವ್ಯವಸ್ಥೆಯಾಗಬೇಕು. ನಮ್ಮತನವನ್ನು ಉಳಿಸಬೇಕು ಎಂದು ಜ್ಯೋತಿಷಿ ಶ್ರೀರಂಗ ಐತಾಳ್ ಹೇಳಿದರು.
ಕಾರ್ಯಕಾರಿ ಸಮಿತಿ ಸದಸ್ಯ ಪ್ರಸನ್ನ ಇರುವೈಲು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಗೋಪಾಲಕೃಷ್ಣ ಮಯ್ಯ ವಂದಿಸಿದರು. ರಂಗನಾಥ ಐತಾಳ್ ಹಾಗೂ ಪ್ರವೀಣ್ ಮಯ್ಯ, ಸಿಎ ಚಂದ್ರಮೋಹನ್ ಸನ್ಮಾನ ಪತ್ರ ವಾಚಿಸಿದರು.
ಕೋಶಾಧಿಕಾರಿ ಪದ್ಮನಾಭ ಮಯ್ಯ, ಸಂಘಟನಾ ಕಾರ್ಯದರ್ಶಿ ಕೃಷ್ಣ ಮಯ್ಯ, ಗಣೇಶ್ ಪ್ರಸಾದ್ ಎಮ್ಮೆಕೆರೆ, ಮೆನೇಜರ್ ಶಿವರಾಮ ರಾವ್, ಶ್ರೀನಿವಾಸ ಐಗಲ್, ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ಲಲಿತಾ ಉಪಾಧ್ಯಾಯ, ಕಾರ್ಯದರ್ಶಿ ಪಂಕಜ ಐತಾಳ್, ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ ಮಯ್ಯ, ಹಿರಿಯರಾದ ಶಿವರಾಮಯ್ಯ ಮೊದಲಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ