ಮಂಗಳೂರು: "ಈ ಅದ್ಭುತ ಸೃಷ್ಟಿಯಲ್ಲಿ ನಮಗೆ ಅರಿವಿನ ಮೂಲವನ್ನು ತೋರಿಸಿ ನಡೆಸುವವನೇ ಗುರು. ಎಲ್ಲಾ ಕಾಲಘಟ್ಟದಲ್ಲೂ ಗುರುವಿನ ಸ್ಥಾನ ಉಲ್ಲೇಖನೀಯವೇ ಆಗಿದೆ. ಮನಸ್ಸಿಗೆ ಕವಿದ ಮಂಜನ್ನು ಒರೆಸಿ ಬೆಳಕಿನೆಡೆಗೆ ಗುರು ಒಯ್ಯುತ್ತಾನೆ. ಏಕಾಕ್ಷರಂ ಕಲಿಸಿದಾತಂ ಗುರು ಎಂಬ ಮಾತಿದೆ. ಅಂತೆಯೇ ನಮ್ಮ ಜೀವನದಲ್ಲೂ ಅನೇಕ ಕಡೆ ಅನೇಕ ಗುರುಗಳು ಮಾರ್ಗದರ್ಶನ ನೀಡುತ್ತಾರೆ. ಅಂತಹ ಗುರು ಸ್ಥಾನವನ್ನು ಗೌರವಿಸುವುದು ನಮಗೆ ಹೆಮ್ಮೆ" ಎಂದು ಶ್ರೀರಾಮ ಕ್ಷತ್ರಿಯ ಸೇವಾ ಸಮಿತಿಯ ಅಧ್ಯಕ್ಷ ಮುರಳೀಧರ ಚಂದ್ರಗಿರಿ ಹೇಳಿದರು.
ಅವರು ಶ್ರೀರಾಮ ಕ್ಷತ್ರಿಯ ಮಹಿಳಾ ಯಕ್ಷ ವೃಂದದ ವತಿಯಿಂದ ಜರಗಿದ ಗುರುವಂದನಾ ಕಾರ್ಯಕ್ರಮದಲ್ಲಿ ಗುರುವಿನ ಮಹತ್ವವನ್ನು ವಿವರಿಸಿದರು.
ಶ್ರೀರಾಮ ಕ್ಷತ್ರಿಯ ಮಹಿಳಾ ವೃಂದದ ಅಧ್ಯಕ್ಷೆ ವಿದ್ಯಾ ನಾಗರಾಜ್ ಕೂಡಾ ಗುರುಪೂರ್ಣಿಮೆಯ ಮಹತ್ವದ ಸಂದೇಶ ನೀಡಿದರು. ಶ್ರೀರಾಮಕ್ಷತ್ರಿಯ ಮಹಿಳಾ ಯಕ್ಷ ವೃಂದದ ಸಂಧ್ಯಾ ದಿನೇಶ್ ಪ್ರಾರ್ಥಿಸಿದರು. ಕಲ್ಪನಾ ವೆಂಕಟೇಶ್ ಸ್ವಾಗತಿಸಿದರು. ಅಧ್ಯಕ್ಷೆ ವಾರಿಜಾ ಕೊರಗಪ್ಪ ಧನ್ಯವಾದ ಸಲ್ಲಿಸಿದರು. ಶ್ರೀಮತಿ ಶಾಲಿನಿ ರಾಮಚಂದ್ರ, ಜಯಲಕ್ಷ್ಮೀ ನರಸಿಂಹ ಹಾಗೂ ಗಾಯತ್ರಿ ಯೋಗೀಶ್ ರವರು ಸನ್ಮಾನ ನಡೆಸಿಕೊಟ್ಟರು.
ಯಕ್ಷ ಭಾಗವತ ಯೋಗೀಶ್ ಕುಮಾರ್, ಜೆಪ್ಪು ಹಾಗೂ ನಾಟ್ಯ ಗುರು ರವಿ ಅಲೆವೂರಾಯ ವರ್ಕಾಡಿಯವರನ್ನು ಗೌರವಿಸಿ ಸನ್ಮಾನಿಸಲಾಯಿತು. ಭಿಕ್ಷು ಲಕ್ಷ್ಮಣಾನಂದ ಸಭಾಭವನದಲ್ಲಿ ಶನಿವಾರ (ಜು.12) ಈ ಕಾರ್ಯಕ್ರಮವು ಜರಗಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ