ಕಲಬುರಗಿ: ಜುಲೈ 28ಕ್ಕೆ ಹರಿದಾಸ್ ಹಾರ್ಟ್ ಆಸ್ಪತ್ರೆಗೆ ಚಾಲನೆ

Chandrashekhara Kulamarva
0

ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಅವರಿಂದ ಉದ್ಘಾಟನೆ




ಕಲಬುರಗಿ: ಹೃದ್ರೋಗ ಚಿಕಿತ್ಸಾರಂಗದಲ್ಲಿ ಖ್ಯಾತನಾಮರಾದ ಮೂಲತಃ ಕಲಬುರಗಿಯ ಡಾ. ಅರುಣ್ ಕುಮಾರ್ ಹರಿದಾಸ್ ಅವರು ನೂತನವಾಗಿ ಆರಂಭಿಸುವ "ಹರಿದಾಸ್ ಹಾಟ್ ಹಾಸ್ಪಿಟಲ್"ನ್ನು ಜುಲೈ 28ರಂದು ವಿಧಾನಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ್ ಲೋಕಾರ್ಪಣೆ ಗೊಳಿಸಲಿದ್ದಾರೆ.


ಕಲಬುರಗಿ ನಗರದ ಜವಳಿ ಕಾಂಪ್ಲೆಕ್ಸ್ ನಲ್ಲಿ 20 ಬೆಡ್‌ಗಳ ಸೌಲಭ್ಯ ಹೊಂದಿದ ಅತ್ಯಾಧುನಿಕ ತಂತ್ರಜ್ಞಾನದ ವೈದ್ಯಕೀಯ ಸವಲತ್ತುಗಳೊಂದಿಗೆ ಜುಲೈ 28 ರಂದು ಸೋಮವಾರ ಸಂಜೆ 6 ಗಂಟೆಗೆ ಶುಭಾರಂಭಗೊಳ್ಳುವ ಹೃದ್ರೋಗ ಆಸ್ಪತ್ರೆಯ ಮೂಲಕ ಈ ಭಾಗದ ಜನರಿಗೆ ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಸಿಗಲಿದೆ ಮತ್ತು ಪರಿಣಿತರ ತಂಡವನ್ನು ಒಳಗೊಂಡ ಆಸ್ಪತ್ರೆ ಇದಾಗಿದೆ ಎಂದು ಹೃದ್ರೋಗ ಶಸ್ತ್ರ ಚಿಕಿತ್ಸಾ ತಜ್ಞ ಡಾ. ಅರುಣ್ ಕುಮಾರ್ ಹರಿದಾಸ್ ತಿಳಿಸಿದ್ದಾರೆ.


ಇಂಗ್ಲೆಂಡ್, ಬೆಂಗಳೂರು, ಹೈದರಾಬಾದ್ ಹಾಗೂ ಗುಜರಾತಿನಲ್ಲಿ ಸೇವೆ ಸಲ್ಲಿಸಿ ಇದೀಗ ಸ್ವಂತ ಊರಿನಲ್ಲಿ ಸೇವೆಗೆ ಲಭ್ಯವಾಗಬೇಕೆಂಬ ಮಹಾದಾಸೆಯನ್ನು ಹೊತ್ತು ಈ ಭಾಗದಲ್ಲಿ  ಆರೋಗ್ಯರಂಗಕ್ಕೆ ನೆರವಾಗಲು ಅತ್ಯಾಧುನಿಕ  ಸೌಲಭ್ಯಗಳ ಆಸ್ಪತ್ರೆಯನ್ನು ತೆರೆಯುವ ಕನಸು ಸಾಕಾರಗೊಳ್ಳುತ್ತಿದೆ, ತುರ್ತು ಐಸಿಯು, ಹೃದಯ, ಶ್ವಾಸಕೋಶ, ನರರೋಗ, ಮೂತ್ರಪಿಂಡ, ಕ್ಯಾನ್ಸರ್, ಮಕ್ಕಳ ರೋಗ, ಪ್ರಸೂತಿ ವಿಭಾಗ, ಚರ್ಮರೋಗ, ಮನೋರೋಗ ಅಂಡಾಶಯ ಸಮಸ್ಯೆ ಮುಂತಾದ ಎಲ್ಲಾ ವಿಭಾಗಗಳಲ್ಲಿ ತಜ್ಞ ವೈದ್ಯರಿಂದ ಚಿಕಿತ್ಸಾ ಸೇವೆಯು ಲಭ್ಯವಾಗಲಿದೆ. ಮಾತ್ರವಲ್ಲದೆ ಶಸ್ತ್ರ ಚಿಕಿತ್ಸೆ ಸೇರಿದಂತೆ ಎಲ್ಲ ರೀತಿಯ ಸೇವೆ ಸಿಗಲಿದೆ ಎಂದು ಡಾ. ಅರುಣ್ ಕುಮಾರ್ ಹರಿದಾಸ್ ಹೇಳಿದರು.


ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಂ, ಕೆಕೆಆರ್ ಟಿಸಿ ಎಂಡಿ ಬಿ ಸುಶೀಲಾ ಉದ್ಯಮಿಗಳಾದ ರಾಘವೇಂದ್ರ ಮೈಲಾಪುರ, ವೆಂಕಟೇಶ ಕಡೇಚೂರ್, ಎಚ್ ಕೆ ಇಎಸ್ ನ ಮಾಜಿ ಸದಸ್ಯ ನಿತಿನ್ ಬಿ. ಜವಳಿ, ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಹಾಗೂ ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಬಸಪ್ಪ ಖ್ಯಾತನಾಳ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top