ಆಟಿಡೊಂಜಿ ಕೆಸರ್ದ ಗೊಬ್ಬು 2025; ಸುಮಂತ್ ಕುಮಾರ್ ಜೈನ್ ಇವರಿಗೆ ಗೌರವಾರ್ಪಣೆ

Upayuktha
0


ಗುರುವಾಯನಕೆರೆ: ಶ್ರೀ ಕ್ಷೇತ್ರ ಧರ್ಮಸ್ಥಳ ರೂರಲ್ ಡೆವಲಪ್ಮೆಂಟ್ ಪ್ರಾಜೆಕ್ಟ್ (ಬಿ.ಸಿ ಟ್ರಸ್ಟ್ (ರಿ), ಎಸ್.ಡಿ.ಎಂ ಭಜನಾ ಪರಿಷತ್ ಹಾಗೂ ಪ್ರಗತಿ ಭಂಧು ಸ್ವ ಸಹಾಯ ಸಂಘಗಳ ಒಕ್ಕೂಟ, ಗುರುವಾಯನಕೆರೆ ಜಂಟಿಯಾಗಿ 20-07-2025ರಂದು ಆಯೋಜಿಸಿದ್ದ ಆಟಿಡೊಂಜಿ ಕೆಸರ್ದ ಗೊಬ್ಬು 2025 ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ರೂರಲ್ ಡೆವಲಪ್ಮೆಂಟ್ ಪ್ರಾಜೆಕ್ಟ್ (ಬಿ.ಸಿ ಟ್ರಸ್ಟ್ (ರಿ), ಇದರ ನಿರ್ದೇಶಕ ದಿನೇಶ್ ಕುಮಾರ್ ಇವರ ಸೂಚನೆಯಂತೆ ಇತ್ತೀಚೆಗೆ ಎಕ್ಸೆಲ್ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಎಕ್ಸೆಲ್ ಶಿಕ್ಷಣ ಸಂಸ್ಥೆಯ ಗೌರವಾನ್ವಿತ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಇವರನ್ನು ಭೇಟಿಮಾಡಿ ಅವರಿಗೆ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಲಭಿಸಿದ “ವಿಜಯ ರತ್ನ” ಪ್ರಶಸ್ತಿ ಪಡೆದುದಕ್ಕಾಗಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ರೂರಲ್ ಡೆವಲಪ್ಮೆಂಟ್ ಪ್ರಾಜೆಕ್ಟ್ (ಬಿ.ಸಿ ಟ್ರಸ್ಟ್ (ರಿ), ಗುರುವಾಯನಕೆರೆ ವಲಯದ ಯೋಜನಾಧಿಕಾರಿ  ಅಶೋಕ್ ಕುಮಾರ್, ಎಸ್.ಡಿ.ಎಂ ಭಜನಾ ಪರಿಷತ್ ಗುರುವಾಯನಕೆರೆ ವಲಯದ ಕಾರ್ಯದರ್ಶಿ ಸಂದೇಶ್ ಮದ್ದಡ್ಕ, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ಸದಸ್ಯರು ಎಸ್.ಡಿ.ಎಂ ಐ.ಟಿ.ಐ ಪ್ರಾಂಶುಪಾಲ ವಿ ಪ್ರಕಾಶ್ ಕಾಮತ್ ಮತ್ತು ಎಸ್.ಡಿ.ಎಂ ಭಜನಾ ಪರಿಷತ್ ನ ಗುರುಗಳು ಹಾಗೂ ಶೌರ್ಯ ತಂಡದ ನಾಗೇಶ್ ಇವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top