ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಗುರು

Upayuktha
0

ಶಿಷ್ಯನಿಗೆ ಜ್ಞಾನ ನೀಡಿ ಅವನಿಂದ ಸಾಧನೆ ಮಾಡಿಸಿಕೊಂಡು ಉದ್ಧಾರ ಮಾಡುವ ಗುರುಗಳ ಹಿರಿಮೆ.



ಗುರು ಎಂಬ ಸಂಜ್ಞೆಯ ಉತ್ಪತ್ತಿ ಹಾಗೂ ಅರ್ಥ

ಶ್ರೀ ಗುರುಗೀತೆಯಲ್ಲಿ ಗುರು ಎಂಬ ಶಬ್ದದ ಅರ್ಥಕ್ಕೆ ಅನೇಕ ಉತ್ಪತ್ತಿಗಳನ್ನು ನೀಡಲಾಗಿದೆ, ಗುಕಾರಸತ್ತ್ವನಂಧಕಾರಶ್ಚ ರುಕಾರಸ್ತೇಜ ಉಚ್ಯತೆ | ಅಜ್ಞಾನಗ್ರಾಸಕಂ ಬ್ರಹ್ಮ ಗುರುರೇವ ನ ಸಂಶಯಃ || - ಗುರುಗೀತೆ, ಶ್ಲೋಕ 29


ಗುರು ಶಬ್ದದಲ್ಲಿನ ಗು ಎಂಬ ಅಕ್ಷರವೆಂದರೆ ಕತ್ತಲೆ (ಅಜ್ಞಾನ) ಹಾಗೂ ರು ಎಂಬ ಅಕ್ಷರವೆಂದರೆ ಪ್ರಕಾಶ (ಜ್ಞಾನ) ವಾಗಿದೆ, ಎಂದು ಹೇಳಲಾಗಿದೆ. ಗುರು ಇವರೇ ಅಜ್ಞಾನವನ್ನು ಇಲ್ಲದಂತೆ ಮಾಡುವ ಬ್ರಹ್ಮರಾಗಿದ್ದಾರೆ, ಇದರಲ್ಲಿ ಅನುಮಾನವೇ ಇಲ್ಲ.


1. ಆಗಮಸಾರದಲ್ಲಿ ಗುರು ಎಂಬ ಶಬ್ದದಲ್ಲಿನ ಮೂರು ವರ್ಣಗಳ ಅರ್ಥವನ್ನು ಈ ಕೆಳಗಿನಂತೆ ಹೇಳಲಾಗಿದೆ.

ಗಕಾರಃ ಸಿದ್ಧಿದಃ ಪ್ರೋಕ್ತೋ ಪಾಪಸ್ಯ ಹಾರಕಃ | ಉಕಾರೋ ವಿಷ್ಣುರವ್ಯಕ್ತಸ್ತ್ರಿತಯಾತ್ಮಾ ಗುರುಃ ಪರಃ ||

ಅರ್ಥ : ಗುರು ಎಂಬ ಶಬ್ದದಲ್ಲಿ ಗ, ರ ಹಾಗೂ ಉ ಎಂಬ ಮೂರು ವರ್ಣಗಳಿದೆ. ಅವುಗಳಲ್ಲಿ ಗ ಕಾರವು ಸಿದ್ಧಿ ನೀಡುವಂತಹದ್ದು ರ ಕಾರವು ಪಾಪಹರಣ ಮಾಡುವ ಹಾಗೂ ಉ ಕಾರ ಇದು ಅವ್ಯಕ್ತ ವಿಷ್ಣುವಾಗಿದೆ. ಗುರು ಈ ಮೇಲಿನ ಮೂರು ಶ್ರೇಷ್ಠ ವಿಷಯಗಳನ್ನು ಒಳಗೊಂಡಿರುವಂತಹವರಾಗಿದ್ದಾರೆ.


ಇ. ಗ, ಉ ಹಾಗೂ ರ ಇದು ಬ್ರಹ್ಮಾ, ವಿಷ್ಣು ಹಾಗೂ ಮಹೇಶ್ವರನ ದರ್ಶಕವಾಗಿದೆ. ಗ ಇದು ವ್ಯಕ್ತ ಜೀವಸ್ವರೂಪ, ಆಜ್ಞಾನಮೂಲವಾಗಿದೆ. ಉ ಇದು ಆತ್ಮದರ್ಶಕ ವಿಷ್ಣುಸ್ವರೂಪವಾಗಿದೆ. ಅದು ಸ್ಪಷ್ಟವಾಗಲು ರ ಇದು ಅಗ್ನಿಸ್ವರೂಪವಾಗಿದೆ. ಗುರುತತ್ತ್ವವು ಜೀವದಲ್ಲಿನ ಅಜ್ಞಾನವನ್ನು ಜ್ಞಾನದ ಮೂಲಕ, ತಮ್ಮ ಶಕ್ತಿಯ ಮೂಲಕ ಇಲ್ಲವಾಗಿಸಿ ಸಾಧಕರಿಗೆ ಆತ್ಮಸ್ವರೂಪದ ಪರಿಚಯ ಮಾಡಿಸಿಕೊಡುತ್ತದೆ.


ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ| ಚಕ್ಷುರುನ್ಮೀಲಿತಂ ಯೇನ ತಸ್ಮೈಶ್ರೀ ಗುರವೇ ನಮಃ || - ಗುರುಗೀತಾ, ಶ್ಲೋಕ 59.


ಅರ್ಥ : ಅಜ್ಞಾನರೂಪದ ಕತ್ತಲೆಯಿಂದ ಕುರುಡಾಗಿರುವ ಜೀವದ ಕಣ್ಣುಗಳಿಗೆ ಯಾರು ಜ್ಞಾನರೂಪದ ಅಂಜನವನ್ನು ಹಾಕಿ ದಿವ್ಯ ಚಕ್ಷುಗಳನ್ನು ತೆರೆಯುವಂತೆ ಮಾಡಿ ಅವನಿಗೆ ಆತ್ಮಸ್ವರೂಪದ ಮಹಾನಿಧಿ ತೋರಿಸಿದರೋ, ಅಂತಹ ಶ್ರೀಗುರುಗಳಿಗೆ ನಮಸ್ಕಾರವಿರಲಿ. ಗುರುಗಳು ಅಜ್ಞಾನರೂಪದ ಅಂಧಃಕಾರವನ್ನು ಜ್ಞಾನರೂಪದ ಅಂಜನದಿಂದ ಇಲ್ಲವಾಗಿಸುವರು; ಆದ್ದರಿಂದಲೇ ಗುರುಗಳ ಬಳಿ ಕುಳಿತುಕೊಂಡು ಶಿಷ್ಯನು ನಮ್ರತೆ, ಜಿಜ್ಞಾಸೆ ಹಾಗೂ ಸೇವೆಯ ಮೂಲಕ ಅವರ ಬಳಿಯಿರುವ ಜ್ಞಾನಾಮೃತವನ್ನು ಕುಡಿದು ತೃಪ್ತಗೊಳ್ಳುತ್ತಾನೆ ಹಾಗೂ ಎಲ್ಲಾ ಭ್ರಮೆ, ಅಜ್ಞಾನ ನಿವಾರಣೆಯಾದ ಕಾರಣ ಅವನಿಗೆ ಸತ್ಯದರ್ಶನದ ಲಾಭ ಸಿಗುತ್ತದೆ.


ಈ. ಭಾರತೀಯ ಸಂಸ್ಕೃತಿಯು ಆದರ್ಶವಾಗಿರುವ ಗುರುಪರಂಪರೆಯನ್ನು ಜೋಪಾಸನೆ ಮಾಡಿದೆ. ಆದ್ದರಿಂದ ಮಹಾನ್ ಸತ್ಪುರುಷರು ನಿರ್ಮಾಣಗೊಂಡರು. ಅಧ್ಯಾತ್ಮ ವಿದ್ಯೆಯು ಆತ್ಮದರ್ಶನ ಮಾಡಿಸಿಕೊಡುವಂತಹದ್ದಾಗಿದೆ. ಅದನ್ನು ಗುರುವು ಶಿಷ್ಯನಿಗೆ ಪರಿಚಯಿಸಿಕೊಡುತ್ತಾನೆ. ಅವನಿಗೆ ಅದರ ಮೂಲಕ ಈಶ್ವರನ ಪರಿಚಯವಾಗುತ್ತದೆ. ಜೀವನವು ಒಂದು ಕಲೆಯಾಗಿದೆ. ಆ ಮೂಲಕ ಶಿಷ್ಯನ ಜೀವನವು ಸರ್ವಾಂಗಸುಂದರವಾಗುತ್ತದೆ. ಅಂತಹ ಗುರುಗಳಲ್ಲಿ ಮಹರ್ಷಿ ವ್ಯಾಸರು ಸರ್ವಶ್ರೇಷ್ಠ ಗುರುಗಳೆಂದು ಪರಿಗಣಿಸಲ್ಪಟ್ಟಿದ್ದಾರೆ; ಆದ್ದರಿಂದಲೇ ಆಷಾಢ ಹುಣ್ಣಿಮೆಯನ್ನು ವ್ಯಾಸಪೂರ್ಣಿಮಾ ಎಂದು ಸಹ ಕರೆಯುತ್ತಾರೆ. ಆ ದಿನದಂದು ಗುರುಗಳ ಪೂಜೆ ಮಾಡುತ್ತಾರೆ.


ಗುರುಪ್ರಾಪ್ತಿ ಹೇಗೆ ಆಗುತ್ತದೆ ?

ಭಗವಂತನು ಮಾನವನಿಗೆ ಭಗವತ್‌ಪ್ರಾಪ್ತಿಗೋಸ್ಕರ ಮಾನವ ದೇಹವನ್ನು ನೀಡಿದ್ದಾನೆ. ಜೀವವು ತಾಯಿಯ ಹೊಟ್ಟೆಯಲ್ಲಿರುವ ಸಮಯದಲ್ಲಿ ಅದಕ್ಕೆ ಭಗವಂತನ ಬಗ್ಗೆ ಸ್ಮೃತಿಯಿರುತ್ತದೆ. ಆಗ ಅವನು ಭಗವಂತನನ್ನು ಪ್ರಾರ್ಥಿಸುತ್ತಿರುತ್ತಾನೆ, ಹೇ ಭಗವಂತಾ, ನನ್ನನ್ನು ಈ ಗರ್ಭಾಶಯದ ಸಂಕಟದಿಂದ ಆದಷ್ಟು ಬೇಗ ಮುಕ್ತ ಮಾಡು. ಯಾವುದರ ಮೂಲಕ ನನಗೆ ನಿನ್ನ ಸತತ ಸ್ಮರಣೆಯಿರುವುದು ಮತ್ತು ಯಾವುದರಿಂದ ನಾನು ಜನ್ಮ ಮೃತ್ಯುವಿನ ಚಕ್ರದಿಂದ ಮುಕ್ತವಾಗುವೆನು, ಅಂತಹ ನಿನ್ನನ್ನು ನಾನು ಹೊರಗೆ ಬಂದ ಮೇಲೆ ಪ್ರತಿನಿತ್ಯ ಸ್ಮರಿಸುತ್ತೇನೆ. 


ಆದರೆ ಯಾವಾಗ ಆ ಜೀವವು ಮಾತೆಯ ಉದರದಿಂದ ಹೊರಗೆ ಬರುತ್ತದೋ, ಆಗ ಅದು ಮಾಯೆಯಿಂದಾಗಿ ಬದ್ಧವಾಗುತ್ತದೆ. ಅದಕ್ಕೆ ತಾನು ಭಗವಂತನಿಗೆ ನೀಡಿರುವ ವಚನವು ಮರೆತು ಹೋಗುತ್ತದೆ. ಅವನು ಅವನ ಕುಟುಂಬ ಹಾಗೂ ಸಮಾಜದ ಸ್ಥಿತಿಗೆ ತಕ್ಕಂತೆ ಅದೇ ಸತ್ಯ ವಾಗಿದೆ, ಎಂದು ತಿಳಿದು ಅದರಂತೆ ವರ್ತಿಸಲು ಪ್ರಾರಂಭಿಸುತ್ತಾನೆ; ಒಂದುವೇಳೆ ಪೂರ್ವಜನ್ಮದ ಪುಣ್ಯಫಲವಿದ್ದರೆ ಅವನಿಗೆ ಇದೇ ಜನ್ಮದಲ್ಲಿಯೇ ಯೋಗ್ಯರಾದ ಗುರುಗಳು ಸಿಗುತ್ತಾರೆ ಹಾಗೂ ಅವರು ಅವನಿಗೆ ಮಾರ್ಗದರ್ಶನ ನೀಡಿ ಧರ್ಮಶಾಸ್ತ್ರದಂತೆ ಸಾಧನೆ ಮಾಡಲು ಹೇಳುತ್ತಾರೆ.


-ವಿನೋದ ಕಾಮತ್

ರಾಜ್ಯ ವಕ್ತಾರರು, ಸನಾತನ ಸಂಸ್ಥೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top