ಪಣಜಿ: ಕಳೆದ ಎರಡು ವರ್ಷಗಳಿಂದ ಗೋವಾ ರಾಜ್ಯದಲ್ಲಿ ನಡೆಸಿಕೊಂಡು ಬಂದಿರುವಂತೆಯೇ ಪ್ರಸಕ್ತ ವರ್ಷವೂ ಕೂಡ ರಾಷ್ಟ್ರ ಕಲ್ಯಾಣದ ಸಂಕಲ್ಪವನ್ನಿಟ್ಟುಕೊಂಡು ಶ್ರೀ ಮಂಜುನಾಥ ಭಟ್ ರವರ ಆರ್ಷವಿದ್ಯಾ ಟ್ರಸ್ಟ್ (ರಿ) ವತಿಯಿಂದ ಜುಲೈ 20 ರಂದು ಭಾನುವಾರ ಗೋವಾದ ಸಾವರ್ಡೆ ಕುಡಚಡೆಯ ಶ್ರೀ ಸಾಂತೇರಿ ಸಂಸ್ಥಾನ ಶಳವಣದಲ್ಲಿ ಆಯುಷ್ಮಾನ್ ಭವ ವಿಜಯಿ ಭವದ 325 ನೇ ಅನುಷ್ಠಾನ- ಶ್ರೀಸೂಕ್ತ ಪುರುಷ ಸೂಕ್ತ ಹವನ, ವಾಸುದೇವ ಮಂತ್ರ ಹವನ, ಆದಿತ್ಯಹೃದಯ ಸ್ತೋತ್ರ ಪಾರಾಯಣ, ಮಾತೆಯರಿಂದ ಕುಂಕುಮಾರ್ಚನೆ ಕಾರ್ಯಕ್ರಮ ಸುಸಂಪನ್ನವಾಯಿತು.
ದೇಶದ ಕಲ್ಯಾಣಕ್ಕಾಗಿ ಆರ್ಷವಿದ್ಯೆಯ ಉಳಿವಿಗಾಗಿ ಕಳೆದ ಎರಡು ವರ್ಷಗಳಿಂದ ಗೋವಾ ರಾಜ್ಯದಲ್ಲಿ ನಡೆಸಿಕೊಂಡು ಬಂದಿರುವಂತೆಯೇ ಪ್ರಸಕ್ತ ವರ್ಷವೂ ಕೂಡ ರಾಷ್ಟ್ರ ಕಲ್ಯಾಣದ ಸಂಕಲ್ಪವನ್ನು ಇಟ್ಟುಕೊಂಡು ವೈದಿಕ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಗೋವಾದಲ್ಲಿ ನೆಲೆಸಿರುವ ವೈದಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮದ ದಿನ ದೇವತಾ ಕಾರ್ಯದಲ್ಲಿ ಭಾಗಿಯಾದರು.
ಕಾರ್ಯಕ್ರಮದಲ್ಲಿ ಶ್ರೀಸೂಕ್ತ, ಪುರುಷಸೂಕ್ತ, ಆದಿತ್ಯ ಹೃದಯ ಪಾರಾಯಣ, ಮಾತೆಯರಿಂದ ಕುಂಕುಮಾರ್ಚನೆ ಸೇವೆ ಸಲ್ಲಿಸಲಾಯಿತು. ಕಾರ್ಯಕ್ರಮಕ್ಕೆ ಹತ್ತಾರು ಜನ ಬ್ರಾಹ್ಮಣರು ಧಾರ್ಮಿಕ ಪೂಜಾ ವಿಧಾನದಲ್ಲಿ ಪಾಲ್ಗೊಂಡರು. ಊಟ,ತಿಂಡಿ, ಕಾರ್ಯಕ್ರಮದ ತಯಾರಿ, ಹೀಗೆ ಹತ್ತಾರು ರೀತಿಯಲ್ಲಿ ಗೋವಾದಲ್ಲಿರುವ ವೈದಿಕರು ಮತ್ತು ಕರ್ನಾಟಕದಿಂದ ಆಗಮಿಸಿದ ವೈದಿಕರು ಸೇವಾ ಕಾರ್ಯ ಕೈಗೊಂಡರು.
ಗೋಪಾಲಕೃಷ್ಣ ಭಟ್ ಗಂಗೆಮನೆ ದಂಪತಿಗಳು ಈ ಕಾರ್ಯಕ್ರಮದ ಯಜಮಾನತ್ವ ಸ್ವೀಕರಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ